ಅಮೆಜಾನ್, ಫ್ಲಿಪ್ಕಾರ್ಟ್ ಗೆ ಟಾಪ್ ಮಾರಾಟಗಾರರನ್ನು ಬಹಿರಂಗಪಡಿಸಲು ಸರ್ಕಾರ ಆದೇಶ
ಇ-ಕಾಮರ್ಸ್ ನ ಕಂಪನಿಗಳಾದ ಅಮೆಜಾನ್ ಇಂಡಿಯಾ ಮತ್ತು ಫ್ಲಿಪ್ಕಾರ್ಟ್ ತಮ್ಮ ಪ್ಲಾಟ್ಫಾರ್ಮ್ ಗಳಲ್ಲಿನ ಟಾಪ್ ಮಾರಾಟಗಾರರನ್ನು ಬಹಿರಂಗಪಡಿಸಲು ಕೋರಲಾಗಿದೆ.
ನವದೆಹಲಿ: ಇ-ಕಾಮರ್ಸ್ ನ ಕಂಪನಿಗಳಾದ ಅಮೆಜಾನ್ ಇಂಡಿಯಾ ಮತ್ತು ಫ್ಲಿಪ್ಕಾರ್ಟ್ ತಮ್ಮ ಪ್ಲಾಟ್ಫಾರ್ಮ್ ಗಳಲ್ಲಿನ ಟಾಪ್ ಮಾರಾಟಗಾರರನ್ನು ಬಹಿರಂಗಪಡಿಸಲು ಕೋರಲಾಗಿದೆ.
ನಿಯಮಗಳ ಉಲ್ಲಂಘನೆಯನ್ನು ಪರಿಶೀಲಿಸಲು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಇ-ಕಾಮರ್ಸ್ ಕಂಪನಿಗಳ ತನಿಖೆಯನ್ನು ಸೂಚಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ಹಬ್ಬದ ಹಿನ್ನಲೆಯಲ್ಲಿ ಇ- ಕಾಮರ್ಸ್ ಕಂಪನಿಗಳು ಹೆಚ್ಚಿನ ರಿಯಾಯತಿಯಿಂದಾಗಿ ಚಿಲ್ಲರೆ ಮಾರಾಟದ ಮೇಲೆ ಪ್ರಭಾವ ಬೀರಲಿದೆ.
ಇ-ಕಾಮರ್ಸ್ ಸಂಸ್ಥೆಗಳಿಗೆ ಉತ್ಪನ್ನಗಳನ್ನು ರಿಯಾಯಿತಿ ನೀಡುವ ಮೂಲಕ ಚಿಲ್ಲರೆ ಮಾರಾಟದಲ್ಲಿ ಪ್ರಾಬಲ್ಯ ಸಾಧಿಸಲು ಪರಭಕ್ಷಕ ಬೆಲೆಗಳನ್ನು ಬಳಸುವ ಹಕ್ಕಿಲ್ಲ ಎಂದು ಹೇಳಿದರು. 'ಅಮೆಜಾನ್ ನಲ್ಲಿನ ಮಾರಾಟಗಾರರು ಯಾವ ಉತ್ಪನ್ನಗಳನ್ನು ಮಾರಾಟ ಮಾಡಬೇಕೆಂದು ಮತ್ತು ಅವುಗಳ ಬೆಲೆಯಲ್ಲಿ ನಿರ್ಧರಿಸಲು ಸಂಪೂರ್ಣ ವಿವೇಚನೆಯನ್ನು ಹೊಂದಿದ್ದಾರೆ. ಅಮೆಜಾನ್ ತಮ್ಮ ಉತ್ಪನ್ನಗಳು ಮತ್ತು ಅದರ ಬೆಲೆಗಳಿಗೆ ಸಂಬಂಧಿಸಿದ ಮಾರಾಟಗಾರರ ನಿರ್ಧಾರದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಮತ್ತು ಭಾಗವಹಿಸುವುದಿಲ್ಲ ಎಂದು ಅಮೆಜಾನ್ ಇಂಡಿಯಾ ಕಂಪನಿ ವಕ್ತಾರರು ತಿಳಿಸಿದ್ದಾರೆ.
ಇನ್ನೊಂದೆಡೆಗೆ ಫ್ಲಿಪ್‌ಕಾರ್ಟ್ ಈ ಪ್ರಶ್ನೆಗಳಿಗೆ ಇದುವರೆಗೆ ಉತ್ತರಿಸಿಲ್ಲ ಎನ್ನಲಾಗಿದೆ. ಅಮೆಜಾನ್.ಇನ್ ಮತ್ತು ಫ್ಲಿಪ್ಕಾರ್ಟ್ ಈ ತಿಂಗಳ ಆರಂಭದಲ್ಲಿ ಆಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ದಾಖಲೆಯ ವಹಿವಾಟುಗಳನ್ನು ಪ್ರಕಟಿಸಿವೆ. ಅದೇ ರೀತಿ, ಫ್ಲಿಪ್‌ಕಾರ್ಟ್ ತನ್ನ ಆರು ದಿನಗಳ ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೊಸ ಗ್ರಾಹಕರ ಸಂಖ್ಯೆಯಲ್ಲಿ ಶೇಕಡಾ 50 ರಷ್ಟು ಹೆಚ್ಚಳವನ್ನು ದಾಖಲಿಸಿದೆ ಎಂದು ಹೇಳಿದರು. ಮಾರುಕಟ್ಟೆ ಸಂಶೋಧನಾ ಸಂಸ್ಥೆ ಫಾರೆಸ್ಟರ್ ಪ್ರಕಾರ, ಭಾರತದಲ್ಲಿ ಆನ್‌ಲೈನ್ ಚಿಲ್ಲರೆ ವ್ಯಾಪಾರಿಗಳು ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 29 ರವರೆಗೆ ಸುಮಾರು 8 4.8 ಬಿಲಿಯನ್ ಮಾರಾಟವನ್ನು ಗಳಿಸುವ ನಿರೀಕ್ಷೆಯಿದೆ.
ಕೈಗೆಟುಕುವ ಇಂಟರ್ನೆಟ್ ಮತ್ತು ಸ್ಮಾರ್ಟ್‌ಫೋನ್‌ಗಳ ಲಭ್ಯತೆಯು ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಂತಹ ಕಂಪನಿಗಳಿಗೆ ಭಾರತವನ್ನು ಆಕರ್ಷಕ ಮಾರುಕಟ್ಟೆಯನ್ನಾಗಿ ಮಾಡುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ.