All Air-India Women Pilot Team - ನವದೆಹಲಿ: ಏರ್ ಇಂಡಿಯಾ ಆಲ್ ವಿಮೆನ್ ಪೈಲಟ್ ಗಳ ತಂಡವು ಮತ್ತೊಮ್ಮೆ ಇತಿಹಾಸ ಬರೆಯಲು ಹೊರಟಿದೆ. ಹೌದು, ವಿಶ್ವದ ಅತಿ ಉದ್ದದ ವಾಯು ಮಾರ್ಗ ಎನ್ನಲಾಗಿರುವ ನಾರ್ತ್ ಪೋಲ್ ಮೇಲಿಂದ ಈ ತಂಡ ವಿಮಾನ ಹಾರಾಟ ಕೈಗೊಳ್ಳಲಿದೆ. ಯು.ಎಸ್ ನ ಸ್ಯಾನ್ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಿಂದ ಜನವರಿ 9 ರಂದು ಅವರು ಈ ಯಾತ್ರೆ ಆರಂಭಿಸಿದ್ದಾರೆ. 16 ಸಾವಿರ ಕಿ.ಮೀ ಉದ್ದದ ಯಾತ್ರೆ ಕೈಗೊಳ್ಳುತ್ತಿರುವ ಪೈಲಟ್ಗಳ ತಂಡದ ನೇತೃತ್ವ ಕ್ಯಾಪ್ಟನ್ ಜೊಯಾ ಅಗರವಾಲ್ ವಹಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಏರ್ ಇಂಡಿಯಾ (Air India), ಕ್ಯಾಪ್ಟನ್ ಜೊಯಾ ಅಗರವಾಲ್ ಹಾಗೂ ಅವರ ತಂಡಕ್ಕೆ ಈ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದಿದೆ. ಇದಕ್ಕೂ ಮೊದಲು 2013 ರಲ್ಲಿ ಜೊಯಾ ಬೋಯಿಂಗ್ 777 ವಿಮಾನ ಉಡಾವಣೆ ಕೈಗೊಂಡಿದ್ದರು. ಆಗ ಈ ವಿಮಾನ ಉಡಾವಣೆ ಮಾಡಿದ ಅತ್ಯಂತ ಕಿರಿ ವಯಸ್ಸಿನ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಜೊಯಾ ಪಾತ್ರರಾಗಿದ್ದರು. ಇದೆ ಕಾರಣದಿಂದ ಅವರಿಗೆ ಈ ದೊಡ್ಡ ಜವಾಬ್ದಾರಿ ವಹಿಸಲಾಗಿದೆ. 


ಇದನ್ನು ಓದಿ- Air Indiaದಿಂದ ದೀಪಾವಳಿ ಗಿಫ್ಟ್: ಈ ತಿಂಗಳ ಕೊನೆಯಲ್ಲಿ ಈ ಹೊಸ ವಿಮಾನ ಆರಂಭ!


ನನ್ನ ಪಾಲಿಗೆ ಇದೊಂದು ಸುವರ್ಣಾವಕಾಶ
ತಮಗೆ ವಹಿಸಲಾಗಿರುವ ಜವಾಬ್ದಾರಿಯ ಕುರಿತು ಮಾತನಾಡಿರುವ ಕ್ಯಾ.ಜೊಯಾ ಅಗರ್ವಾಲ್, ವಿಶ್ವದಲ್ಲಿ ಬಹುತೇಕ ಜನರು ನಾರ್ಥ್ ಪೋಲ್ ಆಗಲಿ ಅಥವಾ ಅದರ ನಕ್ಷೆಯಾಗಲಿ ಇದುವರೆಗೆ ನೋಡಿಲ್ಲ. ಈ ಯಾತ್ರೆಗೆ ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ನಮ್ಮ ಫ್ಲಾಗ್ ಕ್ಯಾರಿಯರ್ ನನ್ನ ಮೇಲೆ ಭರವಸೆ ತೋರಿಸಿರುವುದು ನನ್ನ ಭಾಗ್ಯ. ಸ್ಯಾನ್ಫ್ರಾನ್ಸಿಸ್ಕೋ ನಿಂದ ವಾಯಾ ನಾರ್ತ್ ಪೋಲ್ ಬೆಂಗಳೂರು ತಲುಪುವ ವಿಶ್ವದ ಸತಿ ಉದ್ದದ ವಾಯುಮಾರ್ಗದಲ್ಲಿ ಬೋಯಿಂಗ್ 777 ನ ಮೊದಲ ಹಾರಾಟವನ್ನು ಕಮಾಂಡ್ ಮಾಡುವುದು ಒಂದು ಸುವರ್ಣಾವಕಾಶ ಎಂದು ಜೊಯಾ ಹೇಳಿದ್ದಾರೆ.


ಇದನ್ನು ಓದಿ- ಮಹಾತ್ಮ ಗಾಂಧಿ ಜನ್ಮದಿನದಂದು ವಿಶೇಷ ರೀತಿಯಲ್ಲಿ Air India ನಮನ!


ಇದು ಪ್ರತಿಯೊಬ್ಬ ಪೈಲಟ್ ಕನಸು 
ಯಾವುದೇ ಒಂದು ಮಹಿಳಾ ಪೈಲೆಟ್ ತಂಡ ಈ ಯಾತ್ರೆಯ ಮೇಲೆ ಹೊರಟಿರುವುದು ಇದೆ ಮೊದಲ ಬಾರಿಗೆ. ಈ ಯಾತ್ರೆಯ ವೇಳೆ ನಾರ್ತ್ ಪೋಲ್ ನಿಂದ ಸಾಗುವ ರೋಮಾಂಚಕ ಅನುಭವ ವಿಶಿಷ್ಟ ಹಾಗೂ ಮಹತ್ವದ ಭಾಗವಾಗಿದೆ. ಏಕೆಂದರೆ ನಾರ್ತ್ ಪೋಲ್ ನೋಡುವುದು ಮತ್ತು ಅಲ್ಲಿಂದ ವಿಮಾನ ಉಡಾಯಿಸುವುದು ಪ್ರತಿಯೋರ್ವ ಪೈಲಟ್ ಕನಸಾಗಿರುತ್ತದೆ. ಯಾವುದೇ ಏರ್ಲೈನ್ಸ್ ಕಂಪನಿ ಈ ರೂಟ್ ನಲ್ಲಿ ತನ್ನ ಬೆಸ್ಟ್ ಪೈಲಟ್ ಗಳನ್ನು ಕಳುಹಿಸುತ್ತದೆ. ಈ ಕನಸನ್ನು ಇದೀಗ 19 ಮಹಿಳೆಯರು ಪೂರ್ಣಗೊಳಿಸಲಿದ್ದಾರೆ.


ಇದನ್ನು ಓದಿ- ಅಕ್ಟೋಬರ್ 2 ರಿಂದ ಏರ್ ಇಂಡಿಯಾದ ಎಲ್ಲ ವಿಮಾನಗಳಲ್ಲಿ ಪ್ಲಾಸಿಕ್ ಉತ್ಪನ್ನ ನಿಷೇಧ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.