ಅಮರಾವತಿ: Amaravati Violence -  ತ್ರಿಪುರಾದಲ್ಲಿ ಹರಡಿದ (Tripura Fake News) ಹಿಂಸಾಚಾರದ ವದಂತಿಯ ಪರಿಣಾಮ ತ್ರಿಪುರಾದಿಂದ ಸುಮಾರು 2,500 ಕಿಮೀ ದೂರದಲ್ಲಿರುವ ಅಮರಾವತಿಯಲ್ಲಿ (Amaravati) ಕಂಡುಬಂದಿದೆ. ಶುಕ್ರವಾರ, ಮಹಾರಾಷ್ಟ್ರದ (Maharashtra) 3 ನಗರಗಳಾದ ಅಮರಾವತಿ, ನಾಂದೇಡ್ ಮತ್ತು ಮಾಲೆಗಾಂವ್‌ನಲ್ಲಿ ಉಗ್ರ ಹಿಂಸಾಚಾರ, ಬೆಂಕಿ ಹಚ್ಚುವುದು, ವಿಧ್ವಂಸಕ ಕೃತ್ಯಗಳು, ಪೊಲೀಸರ ಮೇಲೆ ದಾಳಿ, ಕಲ್ಲು ತೂರಾಟ ಸೇರಿದಂತೆ ಎಲ್ಲವೂ ಕಂಡುಬಂದಿದೆ. ಮೊದಲು ತ್ರಿಪುರಾ ಹಿಂಸಾಚಾರದ (Tripura Fake Violence News) ವಿರುದ್ಧ ಪ್ರತಿಭಟನೆಯನ್ನು ನಡೆಸಲಾಗಿದೆ  ಮತ್ತು ನಂತರ ಪ್ದ್ರತಿಭಾತನೆಯ ಹೆಸರಿನಲ್ಲಿ ಭಾರಿ ಉಪದ್ರವ ನಡೆಸಲಾಗಿದೆ. ಇದನ್ನು ವಿರೋಧಿಸಿ ಬಿಜೆಪಿ ಇಂದು (ಶನಿವಾರ) ಅಮರಾವತಿ ಬಂದ್‌ಗೆ ಕರೆ ನೀಡಿತ್ತು. ಇದೇ ವೇಳೆ ಪೊಲೀಸರು ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. 


COMMERCIAL BREAK
SCROLL TO CONTINUE READING

ಬಂದ್ ವೇಳೆ ಅಮರಾವತಿಯಲ್ಲಿ ಅಂಗಡಿ ತೆರೆದಿರುವುದನ್ನು ಕಂಡು ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಅಂಗಡಿಯನ್ನು ಧ್ವಂಸಗೊಳಿಸಿದ್ದಾರೆ. ಬಳಿಕ ಪೊಲೀಸರು ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಗಲಭೆಯನ್ನು ತಡೆಯಲು ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಪ್ರಯೋಗಿಸಿದ್ದಾರೆ. ಈ ಹಿನ್ನೆಲೆ ಪ್ರಸ್ತುತ ಅಮರಾವತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.


ಮಹಾರಾಷ್ಟ್ರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ
ಮಹಾರಾಷ್ಟ್ರದ ಅಮರಾವತಿ, ಮಾಲೆಗಾಂವ್ ಮತ್ತು ನಾಂದೇಡ್‌ನ ಮೂರು ನಗರಗಳಲ್ಲಿ ಸಾವಿರಾರು ಜನರು ಬೀದಿಗಿಳಿದಿದ್ದಾರೆಎನ್ನಲಾಗಿದೆ. ಪ್ರಸ್ತುತ, ಮಾಲೆಗಾಂವ್ ಮತ್ತು ನಾಂದೇಡ್ ಎರಡರಲ್ಲೂ ಪರಿಸ್ಥಿತಿ ಉದ್ವಿಗ್ನವಾಗಿದೆ ಆದರೆ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ. 


ಹಿಂಸಾಚಾರದಲ್ಲಿ ಐವರು ಪೊಲೀಸರಿಗೆ ಗಾಯ
ಶುಕ್ರವಾರ, ಮಾಲೆಗಾಂವ್‌ನಲ್ಲಿ ನಡೆದ ಹಿಂಸಾಚಾರದಲ್ಲಿ 3 ಪೊಲೀಸ್ ಅಧಿಕಾರಿಗಳು, 5 ಪೊಲೀಸರು ಮತ್ತು ಮೂವರು  ನಾಗರಿಕರು ಗಾಯಗೊಂಡಿದ್ದರು. ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಆಡಳಿತ ಎಸ್‌ಆರ್‌ಪಿಎಫ್‌ನ ಎರಡು ತುಕಡಿಗಳು ಮತ್ತು ನಾಸಿಕ್ ಗ್ರಾಮಾಂತರ ಪೊಲೀಸ್ ಪಡೆಗಳನ್ನು ನಿಯೋಜಿಸಿದೆ.


ಇದನ್ನೂ ಓದಿ-Terrorists Attack in Manipur: ಉಗ್ರದಾಳಿಯಲ್ಲಿ ಅಸ್ಸಾಂ ರೈಫಲ್ಸ್ ನ ಕಮಾಂಡಿಂಗ್ ಆಫಿಸರ್ ಸೇರಿದಂತೆ ಅವರ ಕುಟುಂಬ ಹುತಾತ್ಮ


ರಾಹುಲ್ ಗಾಂಧಿ ಟ್ರೇನಿಂಗ್ ಹೇಳಿಕೆಯ ಬಳಿಕ ಹಿಂಸಾಚಾರ - ಸಂಬಿತ್ ಪಾತ್ರಾ 
ಏತನ್ಮಧ್ಯೆ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ, ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ (Rahul Gandhi) ತರಬೇತಿ ನೀಡುವ ಹೇಳಿಕೆಯ ನಂತರ ಮಹಾರಾಷ್ಟ್ರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂದು ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಭಾಷಣದ ನಂತರ ಹಿಂಸಾಚಾರ ಭುಗಿಲೆದ್ದಿತು. ತ್ರಿಪುರದ ನಕಲಿ ಹಿಂಸಾಚಾರವನ್ನು ವಿರೋಧಿಸಿ ಹಿಂಸಾಚಾರ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ- ಕುಟುಂಬ ರಾಜಕಾರಣ ಜೆಡಿಎಸ್ ಪಕ್ಷದ ಸಿದ್ಧಾಂತ: ಬಿಜೆಪಿ ವ್ಯಂಗ್ಯ


ಇನ್ನೊಂದೆಡೆ ಬಿಜೆಪಿ ಈ ಹಿಂಸಾಚಾರಕ್ಕಾಗಿ ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ತನಿಖಾ ಸಂಸ್ಥೆಗಳು ಏನು ಮಾಡುತ್ತಿವೆ ಎಂದು ಬಿಜೆಪಿ ನಾಯಕ ರಾಮ್ ಕದಂ (Ram Kadam) ಪ್ರಶ್ನಿಸಿದ್ದಾರೆ. 


ಅಮರಾವತಿ ಸಂಸದ ನವನೀತ್ ರಾಣಾ (Navaneet Rana) ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಲ್ಸೆ ಪಾಟೀಲ್  (Maharashtra Home Minister Dilip Valse Patil)ಕೂಡ ಶಾಂತಿ ಕಾಪಾಡುವಂತೆ ಜನರಿಗೆ ಮನವಿ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ-ರಾಜ್ಯದ ಸರ್ಕಾರಿ PU ಕಾಲೇಜುಗಳಲ್ಲಿ ಈ ವರ್ಷ ವಿದ್ಯಾರ್ಥಿಗಳ ದಾಖಲಾತಿ ಭಾರಿ ಹೆಚ್ಚಳ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ