ನವದೆಹಲಿ: ಹೋಳಿ ಹಬ್ಬದ ಮೊದಲು ನೀವು ನಿಮ್ಮ ಎಲ್ಲ ಬ್ಯಾಂಕ್ ಕೆಲಸಗಳನ್ನು ಪೂರ್ಣಗೊಳಿಸಿ. ಏಕೆಂದರೆ ಮಾರ್ಚ್ ತಿಂಗಳ ಆರಂಭದಲ್ಲಿ ಸತತ 6 ದಿನಗಳ ಕಾಲ ಬ್ಯಾಂಕ್ ಬಂದ್ ಇರಲಿವೆ. ಬ್ಯಾಂಕ್ ನಿಂದ ಹಣ ವಿಥ್ ಡ್ರಾ ಮಾಡುವುದೇ ಆಗಲಿ ಅಥವಾ ಇತರೆ ಯಾವುದೇ ಬ್ಯಾಂಕ್ ಕೆಲಸಗಳಿದ್ದರೆ, ಮಾರ್ಚ್ 10ರೊಳಗೆ ನೀವು ಅವುಗಳನ್ನು ಪೂರ್ಣಗೊಳಿಸಿ. ಬ್ಯಾಂಕ್ ನೌಕರರ ಮುಷ್ಕರ ಹಾಗೂ ಹೋಳಿ ಹಬ್ಬದ ಹಿನ್ನೆಲೆ ಬ್ಯಾಂಕ್ ಗಳು 6 ದಿನಗಳ ಕಾಲ ಬಂದ್ ಇರಲಿವೆ. ಹಾಗಿದ್ರೆ ಈ ಕ್ಯಾಲೆಂಡರ್ ಅನ್ನು ಈಗಲೇ ನೋಟ್ ಮಾಡಿಕೊಳ್ಳಿ.


COMMERCIAL BREAK
SCROLL TO CONTINUE READING

ಬ್ಯಾಂಕ್ ನೌಕರರ ಮುಷ್ಕರ
ಮಾರ್ಚ್ ತಿಂಗಳಿನಲ್ಲಿ ಬ್ಯಾಂಕ್ ಒಕ್ಕೂಟಗಳು 11 ರಿಂದ 13 ಮಾರ್ಚ್ ವರೆಗೆ ಮುಷ್ಕರ ನಡೆಸಲು ನಿರ್ಧರಿಸಿವೆ. ತಮ್ಮ ಬೇಡಿಕೆಗಳನ್ನು ಇದುವರೆಗೆ ಇಡೇರಿಸಲಾಗಿಲ್ಲ ಎಂದು ನೌಕರರು ಆರೋಪಿಸಿದ್ದಾರೆ. ಹೀಗಾಗಿ ಮತ್ತೊಮ್ಮೆ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ  ಎಂದಿದ್ದಾರೆ. ಇದಕ್ಕೂ ಮೊದಲು ಜನವರಿ ಹಾಗೂ ಫೆಬ್ರವರಿ ತಿಂಗಳಿನಲ್ಲಿಯೂ ಕೂಡ ಬ್ಯಾಂಕ್ ನೌಕರರು ಮುಷ್ಕರ ಕೈಗೊಂಡಿದ್ದರು.


ಮಾರ್ಚ್ 10ಕ್ಕೆ ರಜೆ ಇರಲಿದೆ
ಹೋಳಿ ಹಬ್ಬದ ಪ್ರಯುಕ್ತ ಮಾರ್ಚ್ 10 ರಂದು ರಜೆ ಇರಲಿದೆ. ಹೀಗಾಗಿ ಹೋಳಿ ಹಬ್ಬದ ಮೊದಲು ನೀವು ನಿಮ್ಮ ಎಲ್ಲ ಬ್ಯಾಂಕ್ ಕೆಲಸಗಳನ್ನು ಪೂರ್ಣ ಗೊಳಿಸಿಕೊಳ್ಳಿ.


14 ಮತ್ತು 15 ಮಾರ್ಚ್ ಗೂ ಕೂಡ ರಜೆ ಇರಲಿದೆ
ಮಾರ್ಚ್ 14 ರಂದು ತಿಂಗಳ ಎರಡನೇ ಶನಿವಾರ ಬೀಳುವ ಕಾರಣ ಬ್ಯಾಂಕ್ ಗೆ ರಜೆ ಇರಲಿದ್ದು, ಭಾನುವಾರ 15ನೇ ತಾರಿಖೀಗೆ ವಾರದ ರಜೆ ಇರಲಿದೆ.


ಸಂಬಳ ಪರಿಶೀಲಿಸುವಂತೆ ನೌಕರರ ಮನವಿ
ಸಾರ್ವಜನಿಕ ವಲಯದ ಬ್ಯಾಂಕ್ ನೌಕರರ ಸಂಬಳ ಪ್ರತಿ 5 ವರ್ಷಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಇದಕ್ಕೂ ಮೊದಲು 2012 ರಲ್ಲಿ ಬ್ಯಾಂಕ್ ನೌಕರರ ಸಂಬಳ ಪರಿಷ್ಕರಿಸಲಾಗಿತ್ತು. 2012ರ ಬಳಿಕ ಇದುವರೆಗೂ ಕೂಡ ಸಂಬಳ ಪರಿಷ್ಕರಣೆ ನಡೆಸಲಾಗಿಲ್ಲ. ಹೀಗಾಗಿ ಸಂಬಳ ಪರಿಷ್ಕರಣೆಯ ಬೇಡಿಕೆಯನ್ನು ಮುಂದಿಟ್ಟುಕೊಂಡು ಬ್ಯಾಂಕ್ ನೌಕರರು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಜನವರಿ ಹಾಗೂ ಫೆಬ್ರವರಿ ತಿಂಗಳಿನಲ್ಲಿಯೂ ಕೂಡ ಬ್ಯಾಂಕ್ ನೌಕರರು ಒಂದು ಒಂದು ದಿನದ ಸಾಂಕೇತಿಕ ಮುಷ್ಕರ ಕೈಗೊಂಡಿದ್ದರು. ಇದಲ್ಲದೆ ಫೆಬ್ರುವರಿ 21 ರಿಂದ 23ರ ವರೆಗೂ ಕೂಡ ಬ್ಯಾಂಕ್ ಗಳು ಬಂದ್ ಇರಲಿವೆ.