ಆಗಸ್ಟ್ 19 ರಿಂದ ಕಾಶ್ಮೀರದಲ್ಲಿ ಶಾಲಾ-ಕಾಲೇಜುಗಳು ಪುನರಾರಂಭ
ಆಗಸ್ಟ್ 19 ರಿಂದ ಕಾಶ್ಮೀರದ ಎಲ್ಲಾ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಮತ್ತೆ ಆರಂಭವಾಗಲಿವೆ ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತದ ಮೂಲಗಳು ತಿಳಿಸಿವೆ.ಈ ಮೊದಲು ಜೆ & ಕೆ ಗವರ್ನರ್ ಸತ್ಯ ಪಾಲ್ ಮಲಿಕ್ ಅವರು ಶ್ರೀನಗರದ ಸಿವಿಲ್ ಸೆಕ್ರೆಟರಿಯಟ್ ಮತ್ತು ಎಲ್ಲಾ ಸರ್ಕಾರಿ ಕಚೇರಿಗಳನ್ನು ಇಂದಿನಿಂದ ಪುನರಾರಂಭಿಸುವಂತೆ ನಿರ್ದೇಶಿಸಿದ್ದರು.
ನವದೆಹಲಿ: ಆಗಸ್ಟ್ 19 ರಿಂದ ಕಾಶ್ಮೀರದ ಎಲ್ಲಾ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಮತ್ತೆ ಆರಂಭವಾಗಲಿವೆ ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತದ ಮೂಲಗಳು ತಿಳಿಸಿವೆ.ಈ ಮೊದಲು ಜೆ & ಕೆ ಗವರ್ನರ್ ಸತ್ಯ ಪಾಲ್ ಮಲಿಕ್ ಅವರು ಶ್ರೀನಗರದ ಸಿವಿಲ್ ಸೆಕ್ರೆಟರಿಯಟ್ ಮತ್ತು ಎಲ್ಲಾ ಸರ್ಕಾರಿ ಕಚೇರಿಗಳನ್ನು ಇಂದಿನಿಂದ ಪುನರಾರಂಭಿಸುವಂತೆ ನಿರ್ದೇಶಿಸಿದ್ದರು.
'ಜಮ್ಮು ಜಿಲ್ಲೆಯ ಮುನ್ಸಿಪಲ್ ಮಿತಿಯೊಳಗೆ ಸೆಕ್ಷನ್ 144 ಸಿಆರ್ಪಿಸಿ ಅಡಿಯಲ್ಲಿ ನೀಡಲಾದ ಆಗಸ್ಟ್ 5 ರ ಆದೇಶವನ್ನು ಈ ಮೂಲಕ ಹಿಂಪಡೆಯಲಾಗಿದೆ" ಎಂದು ಜಮ್ಮುವಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಷ್ಮಾ ಚೌಹಾನ್ ಅವರು ಆಗಸ್ಟ್ 9 ರಂದು ಹೊರಡಿಸಿದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಸೆಕ್ಷನ್ 144 ಅನ್ನು ವಿಧಿಸಲಾಯಿತು.
ಈಗಾಗಲೇ ದೆಹಲಿಯ ಗೃಹ ಸಚಿವಾಲಯದ ಅಧಿಕಾರಿಗಳು, ಲ್ಯಾಂಡ್‌ಲೈನ್, ಮೊಬೈಲ್ ಮತ್ತು ಇಂಟರ್ನೆಟ್ ಸಂಪರ್ಕಗಳ ಮೇಲಿನ ಬಿಕ್ಕಟ್ಟನ್ನು ಸಡಿಲಿಸಲು ಕರೆ ನೀಡಲಾಗುವುದು ಎಂದು ಆಯಾ ಜಿಲ್ಲಾಡಳಿತಕ್ಕೆ ತಿಳಿಸಿದೆ ಎಂದು ಹೇಳಿದ್ದಾರೆ. ಆದಾಗ್ಯೂ, ಸಂವಹನ ಕಡಿತವು ಇನ್ನೂ ಕೆಲವು ದಿನಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ, ಆದರೆ ಲ್ಯಾಂಡ್‌ಲೈನ್ ಸಂಪರ್ಕಗಳನ್ನು ಹಂತಹಂತವಾಗಿ ಕಾರ್ಯಗತಗೊಳಿಸಬಹುದು.
10 ದಿನಗಳಿಗಿಂತ ಹೆಚ್ಚು ಕಾಲ ಕಣಿವೆಯಲ್ಲಿ ಮಾಧ್ಯಮಗಳ ಮೇಲಿನ ನಿರ್ಬಂಧಗಳನ್ನು ತಕ್ಷಣವೇ ತೆಗೆದುಹಾಕುವಂತೆ ಕೋರಿ ಸಲ್ಲಿಸಿದ ಅರ್ಜಿಯೊಂದಕ್ಕೆ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.