ನವದೆಹಲಿ: ಸರ್ಕಾರಿ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ದೆಹಲಿಯಿಂದ ದೋಹಾವರೆಗೆ ತಡೆರಹಿತ ವಿಮಾನ ಸೇವೆಯನ್ನು ಅ.29ರಿಂದ ಆರಂಭಿಸಲಿದೆ.
ಭಾರತದಿಂದ ಅತಿ ಹೆಚ್ಚು ಮಂದಿ ಉದ್ಯೋಗ ಅರಸಿ ದೋಹಾಗೆ ತೆರಳುವುದರಿಂದ ಏರ್ ಇಂಡಿಯಾ ಇದೀಗ ದೆಹಲಿಯಿಂದ ದೋಹಾಗೆ ನೇರ ವಿಮಾನ ಸೇವೆಯನ್ನು ಒದಗಿಸಲು ಮುಂದಾಗಿದೆ.
ಅಷ್ಟೇ ಅಲ್ಲದೆ, ಗುರುನಾನಕ್ ದೇವ್ ಅವರ 550ನೇ ಜನ್ಮ ದಿನಾಚರಣೆ ಅಂಗವಾಗಿ ಅಮೃತಸರ-ಪಾಟ್ನಾ ನಡುವೆ ನೇರ ವಿಮಾನ ಹಾರಾಟ ಸೇವೆಯನ್ನೂ ಏರ್ ಇಂಡಿಯಾ ಒದಗಿಸಲಿದ್ದು, ಅಕ್ಟೋಬರ್ 27 ರಿಂದ ವಿಮಾನ ಹಾರಾಟ ಆರಂಭವಾಗಲಿದೆ.
162 ಆಸನಗಳುಳ್ಳ A320neo ವಿಮಾನ ಅಕ್ಟೋಬರ್ 27ರಂದು ಅಮೃತಸರದ ಶ್ರೀ ಗುರು ರಾಮದಾಸ್ ಜೀ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 2.55ಕ್ಕೆ ಹೊರತು ಪಾಟ್ನಾದ ಜಯಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಜೆ 5.05ಕ್ಕೆ ಲ್ಯಾಂಡ್ ಆಗಲಿದೆ.