ನವದೆಹಲಿ:ಪೇಮೆಂಟ್ ಬ್ಯಾಂಕ್ ಬಳಸುವ ಗ್ರಾಹಕರೇ ಈಗಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ ಶೀಘ್ರವೇ ಪೇಮೆಂಟ್ ಬ್ಯಾಂಕ್ ವೊಂದು ಬಂದ್ ಆಗಲಿದೆ. ಏಕೆಂದರೆ RBI ಈ ಬ್ಯಾಂಕ್ ನ ಲೈಸನ್ಸ್ ರದ್ದುಗೊಳಿಸುವ ನಿರ್ಣಯ ಕೈಗೊಂಡಿದೆ. ವಿಶ್ವದ ನಂ.1 ಟೆಲಿಕಾಂ ಕಂಪನಿ ವೊಡಾಫೋನ್ ನ ಪೇಮೆಂಟ್ ಬ್ಯಾಂಕ್ ಆಗಿರುವ ಎಮ್-ಪೈಸಾ ಲೈಸನ್ಸ್ ಅನ್ನು RBI ರದ್ದುಗೊಳಿಸಿದೆ. RBI ಕೈಗೊಂಡಿರುವ ಈ ಕ್ರಮದಿಂದ ವೊಡಾಫೋನ್ ತನ್ನ ಎಮ್-ಪೈಸಾ ವ್ಯವಹಾರವನ್ನು ಮುಂದುವರೆಸುವಂತಿಲ್ಲ.  ಅಷ್ಟೇ ಅಲ್ಲ ಅಧಿಕೃತವಾಗಿ ಈ ಕಂಪನಿ ಪೇಮೆಂಟ್ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ಒದಗಿಸುವಂತಿಲ್ಲ. ಇದಕ್ಕೆ ಸಂಬಂಧಿಸಿದಂತೆ RBI ನೋಟಿಸ್ ಕೂಡ ಜಾರಿಗೊಳಿಸಿದೆ.


COMMERCIAL BREAK
SCROLL TO CONTINUE READING

ಗ್ರಾಹಕರಿಗೆ ತೊಂದರೆ
ಈಗಾಗಲೇ ತನ್ನ ಗ್ರಾಹಕರಿಗೆ ಸೂಚನೆ ನೀಡಿರುವ ಈ ಪೇಮೆಂಟ್ ಬ್ಯಾಂಕ್ ಶೀಘ್ರದಲ್ಲಿಯೇ ತನ್ನ ವ್ಯವಹಾರ ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಶೀಗ್ರವೇ ಗ್ರಾಹಕರು ತಮ್ಮ ತಮ್ಮ ಖಾತೆಯಲ್ಲಿನ ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿಕೊಳ್ಳುವಂತೆ ಸೂಚನೆ ನೀಡಿದೆ. ಹೀಗಾಗಿ ಸಮಯವಿರುವಂತೆ ಒಂದು ವೇಳೆ ನೀವು ನಿಮ್ಮ ಖಾತೆಯಿಂದ ಹಣವನ್ನು ವರ್ಗಾಯಿಸದೆ ಹೋದಲ್ಲಿ ನಿಮ್ಮ ಹಣ ಸಿಲುಕಿಕೊಳ್ಳುವ ಸಾಧ್ಯತೆ ಇದೆ.


ಮುಂದಿನ ಮೂರು ವರ್ಷಗಳವರೆಗೆ ನೀವು ನಿಮ್ಮ ಹಣ ಕ್ಲೇಮ್ ಮಾಡಬಹುದು
ವೊಡಾಫೋನ್ M-ಪೈಸಾ ಗ್ರಾಹಕರು ಹಾಗೂ ವರ್ತಕರು POS ಅಡಿ ತಮ್ಮ ಹಣಕ್ಕಾಗಿ ಕ್ಲೇಮ್ ಮಾಡಬಹುದು. ಆದರೆ, ಇದಕ್ಕಾಗಿ ಮೂರು ವರ್ಷಗಳ ಕಾಲಾವಧಿ ನೀಡಲಾಗಿದೆ. ಈ ಪೇಮೆಂಟ್ ಬ್ಯಾಂಕ್ ನ ಲೈಸನ್ಸ್ ರದ್ದಾದ ಬಳಿಕವೂ ಕೂಡ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಗ್ರಾಹಕರು ತಮ್ಮ ಹಣವನ್ನು ಮರುಪಡೆಯುವ ಅಧಿಕಾರ ಹೊಂದಿದ್ದಾರೆ. ಈ ಕುರಿತು ಹೇಳಿಕೆ ಹೊರಡಿಸಿರುವ ವೊಡಾಫೋನ್, ಕಂಪನಿ ಖುದ್ದಾಗಿ ತಮ್ಮ ಈ ಸೇವೆಯನ್ನು ಬಂದ್ ಮಾಡಲು RBIಗೆ ಮನವಿ ಸಲ್ಲಿಸಿದೆ ಎಂದಿದೆ.


ಒಟ್ಟು 11 ಪೇಮೆಂಟ್ ಬ್ಯಾಂಕ್ ಗಳಿಗೆ ಲೈಸನ್ಸ್ ನೀಡಲಾಗಿತ್ತು
ಕಳೆದ ವರ್ಷವಷ್ಟೇ ವೊಡಾಫೋನ್-ಐಡಿಯಾ ಕಂಪನಿ ತಮ್ಮ m-PAISA ವ್ಯವಹಾರವನ್ನು ಸ್ಥಗಿತಗೊಳಿಸಲು ನಿರ್ಣಯ ಕೈಗೊಂಡಿದ್ದವು. ಇದಕ್ಕೂ ಮೊದಲು ಆದಿತ್ಯ ಬಿರ್ಲಾ ಮಾಲಿಕತ್ವದ ಐಡಿಯಾ ತನ್ನ ಪೇಮೆಂಟ್ ಬ್ಯಾಂಕ್ ಸ್ಥಗಿತಗೊಳಿಸಿತ್ತು. ಈ ಪೇಮೆಂಟ್ ಬ್ಯಾಂಕ್ ಬಂದ್ ಆದ ಬಳಿಕವೇ ಐಡಿಯಾ-ವೊಡಾಫೋನ್ ವಿಲೀನ ಪ್ರಕ್ರಿಯೆಗೆ ಮುಂದಾಗಿದ್ದವು. 2015ರಲ್ಲಿ ಅಧಿಸೂಚನೆಯೊಂದನ್ನು ಜಾರಿಗೊಳಿಸಿದ್ದ RBI ಒಟ್ಟು 11 ವಿವಿಧ ಪೇಮೆಂಟ್ ಬ್ಯಾಂಕ್ ಗಳನ್ನು ತೆರೆಯಲು ಲೈಸನ್ಸ್ ಜಾರಿಗೊಳಿಸಿತ್ತು. ವೊಡಾಫೋನ್ ಎಮ್-ಪೈಸಾ ಪೇಮೆಂಟ್ ಬ್ಯಾಂಕ್ ಕೂಡ ಅವುಗಳಲ್ಲಿ ಒಂದಾಗಿತ್ತು.