ನವದೆಹಲಿ:  All India Permit For Tourist Vehicles - ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ರಾಜ್ಯ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (Ministry of Road Transport & Highways) ಹೊಸ ಯೋಜನೆಯನ್ನು ಘೋಷಿಸಿದೆ, ಇದರ ಅಡಿಯಲ್ಲಿ ಯಾವುದೇ ಪ್ರವಾಸಿ ವಾಹನ ಆಯೋಜಕರು (Tourist Vehicle Operator) ಆನ್‌ಲೈನ್ ಮೋಡ್ ಮೂಲಕ "ಅಖಿಲ ಭಾರತ ಪ್ರವಾಸಿ ಅಧಿಕಾರ / ಪರವಾನಗಿ" (All India Parmit) ಗೆ ಅರ್ಜಿ ಸಲ್ಲಿಸಬಹುದು ಎಂದು ಸಚಿವಾಲಯ ತಿಳಿಸಿದೆ. 


COMMERCIAL BREAK
SCROLL TO CONTINUE READING

ಮಾರ್ಚ್ 10 ರ ಜಿಎಸ್ಆರ್ 166 (ಇ) ಮೂಲಕ ಪ್ರಕಟಿಸಲಾಗಿರುವ ಈ ಹೊಸ ನಿಯಮಗಳನ್ನು ಅಖಿಲ ಭಾರತ ಪ್ರವಾಸಿ ವಾಹನಗಳ ಅಧಿಕಾರ ಮತ್ತು ಅನುಮತಿ ನಿಯಮಗಳು, 2021 ಎಂದು ಕರೆಯಲಾಗುವುದು ಹಾಗೂ ಈ ನಿಯಮಗಳು ಏಪ್ರಿಲ್ 1 ರಿಂದ ಜಾರಿಗ ಬರಲಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ ಇಂತಹ  ಅರ್ಜಿಗಳನ್ನು ಸಲ್ಲಿಸಿದ 30 ದಿನಗಳಲ್ಲಿ ಸಂಬಂಧಿತ ದಾಖಲೆಗಳು ಮತ್ತು ಶುಲ್ಕಗಳನ್ನು ಸಲ್ಲಿಸಿದ ನಂತರ ಪರವಾನಗಿ ನೀಡಲಾಗುವುದು ಮತ್ತು ಹೊಸ ನಿಯಮಗಳು ಏಪ್ರಿಲ್ 1 ರಿಂದ ಅನ್ವಯಿಸಲಿವೆ. ಆದರೆ  ಅಸ್ತಿತ್ವದಲ್ಲಿರುವ ಎಲ್ಲಾ ವಾಹನಗಳ ಪರವಾನಗಿಗಳ ಮಾನ್ಯತೆ ಅವುಗಳ ವ್ಯಾಲಿಡಿಟಿ ಇರುವವರೆಗೆ ಮುಂದುವರೆಯಲಿವೆ. 


ಇದನ್ನೂ ಓದಿ-Automobile ಕ್ಷೇತ್ರದಲ್ಲಿ Top Manufacturing Center ಆಗಲಿದೆ ಭಾರತ, Nitin Gadkari ಭವಿಷ್ಯ


 " ದೇಶಾದ್ಯಂತದ ರಾಜ್ಯಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಪರವಾನಗಿಗಳಿಗಾಗಿ ಮಾಡಲಾಗಿರುವ ಈ ಹೊಸ ನಿಯಮಗಳು ಸುದೀರ್ಘ ಅವಧಿಯವರೆಗೆ ನೆಮ್ಮದಿ ನೀಡುವ ನಿರೀಕ್ಷೆ ಇದ್ದು, ರಾಜ್ಯ ಸರ್ಕಾರಗಳ ಆದಾಯವನ್ನು ಹೆಚ್ಚಿಸಲಿವೆ. ಇದಕ್ಕೂ ಮೊದಲು ಸಾರಿಗೆ ಅಭಿವೃದ್ಧಿ ಮಂಡಳಿಯ 39ನೇ ಹಾಗೂ 40ನೇ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿತ್ತು ,ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ರಾಜ್ಯಗಳ ಪ್ರತಿನಿಧಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.  ರಾಷ್ಟ್ರೀಯ ಪರವಾನಗಿ ಆಡಳಿತದಡಿಯಲ್ಲಿ ಸರಕು ಸಾಗಣೆ ವಾಹನಗಳ ಯಶಸ್ಸಿನ ನಂತರ, ಪ್ರವಾಸಿ ಪ್ರಯಾಣಿಕ ವಾಹನಗಳಿಗೆ ತಡೆರಹಿತ ಚಲನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸಚಿವಾಲಯ ಈ ನಿಮನಗಳನ್ನು ಮಾಡಿದೆ.  


ಇದನ್ನೂ ಓದಿ-Old Vehicles Latest News: ಏಪ್ರಿಲ್ 1 ರಿಂದ 15 ವರ್ಷ ಹಳೆಯದಾದ ಸರ್ಕಾರಿ ವಾಹನಗಳ ನೋಂದಣಿ ನವೀಕರಣ ನಡೆಯಲ್ಲ


ಈ ಯೋಜನೆ ಅಧಿಕೃತತೆ / ಅನುಮತಿ ರೂಪದಲ್ಲಿ ಫ್ಲೆಕ್ಸಿಬಿಲಿಟಿ ಅನುಮತಿಸುತ್ತದೆ, ಮೂರು ತಿಂಗಳ ಅವಧಿಗೆ ಅಥವಾ ಅದರ ಗುಣಕದಲ್ಲಿ ಒಂದು ಸಮಯದಲ್ಲಿ ಮೂರು ವರ್ಷಗಳನ್ನು ಮೀರದಂತೆ ಮಂಜೂರಾತಿ ನೀಡಲಾಗುತ್ತದೆ. ನಮ್ಮ ದೇಶದಲಿನ ಪ್ರವಾಸೋದ್ಯಮ (Tourism In India) ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು  ಸೀಮಿತ ಪ್ರವಾಸೋದ್ಯಮ ಹೊಂದಿರುವ ಮತ್ತು ಸೀಮಿತ ಹಣಕಾಸಿನ ಸಾಮರ್ಥ್ಯ ಇರುವವರಿಗೂ ಕೂಡ ಇದು ಅನ್ವಯಿಸಲಿದೆ. ಇದರ ಜೊತೆಗೆ ಇದು ಕೇಂದ್ರೀಯ ಡೇಟಾ ಬೇಸ್ ಹಾಗೂ ಇಂತಹ ಪರ್ಮಿಟ್ /ಅಥಾರೈಸೆಶನ್ ಶುಲ್ಕವನ್ನು ಕೂಡ ಇದು ಕನ್ಸಾಲಿಡೇಟ್ ಮಾಡಲಿದೆ. ಇದು ಪ್ರವಾಸಿಗರ ಓಡಾಟಕ್ಕೆ, ಸುಧಾರಣೆಗೆ ಮತ್ತು ಪ್ರವಾಸೋದ್ಯಮಕ್ಕೆ ಭಾರಿ ಉತ್ತೇಜನ ನೀಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.


ಇದನ್ನೂ ಓದಿ- DGCA New Air Travel Guidelines:ವಿಮಾನ ಪ್ರಯಾಣಿಕರಿಗೆ ಹೊಸ ಗೈಡ್ ಲೈನ್ಸ್ ಬಿಡುಗಡೆ, ಪಾಲಿಸದೆ ಹೋದರೆ ಪರ್ಮ್ನಂಟ್ ಬ್ಯಾನ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.