ಏಳು ಹಂತದಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನವು ಗುರುವಾರ ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದೆ. 18 ರಾಜ್ಯಗಳ ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 91 ಕ್ಷೇತ್ರಗಳಲ್ಲಿ ಇಂದು ಬೆಳಿಗ್ಗೆಯಿಂದ ಮತದಾನ ಆರಂಭವಾಗಿದೆ.


COMMERCIAL BREAK
SCROLL TO CONTINUE READING

ಒಟ್ಟು 7.22 ಕೋಟಿ ಪುರುಷರು, 6.99 ಕೋಟಿ ಮಹಿಳಾ ಮತ್ತು 7,764 ತೃತೀಯ ಲಿಂಗ ಮತದಾರರು ಗುರುವಾರ 1279 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.


ಜಮ್ಮು ಮತ್ತು ಕಾಶ್ಮೀರ:
ರಾಜ್ಯದ 6 ಲೋಕಸಭಾ ಕ್ಷೇತ್ರಗಳ ಪೈಕಿ ಎರಡು ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದ್ದು, ಒಟ್ಟು 33 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. 33, 17, 882 ಮತದಾರರು ಎರಡು ಕ್ಷೇತ್ರಗಳಲ್ಲಿ 4,489 ಮತಗಟ್ಟೆಗಳಲ್ಲಿ ಮತ ಚಲಾಯಿಸುತ್ತಾರೆ.


ಬಿಹಾರ್: 
ರಾಜ್ಯದ 40 ಕ್ಷೇತ್ರಗಳ ಪೈಕಿ 4 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ. ಒಟ್ಟು  74,40,334 ಮತದಾರರು 7,486 ಮತಗಟ್ಟೆಗಳಲ್ಲಿ ಮತಚಲಾಯಿಸಲಿದ್ದು, 44 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.


ಅರುಣಾಚಲ ಪ್ರದೇಶ: 
ಅರುಣಾಚಲ ಪ್ರದೇಶದ 2 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಎರಡು ಕ್ಷೇತ್ರಗಳಲ್ಲಿ ಮತದಾನಕ್ಕಾಗಿ  2,202 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 12 ಅಭ್ಯರ್ಥಿಗಳು ಕಣದಲ್ಲಿದ್ದು, 7,98, 248 ಮತದಾರರು ಮತ ಚಲಾಯಿಸಲಿದ್ದಾರೆ.


ಅಸ್ಸಾಂ: 
ಅಸ್ಸಾಂ ನ 14 ಲೋಕಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಈ ಕ್ಷೇತ್ರಗಳಲ್ಲಿ ಒಟ್ಟು 41 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು, 76,03,458  ಮತದಾರರು 9,574 ಮತಗಟ್ಟೆಗಳಲ್ಲಿ ಮತ ಹಾಕುವ ಮೂಲಕ ಇವರ ಭವಿಷ್ಯ ನಿರ್ಧಲಿಸಲಿದ್ದಾರೆ. ನಡೆಯಲಿದೆ.


ಮೇಘಾಲಯ:
ರಾಜ್ಯದ 2 ಸ್ಥಾನಗಳಲ್ಲಿಂದು ಮತದಾನ ನಡೆಯಲಿದೆ. ಒಟ್ಟು 18,92,716 ಮತದಾರರು, 3,1 67 ಮತಗಟ್ಟೆಗಳಲ್ಲಿ ಮತದಾನ ಮಾಡಲಿದ್ದಾರೆ. ಒಟ್ಟಾರೆ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ.


ಉತ್ತರಾಖಂಡ: 
ರಾಜ್ಯದಲ್ಲಿ 5 ಸ್ಥಾನಗಳಿಗೆ ಗುರುವಾರ ಮತದಾನ ನಡೆಯುತ್ತಿದೆ. ರಾಜ್ಯದಲ್ಲಿ ಒಟ್ಟು 11,235 ಮತಗಟ್ಟೆಗಳ ಮತದಾನ ನಡೆಯುತ್ತಿದ್ದು, 78,04,523 ಮತದಾರರು 52 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತಾರೆ.


ಉತ್ತರ ಪ್ರದೇಶ: 
ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ 8 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಈ ಕ್ಷೇತ್ರಗಳಲ್ಲಿ ಒಟ್ಟು 96 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 1,52,68,056 ಮತದಾರರು 16,635 ಮತಗಟ್ಟೆಗಳಲ್ಲಿ ಮತ ಚಲಾಯಿಸಲಿದ್ದಾರೆ.


ಛತ್ತೀಸ್​ಗಢ:
ರಾಜ್ಯದ 11 ಲೋಕಸಭಾ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರಕ್ಕೆ ಇಂದು ಮತದಾನ ನಡೆಯಲಿದ್ದು, 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 1,878 ಮತಗಟ್ಟೆಗಳಲ್ಲಿ 13,77,946 ಮತ ಚಲಾವಣೆ ಮಾಡಲಿದ್ದಾರೆ.


ಮಹಾರಾಷ್ಟ್ರ:
ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳಲ್ಲಿ 7 ಕ್ಷೇತ್ರಗಳಿಗೆ 14,731 ಮತಗಟ್ಟೆಗಳಲ್ಲಿ ಇಂದು ಮತದಾನ ನಡೆಯಿದೆ. 116 ಅಭ್ಯರ್ಥಿಗಳು ಕಣದಲ್ಲಿದ್ದು 1,30,35,501 ಮತದಾರರು ಮತ ಚಲಾಯಿಸಲಿದ್ದಾರೆ.


ಸಿಕ್ಕಿಂ:
1 ಕ್ಷೇತ್ರಕ್ಕೆ 567 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 11 ಅಭ್ಯರ್ಥಿಗಳಿಗೆ ಒಟ್ಟು 4,23,325 ಮತದಾರರು ಮತ ಚಲಾಯಿಸುತ್ತಾರೆ.


ನಾಗಾಲ್ಯಾಂಡ್: 
ರಾಜ್ಯದ 1 ಕ್ಷೇತ್ರಕ್ಕೆ ಇಂದು ಮತದಾನ ನಡೆಯಲಿದ್ದು 2,227 ಮತಗಟ್ಟೆಗಳನ್ನೂ ಸ್ಥಾಪಿಸಲಾಗಿದೆ. 12,06,287 ಮತದಾರರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.


ಮಣಿಪುರ್:
ರಾಜ್ಯದ 2 ಲೋಕಸಭಾ ಕ್ಷೇತ್ರಗಳಲ್ಲಿ ಒಂದಕ್ಕೆ ಇಂದು ಮತದಾನ ನಡೆಯಲಿದೆ. 1,562 ಮತಗಟ್ಟೆಗಳಲ್ಲಿ 10,10,618 ಮತದಾರರು ಮತ ಚಲಾಯಿಸಲಿದ್ದಾರೆ.


ಪಶ್ಚಿಮ ಬಂಗಾಳ:
ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳಲ್ಲಿ 2 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. 34,54,276 ಮತದಾರರು 3,844 ಮತಗಟ್ಟೆಗಳಲ್ಲಿ ಮತ ಚಲಾಯಿಸುವರು.


ಮಿಜೋರಾಮ್:
ಮಿಜೋರಾಂ ನ 1 ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ಮತದಾನ ನಡೆಯುತ್ತಿದ್ದು, ಒಟ್ಟು 1,175 ಮತಗಟ್ಟೆಗಳಲ್ಲಿ 7,84,405 ಮತದಾರರು ತಮ್ಮ ಮತದಾನದ ಮಾಡಲಿದ್ದಾರೆ.


ತ್ರಿಪುರ:
ರಾಜ್ಯದ 2 ಲೋಕಸಭಾ ಕ್ಷೇತ್ರಗಳ ಪೈಕಿ 1 ಕ್ಷೇತ್ರಕ್ಕೆ ಇಂದು ಮತದಾನ ನಡೆಯಲಿದೆ.  1,679 ಮತಗಟ್ಟೆಗಳಲ್ಲಿ 13,47,381 ತಮ್ಮ ಹಕ್ಕನ್ನು ಚಲಾಯಿಸುವರು.