Automobile ಕ್ಷೇತ್ರದಲ್ಲಿ Top Manufacturing Center ಆಗಲಿದೆ ಭಾರತ, Nitin Gadkari ಭವಿಷ್ಯ

Automobile manufacturing in India:ಈ ಕುರಿತು ಭರವಸೆ ವ್ಯಕ್ತಪಡಿಸಿರುವ ಕೇಂದ್ರ ಸಚಿವ Nitin Gadkari ಮುಂದಿನ ಐದು ವರ್ಷಗಳಲ್ಲಿ ಭಾರತ ವಿಶ್ವದ ಆಟೋಮೊಬೈಲ್ ನಿರ್ಮಾಣದ ಕೇಂದ್ರವಾಗಲಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಸೌರ ಶಕ್ತಿ ಉತ್ಪಾದಿಸಿ ಇಲೆಕ್ಟ್ರಿಕ್ ವಾಹನಗಳಿಗೆ ಭಾರತವನ್ನು ಅತಿ ದೊಡ್ಡ ಮಾರುಕಟ್ಟೆಯಾಗಿ ಪರಿವರ್ತಿಸಲಾಗುವುದು ಎಂದು ಗಡ್ಕರಿ ಹೇಳಿದ್ದಾರೆ.

Written by - Nitin Tabib | Last Updated : Mar 13, 2021, 10:38 PM IST
  • ಮುಂದಿನ ಐದು ವರ್ಷಗಳಲ್ಲಿ ಭಾರತ ವಿಶ್ವದ ಆಟೋಮೊಬೈಲ್ ನಿರ್ಮಾಣದ ಕೇಂದ್ರವಾಗಲಿದೆ.
  • ಕೇಂದ್ರ ಸಚಿವ ನಿತೀನ್ ಗಡ್ಕರಿ ಭವಿಷ್ಯ.
  • ಇಲೆಕ್ಟ್ರಿಕ್ ವಾಹನಗಳಿಗೆ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಲಿದೆ.
Automobile ಕ್ಷೇತ್ರದಲ್ಲಿ Top Manufacturing Center ಆಗಲಿದೆ ಭಾರತ, Nitin Gadkari ಭವಿಷ್ಯ title=
Automobile Manufacturing In India (File Photo Nitin Gadkari)

ನವದೆಹಲಿ: Automobile manufacturing in India - ಮುಂದಿನ ಐದು ವರ್ಷಗಳಲ್ಲಿ ಭಾರತವು ವಿಶ್ವದ ವಾಹನಗಳ ಉನ್ನತ ಉತ್ಪಾದನಾ ಕೇಂದ್ರವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗಡ್ಕರಿ ಇಂದು ಸ್ವಾವಲಂಬಿ ಭಾರತ - ಸೌರ ಮತ್ತು ಎಂಎಸ್‌ಎಂಇಗಳಲ್ಲಿ ಅವಕಾಶದ ವಿಷಯದ ಕುರಿತು ವೆಬ್‌ನಾರ್ ಅನ್ನು ಉದ್ದೇಶಿಸಿ ಮಾತನಾಡುತ್ತಾ,  ನವೀಕರಿಸಬಹುದಾದ ಶಕ್ತಿಯನ್ನು ಉತ್ತೇಜಿಸಲು ಒತ್ತು ನೀಡಿದ್ದಾರೆ. ಈ ವೆಬ್ನಾರ್ ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿನ ಭಾರತೀಯ ಪೀಪಲ್ಸ್ ಫೋರಂ ಆಯೋಜಿಸಿತ್ತು.

ಅತ್ಯುತ್ತಮ ಟ್ರ್ಯಾಕ್ ರಿಕಾರ್ಡ್ ಹೊಂದಿರುವ MSME ಗಳಿಗೆ ಸಹಾಯ (Support to MSMEs with good track record)
ದೇಶದಲ್ಲಿ, ವಿಶೇಷವಾಗಿ MSME ವಲಯದಲ್ಲಿ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳನ್ನು ಉತ್ತೇಜಿಸಲು ಸರ್ಕಾರ ಬದ್ಧವಾಗಿದೆ ಎಂದು ನಿತಿನ್ ಗಡ್ಕರಿ (Nitin Gadkari) ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಇದಕ್ಕಾಗಿ ಉತ್ತಮ ದಾಖಲೆಯನ್ನು ಹೊಂದಿರುವ ಎಂಎಸ್‌ಎಂಇಗಳನ್ನು ಈಗ ಬಂಡವಾಳ ಮಾರುಕಟ್ಟೆಗಳಿಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-LPG Subsidy: LPG ಮೇಲಲ್ಲ ಇದರ ಮೇಲೆ Subsidy ನೀಡಬೇಕು, ಗಡ್ಕರಿ ಉವಾಚ

ಸ್ಕ್ರ್ಯಾಪಿಂಗ್ ಪಾಲಸಿಗಳಲ್ಲಿ ಹೂಡಿಕೆಗೆ ಅತಿ ದೊಡ್ಡ ಅವಕಾಶ (Huge opportunity for investment in scraping policy)
ಇದೆ ವೇಳೆ ಸ್ಕ್ರ್ಯಾಪಿಂಗ್ ಪಾಲಸಿಯಲ್ಲಿ ಹೂಡಿಕೆ ಮಾಡಲು ಇದೊಂದು ದೊಡ್ಡ ಅವಕಾಶವಾಗಿದೆ ಎಂದು ಗಡ್ಕರಿ ಹೇಳಿದ್ದಾರೆ. ಭಾರತ ಇಂಧನ ಉತ್ಪಾದನೆ ಅಪಾರ ಕ್ಷಮತೆಯನ್ನು ಹೊಂದಿದೆ ಎಂದು ಹೇಳಿರುವ ಗಡ್ಕರಿ, ಭಾರತದಲ್ಲಿ ಪ್ರತಿ ಯುನಿಟ್ ಸೌರ ಶಕ್ತಿ ದರ ರೂ.2.40 ಆಗಿದ್ದು, ವಿದ್ಯುತ್ ಶಕ್ತಿಯ ವಾಣಿಜ್ಯಾತ್ಮಕ ದರ ಪ್ರತಿ ಯೂನಿಟ್ 11 ರೂ. ಆಗಿದೆ. ಹೀಗಾಗಿ ಸೌರ ಶಕ್ತಿಯ ಮಾಧ್ಯಮದ ಮೂಲಕ ಉತ್ಪಾದಿಸಲಾಗುವ ಅಗ್ಗದ ದರದ ವಿದ್ಯುತ್ ಶಕ್ತಿ ಯ ಉಪಯೋಗವನ್ನು ಆಟೋಮೊಬೈಲ್ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಮಾಡಬಹುದು ಎಂದು ಗಡ್ಕರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-Petrol-Diesel ಬಗ್ಗೆ ಮಹತ್ವದ ಸೂಚನೆ ನೀಡಿದ ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?

ಇಲೆಕ್ಟ್ರಿಕ್ ವಾಹನಗಳಿಗೆ ಅತಿ ದೊಡ್ಡ ಮಾರುಕಟ್ಟೆ (Large market for electric vehicles)
ಈ ಕುರಿತು ಭರವಸೆ ವ್ಯಕ್ತಪಡಿಸಿರುವ ಕೇಂದ್ರ ಸಚಿವ Nitin Gadkari ಮುಂದಿನ ಐದು ವರ್ಷಗಳಲ್ಲಿ ಭಾರತ ವಿಶ್ವದ ಆಟೋಮೊಬೈಲ್ ನಿರ್ಮಾಣದ ಕೇಂದ್ರವಾಗಲಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಸೌರ ಶಕ್ತಿ ಉತ್ಪಾದಿಸಿ ಇಲೆಕ್ಟ್ರಿಕ್ ವಾಹನಗಳಿಗೆ ಭಾರತವನ್ನು ಅತಿ ದೊಡ್ಡ ಮಾರುಕಟ್ಟೆಯಾಗಿ ಪರಿವರ್ತಿಸಲಾಗುವುದು ಎಂದು ಗಡ್ಕರಿ ಹೇಳಿದ್ದಾರೆ.

ಇದನ್ನೂ ಓದಿ-ಉದ್ಯೋಗಾಕಾಂಕ್ಷಿಗಳಿಗೆ 'ಗುಡ್ ನ್ಯೂಸ್'​ ನೀಡಿದ ಕೇಂದ್ರ ಸರ್ಕಾರ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News