ನವದೆಹಲಿ: New Covid-19 Variant - ಭಾರತದಲ್ಲಿ ಕೊರೊನಾ ವೈರಸ್ ನ ಎರಡನೇ ಅಲೆಯ ಪ್ರಕೋಪ ಮುಗಿಯುವ ಲಕ್ಷಣಗಳೆ ಗೋಚರಿಸುತ್ತಿಲ್ಲ. ಏತನ್ಮಧ್ಯೆ ಹೊಸದೊಂದು ಅಪಾಯ ಎದುರಾಗಿದೆ. ಪುಣೆ ಮೂಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಲಾಜಿ ಕೊವಿಡ್-19 ವೈರಸ್ ನ ಹೊಸ ವೇರಿಯಂಟ್ B.1.1.28.2 ಅನ್ನು ಪತ್ತೆ ಹಚ್ಚಿದೆ. ಈ ರೂಪಾಂತರಿ ಬ್ರಿಟನ್ (Britain) ಹಾಗೂ ಬ್ರೆಜಿಲ್ (Brazil)ನಿಂದ ಭಾರತಕ್ಕೆ ಬಂದ ಜನರಲ್ಲಿ ದೊರೆತಿದೆ.


COMMERCIAL BREAK
SCROLL TO CONTINUE READING

ಗಂಭೀರ ಸೋಂಕಿನ ಅಪಾಯ
ಕೊರೊನಾ ವೈರಸ್ ನ ಈ ರೂಪಾಂತರಿಯನ್ನು ಹೆಚ್ಚು ಮಾರಕ ಎನ್ನಲಾಗುತ್ತಿದೆ. ಏಕೆಂದರೆ ಈ ಸೋಂಕು ರೋಗಿಗಳಲ್ಲಿ ಗಂಭೀರ ಲಕ್ಷಣಗಳನ್ನು ತೋರಿಸಬಹುದು. NIV ತನಿಖೆಯ ಪ್ರಕಾರ, ಈ ವೇರಿಯಂಟ್ ಜನರಲ್ಲಿ ಗಂಭೀರ ಕಾಯಿಲೆಯನ್ನುಂಟು ಮಾಡುವ ಸಾಧ್ಯತೆ ಇದೆ ಎಂದಿದೆ.


ಇನ್ನೊಂದೆಡೆ NIV ನಡೆಸಿರುವ ಮತ್ತೊಂದು ಅಧ್ಯಯನವು, Covaxin ವ್ಯಾಕ್ಸಿನ್ ಈ ರೂಪಾಂತರಿ ವೈರಸ್ (Brazil-Britain Variant) ವಿರುದ್ಧ ಪ್ರಭಾವಶಾಲಿಯಾಗಿದೆ ಎಂದಿದೆ. ಅಧ್ಯಯನದ ಪ್ರಕಾರ ಈ ವ್ಯಾಕ್ಸಿನ್ ನ ಎರಡು ಡೋಸ್ ಗಳಿಂದ ಉತ್ಪತ್ತಿಯಾಗುವ ಆಂಟಿಬಾಡಿಗಳು (Antibodies) ಈ ರೂಪಾಂತರಿಯನ್ನು ಮಟ್ಟಹಾಕಬಲ್ಲವು ಎಂದು ಹೇಳಿದೆ.


ಈ ಸೋಂಕಿಗೆ ಗುರಿಯಾದವರಲ್ಲಿ 7 ದಿನಗಳಲ್ಲಿ ಅವರ ದೇಹದ ತೂಕ ಭಾರಿ (Weight Loss) ಪ್ರಮಾಣದಲ್ಲಿ ಇಳಿಕೆಯಾಗುತ್ತದೆ ಎನ್ನಲಾಗಿದೆ(Covid-19 New Variant Symptoms). ಜೊತೆಗೆ ಶರೀರದಲ್ಲಿರುವ ಆಂಟಿ ಬಾಡಿಗಳಿಗೂ ಕೂಡ ಈ ರೂಪಾಂತರಿಯಿಂದ (Covid-19) ಅಪಾಯವಿದೆ ಹಾಗೂ ಆಂಟಿಬಾಡಿಗಳು ಸತತವಾಗಿ ಕಡಿಮೆಯಾಗುತ್ತವೆ. ಎಲ್ಲಕ್ಕಿಂತ ಮೊದಲು ಈ ವೇರಿಯಂಟ್ ಬ್ರೆಜಿಲ್ ನಲ್ಲಿ ಕಾಣಿಸಿಕೊಂಡಿತ್ತು ಹಾಗೂ ಅಲ್ಲಿಂದಲೇ ಇದರ ಎರಡು ರೂಪಾಂತರಿಗಳು ಭಾರತವನ್ನು(India) ಪ್ರವೇಶಿಸಿವೆ. ಆದರೆ, ಎರಡನೇ ವೇರಿಯಂಟ್ ಪ್ರಕರಣಗಳು ಹೆಚ್ಚಾಗಿಲ್ಲ ಎನ್ನಲಾಗಿದೆ.


ಇದನ್ನೂ ಓದಿ-China ಅಸಲ್ಲಿಯತ್ತು ಬಹಿರಂಗಪಡಿಸಿದ ಅಮೆರಿಕಾದ ವರದಿ, ಕೊರೊನಾ ವುಹಾನ್ ಲ್ಯಾಬ್ ನಿಂದಲೇ ಸೋರಿಕೆ!


ವ್ಯಾಕ್ಸಿನ್ ನಲ್ಲಿ ಬದಲಾವಣೆ ಅವಶ್ಯಕ
ಇತ್ತೀಚೆಗಷ್ಟೇ ವಿಶ್ವ ಆರೋಗ್ಯ ಸಂಸ್ಥೆ (WHO) ಭಾರತದಲ್ಲಿ ದೊರೆತ ಡೆಲ್ಟಾ ರೂಪಾಂತರಿ ವೈರಸ್ (Coronavirus) 'ಚಿಂತೆ ವಿಷಯ'ವಾಗಿದೆ ಎಂದಿತ್ತು. ಆದರೆ, ಹೊಸದಾಗಿ ಪತ್ತೆಯಾಗಿರುವ ಈ ಹೊಸ ರೂಪಾಂತರಿ ಅದಕ್ಕಿಂತಲೂ ಹೆಚ್ಚು ಅಪಾಯಕಾರಿ ಸಾಬೀತಾಗಲಿದೆಯೇ? ಡೆಲ್ಟಾನಿಂದ ಸೋಂಕಿತ ರೋಗಿಗಳಲ್ಲಿ ಮತ್ತೆ ಸೋಂಕು ಕಾಣಿಸಿಕೊಳ್ಳುವ ಅಪಾಯವಿದೆ ಎನ್ನಲಾಗಿದೆ. ಈ ತರ್ಕಕ್ಕೆ ಈ ರೂಪಾಂತರಿಯೇ ಕಾರಣ ಎಂದು ಭಾವಿಸಲಾಗುತ್ತದೆ.


ಇದನ್ನೂ ಓದಿ-Vaccine: ದಿನದ ಯಾವ ಸಮಯದಲ್ಲಿ ಲಸಿಕೆ ಹಾಕಿಸಿದರೆ ಉತ್ತಮ? ಅಧ್ಯಯನ ಏನ್ ಹೇಳುತ್ತೆ?


ಈ ಹೊಸ ವೇರಿಯಂಟ್ ಕುರಿತು ಹೆಚ್ಚಿನ ಮಾಹಿತಿ ಹೊರಬರುವುದು ಇನ್ನೂ ಬಾಕಿ ಇದೆ. ಒಂದು ವೇಳೆ ಇದರ ಪ್ರಭಾವ ವ್ಯಾಪಕವಾದರೆ ಹೊಸ ಸಮಸ್ಯೆಗಳು  ಹುಟ್ಟುವ ಸಾಧ್ಯತೆಗಳಿವೆ. ಭಾರತದ ಕೊವ್ಯಾಕ್ಸಿನ್ (Covaxin)ಈ ವೇರಿಯಂಟ್ ಮೇಲೆ ಪರಿಣಾಮಕಾರಿ ಎನ್ನಲಾಗುತ್ತಿದೆ. ಆದರೆ ಇದರ ವಿರುದ್ಧ ಹೋರಾಡಲು ವ್ಯಾಕ್ಸಿನ್ ನಲ್ಲಿಯೂ ಕೂಡ ಬದಲಾವಣೆ ಮಾಡುವ ಅವಶ್ಯಕತೆ ಇದೆ. 


ಇದನ್ನೂ ಓದಿ-Coronavirus Vaccine: ಮಹಿಳೆಯರ ಫಲವತ್ತತೆಯ ಮೇಲೆ Corona Vaccine ಪ್ರಭಾವ! ತಜ್ಞರು ಹೇಳುವುದೇನು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.