ನವದೆಹಲಿ: ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್ ನಲ್ಲಿ (Amazon), ಯಾವ ವಸ್ತುಗಳು ಬೇಕಾದರೂ ಸಿಗುತ್ತವೆ. ಆದರೆ ಆರೋಗ್ಯಕ್ಕೆ (Health) ಹಾನಿಕಾರಕವಾಗಿರುವ ವಸ್ತುಗಳು ಕೂಡಾ ಈ ಸೈಟ್ ನಲ್ಲಿ ಲಭ್ಯವಾಗುತ್ತಿರುವುದು ಆತಂಕದ ವಿಚಾರ. ಉದಾಹರಣೆಗೆ, ಅಮೆಜಾನ್‌ನಲ್ಲಿ ಚಾಕ್ (chalk) ಅಥವಾ ಸ್ಲೇಟ್ ಪೆನ್ಸಿಲ್ ಅನ್ನು ತಿನ್ನಲು ಪ್ರೋತ್ಸಾಹಿಸಲಾಗುತ್ತಿದೆ. ಅಂದರೆ, ಅಮೆಜಾನ್‌ನಲ್ಲಿ ಮಾರಾಟ ಮಾಡುತ್ತಿರುವ ಚಾಕ್ ಅಥವಾ ಸ್ಲೇಟ್ ಪೆನ್ಸಿಲ್‌ಗಳನ್ನು ತಿನ್ನಲು ಕೂಡಾ ಯೋಗ್ಯ ಎನ್ನುವುದಾಗಿ ಬಿಂಬಿಸಲಾಗಿದೆ. ಈ ವಸ್ತುಗಳು ವ್ಯಕ್ತಿಯಲ್ಲಿ ಈಟಿಂಗ್ ಡಿಸ್ಆರ್ಡರ್ ಅನ್ನು ಹೆಚ್ಚಿಸುತ್ತದೆ.  


COMMERCIAL BREAK
SCROLL TO CONTINUE READING

ಲಾಭಕ್ಕಾಗಿ ಹೀಗೆ ಮಾಡಲಾಗುತ್ತಿದೆಯೇ ? 
ಕೆಲವರಿಗೆ ಚಾಕ್ (Chalk) ಅಥವಾ  ಸೀಮೆಸುಣ್ಣ ತಿನ್ನುವ ಕೆಟ್ಟ ಅಭ್ಯಾಸವಿರುತ್ತದೆ. ಇದರಿಂದ ಈಟಿಂಗ್ ಡಿಸ್ಆರ್ಡರ್ (Eating disorder) ಕಾಯಿಲೆ ಬರುತ್ತದೆ. ಆದರೆ, ಅಮೆಜಾನ್ (Amazon) ಇದನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಈ ಉತ್ಪನ್ನದ ಡಿಸ್ಕ್ರಿ ಪ್ಶನ್ ನಲ್ಲಿ study or eating natural white limestone slate pencils natural chalk ಎಂದು ಬರೆಯಲಾಗಿದೆ.  ಈ ಬಾಕ್ಸ್ 100 ಚಾಕ್ ಪೆನ್ಸಿಲ್‌ಗಳನ್ನು ಒಳಗೊಂಡಿದೆ. ಈ ಪೆನ್ಸಿಲ್ (Pencil) ರುಚಿಕರವಾಗಿರುತ್ತದೆ ಮತ್ತು ಬೋರ್ಡ್‌ನಲ್ಲಿ ಅಂದವಾಗಿ ಬರೆಯಲೂಬಹುದು ಎಂದು ಹೇಳಲಾಗಿದೆ.
 


ಹಣ ಇಲ್ಲವೇ? ಚಿಂತೆಬಿಡಿ Amazon, Paytm, Mobikwik ನೀಡುತ್ತಿವೆ ಉತ್ತಮ ಕೊಡುಗೆ


ಗ್ರಾಹಕರಿದ ತೀವ್ರ ವಿರೋಧ : 
ಮತ್ತೊಂದು ಲಿಸ್ಟಿಂಗ್ ಪ್ರಕಾರ , '‘SSKR  ಸ್ಲೇಟ್ ಪೆನ್ಸಿಲ್ ಕಿಡ್ಸ್ ನ್ಯಾಚುರಲ್ ಲೈಮ್ ಸ್ಟೋನ್ ಚಾಕ್ ಪೆನ್ಸಿಲ್ ಫಾರ್ ರೈಟಿಂಗ್ ಅಂಡ್ ಈಟಿಂಗ್' ಎಂದರೆ ಪೆನ್ಸಿಲ್ ಅನ್ನು ತಿನ್ನಬಹುದು ಎನ್ನುವಂತೆ ಬರೆಯಲಾಗಿದೆ. ಇದೀಗ ಇದರ ವಿರುದ್ಧ ಗ್ರಾಹಕರು ವಿರೋಧ ವ್ಯಕ್ತಪಡಿಸಿದ್ದಾರೆ.  ಈ ಉತ್ಪನ್ನದ (Product) ವಿವರಣೆ ತಪ್ಪಾಗಿದೆ. ಇದನ್ನು ತಿನ್ನುವುದಕ್ಕೆ ಸಾಧ್ಯವಿಲ್ಲ. ಆಕಸ್ಮಾತಾಗಿ ಮಗು ತಿಂದರೆ,  ಹೊಟ್ಟೆ ನೋವಿನ (Stomach ache) ಸಮಸ್ಯೆ ಕಾಣಿಸಿಕೊಳ್ಳಲಿದೆ ಎಂದು ಗ್ರಾಹಕರು ಕಾಮೆಂಟ್  ಮಾಡಿದ್ದಾರೆ. ಅಲ್ಲದೆ, ಈ ವಿವರಣೆಯನ್ನು ತೆಗೆದು ಹಾಕುವಂತೆ ಕೋರಿದ್ದಾರೆ. 


Hair)ಇಂಥಹ ವಸ್ತುಗಳನ್ನೇ ತಿನ್ನಲು ಬಯಸುತ್ತಾರೆ. 


ಇದನ್ನೂ ಓದಿ :  TV ಖರೀದಿಸುವವರಿಗೊಂದು ಗುಡ್ ನ್ಯೂಸ್ : TCL TV ಮೇಲೆ 57 ಶೇ ರಿಯಾಯಿತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.