Terrorists Attack in Manipur: ಮಣಿಪುರದ (Manipur) ಚುರಚಂದಪುರ್ (Churachandapur District) ಜಿಲ್ಲೆಯಲ್ಲಿ ಹೊಂಚು ದಾಳಿ ನಡೆಸಲಾಗಿದೆ. ಈ ಭಯೋತ್ಪಾದಕರ ದಾಳಿಯಲ್ಲಿ (Terror Attack) ಅಸ್ಸಾಂ ರೈಫಲ್ಸ್ನ (Assam Riifles) ಕಮಾಂಡಿಂಗ್ ಆಫೀಸರ್ (Commanding Officer) ಮತ್ತು ಅವರ ಕುಟುಂಬ ಹುತಾತ್ಮರಾಗಿದ್ದಾರೆ. ಸಿಂಗತ್ ಉಪವಿಭಾಗದ ಎಸ್ ಸೆಹ್ಕೆನ್ ಗ್ರಾಮದ ಬಳಿ ಈ ದಾಳಿ (Terror Attack) ನಡೆದಿದೆ. ಕರ್ನಲ್ ಬಿಪ್ಲಬ್ ತ್ರಿಪಾಠಿ (CO-46 AR), ಅವರ ಪತ್ನಿ ಮತ್ತು ಅವರ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಇತರ ಗಾಯಾಳುಗಳನ್ನು ಬೆಹಿಯಾಂಗ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಇದನ್ನೂ ಓದಿ-ಗಾಂಧಿ ಹಾಗೂ ಗ್ಯಾಂಡಿ ಶಬ್ದದ ಮಧ್ಯೆ ವ್ಯತ್ಯಾಸವಿದೆ: ರಾಹುಲ್ ಟೀಕಿಸಿದ ಬಿಜೆಪಿ
Convoy of a Commanding Officer of an Assam Rifles unit ambushed by terrorists in Singhat sub-division of Manipur’s Churachandpur district. Family members of officer along with Quick Reaction Team were in convoy. Casualties feared. Ops underway, details awaited: Sources
— ANI (@ANI) November 13, 2021
ಏತನ್ಮಧ್ಯೆ, ಈ ದಾಳಿಯಲ್ಲಿ ಮೂವರು ಕ್ಯೂಆರ್ಟಿ ಸದಸ್ಯರು ಸಹ ಸಾವನ್ನಪ್ಪಿದ್ದಾರೆ. ಭದ್ರತಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬೆಂಗಾವಲು ಪಡೆಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಸೇನಾ ಮೂಲಗಳ ಪ್ರಕಾರ, ರಾಪಿಡ್ ಆಕ್ಷನ್ ಟೀಮ್ ಬೆಂಗಾವಲು ಪಡೆಯಲ್ಲಿ ಅಧಿಕಾರಿಯ ಕುಟುಂಬ ಸದಸ್ಯರು ಇದ್ದರು. ಇನ್ನು ಹೆಚ್ಚಿನ ಪ್ರಾಣಹಾನಿಯಾಗುವ ಸಾಧ್ಯತೆ ಇದೆ ಎಂದು ವರ್ತಿಸಲಾಗಿದೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಹೆಚ್ಚಿನ ಪ್ರಾಣಹಾನಿಯಾಗುವ ಭೀತಿ ಎದುರಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ರಾಜ್ಯದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಘಟನೆಯನ್ನು ಹೇಡಿತನದ ಕೃತ್ಯ ಎಂದು ಹೇಳಿ, ಕೃತ್ಯವನ್ನು ಖಂಡಿಸಿದ್ದಾರೆ.
ಇದನ್ನೂ ಓದಿ-ಕುಟುಂಬ ರಾಜಕಾರಣ ಜೆಡಿಎಸ್ ಪಕ್ಷದ ಸಿದ್ಧಾಂತ: ಬಿಜೆಪಿ ವ್ಯಂಗ್ಯ
Strongly condemn the cowardly attack on a convoy of 46 AR which has reportedly killed few personnel incl the CO & his family at Churachandpu today. State forces& Paramilitary already on their job to track down the militants. The perpetrators will be brought to justice: Manipur CM pic.twitter.com/z0bi8WN7TG
— ANI (@ANI) November 13, 2021
ಇದನ್ನೂ ಓದಿ-ರಾಜ್ಯದ ಸರ್ಕಾರಿ PU ಕಾಲೇಜುಗಳಲ್ಲಿ ಈ ವರ್ಷ ವಿದ್ಯಾರ್ಥಿಗಳ ದಾಖಲಾತಿ ಭಾರಿ ಹೆಚ್ಚಳ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ