ನವದೆಹಲಿ: ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ 6E 398 ಇಂಡಿಗೊ ವಿಮಾನವು ಹಾರಾಟಕ್ಕೆ ಇನ್ನೇನು ಸಿದ್ದವಾಗುತ್ತಿರುವ ಸಂದರ್ಭದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ, ತಕ್ಷಣ ಸಮಯ ಪ್ರಜ್ಞೆಮೆರೆದ ಪೈಲೆಟ್ ತಕ್ಷಣ ಅದನ್ನು ಟೆಕ್ ಆಫ್ ಮಾಡದೆ ತಕ್ಷಣ ನಿಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

ರಾಂಚಿಯಿಂದ ದೆಹಲಿಗೆ ಹೊರಟಿದ್ದ ಈ ವಿಮಾನದಲ್ಲಿ 180ಕ್ಕೂ ಅಧಿಕ ಪ್ರಯಾಣಿಕರಿದ್ದರು ಎಂದು ಹೇಳಲಾಗಿದ್ದು, ಆ ಮೂಲಕ ಭಾರಿ ಅನಾಹುತದಿಂದ ಪಾರಾಗಿದೆ ಎಂದು ಪ್ರಭಾತ್ ಖಬರ್ ವರದಿ ಮಾಡಿದೆ.


ನಂತರ ವಿಮಾನ ನಿಲ್ದಾಣದಲ್ಲಿ ಈ ತಾಂತ್ರಿಕ ದೋಷವನ್ನು ಸರಿಪಡಿಸಲು ಎಂಜಿನಿಯರ್ಗಳು ಎರಡು ಗಂಟೆಗೂ ಅಧಿಕ ಸಮಯವನ್ನು ತೆಗೆದುಕೊಂಡಿದ್ದಾರೆ. ಆದ್ದರಿಂದ  ಬೆಳಗ್ಗೆ 9.35 ಗಂಟೆಗೆ ಹೊರಡಬೇಕಾಗಿದ್ದ ವಿಮಾನ ಮಧ್ಯಾಹ್ನದ ಬಳಿಕ ಮಾತ್ರ ಹಾರಲು ಸಾಧ್ಯವಾಯಿತು ತಿಳಿದುಬಂದಿದೆ.