ನವದೆಹಲಿ: ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದಲ್ಲಿ ಕೆಲವು ಸಮಯದಿಂದ ಸಾಕಷ್ಟು ಕೆಲಸಗಳು ನಡೆಯುತ್ತಿವೆ. ಕೆಲವು ಫೋನ್‌ಗಳು 18W ಕ್ವಿಕ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತಿದ್ದರೆ, ಕೆಲವು ಕಂಪನಿಗಳು ಇತ್ತೀಚೆಗೆ 100W ವರೆಗೆ ಚಾರ್ಜಿಂಗ್ ಪರಿಹಾರಗಳನ್ನು ತೋರಿಸಿವೆ. ಭವಿಷ್ಯದ ಸಾಧನಗಳು 125 W ವರೆಗೆ ಚಾರ್ಜಿಂಗ್ (Charging) ವೇಗವನ್ನು ಹೊಂದಬಹುದು ಅಂದರೆ ಸ್ಮಾರ್ಟ್‌ಫೋನ್‌ನ ಬ್ಯಾಟರಿಯನ್ನು ಚಾರ್ಜ್ ಮಾಡಲು ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.


COMMERCIAL BREAK
SCROLL TO CONTINUE READING

ಈಗ ಅಮೆರಿಕದ ಚಿಪ್ ತಯಾರಕ ಕಂಪನಿ ಕ್ವಾಲ್ಕಾಮ್ ಕ್ವಿಜ್ ಚಾರ್ಜ್ 5(Quiz Charge 5)ತಂತ್ರಜ್ಞಾನವನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದ್ದು ಇದರಿಂದ ಕೇವಲ 15 ನಿಮಿಷಗಳಲ್ಲಿ ಸ್ಮಾರ್ಟ್‌ಫೋನ್ ಚಾರ್ಜ್ ಆಗಲಿದೆ.


ರೈಲು ಪ್ರಯಾಣಿಕರಿಗೆ ಮಹತ್ವದ ಸೂಚನೆ, ಶೀಘ್ರವೇ ಜಾರಿಗೆ ಬರಲಿದೆ ಈ ನೂತನ ನಿಯಮ


ಕ್ವಾಲ್ಕಾಮ್ನ ಕ್ವಿಕ್ ಚಾರ್ಜ್ 5 ತಂತ್ರಜ್ಞಾನವು 100 ವ್ಯಾಟ್ ಅಥವಾ ಹೆಚ್ಚಿನದನ್ನು ಚಾರ್ಜ್ ಮಾಡಲು ಬೆಂಬಲಿಸುತ್ತದೆ. ಇದು ಕ್ವಿಕ್ ಚಾರ್ಜ್ 4.0 / 4+ ನ ನವೀಕರಿಸಿದ ಆವೃತ್ತಿಯಾಗಿದೆ. ಇದರ ಸಹಾಯದಿಂದ ಫೋನ್‌ನ ಚಾರ್ಜಿಂಗ್ ವೇಗವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಕ್ವಿಕ್ ಚಾರ್ಜ್ 5ಕ್ಕೆ ಸಂಬಂಧಿಸಿದಂತೆ ಇದರ ಸಹಾಯದಿಂದ ಸ್ಮಾರ್ಟ್‌ಫೋನ್‌ನ (Smartphone) ಬ್ಯಾಟರಿಯನ್ನು ಕೇವಲ 5 ನಿಮಿಷಗಳಲ್ಲಿ 0 ರಿಂದ 50 ಪ್ರತಿಶತದವರೆಗೆ ಚಾರ್ಜ್ ಮಾಡಲಾಗುವುದು ಮತ್ತು ಬ್ಯಾಟರಿ ಪೂರ್ಣ ಚಾರ್ಜ್‌ಗೆ ಕೇವಲ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.


ಇದರ ಚಾರ್ಜಿಂಗ್ ವೇಗವು ಹಳೆಯ ಆವೃತ್ತಿಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. ಇದು ಮಾತ್ರವಲ್ಲ ಇದು ಹಿಂದಿನ ಆವೃತ್ತಿಗೆ ಹೋಲಿಸಿದರೆ 70 ಪ್ರತಿಶತ ಹೆಚ್ಚು ಪರಿಣಾಮಕಾರಿಯಾಗಿದೆ, ಜೊತೆಗೆ ವಿದ್ಯುತ್ ವಿತರಣೆಯ ವಿಷಯದಲ್ಲಿ ಮೊದಲ ಜನ್ ಕ್ವಿಕ್ ಚಾರ್ಜ್‌ಗಿಂತ 10 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ. ಇದಲ್ಲದೆ ಇದು 2 ಎಸ್ ಬ್ಯಾಟರಿ ಮತ್ತು 20 ವೋಲ್ಟ್ ಪವರ್ ಡೆಲಿವರಿ ಬೆಂಬಲದೊಂದಿಗೆ ಬರುತ್ತದೆ. ಬ್ಯಾಟರಿ ಅವಧಿಯನ್ನು ಹೆಚ್ಚಿಸುವ ಸಲುವಾಗಿ ಇದು ಕ್ವಾಲ್ಕಾಮ್ ಬ್ಯಾಟರಿ ಸೇವರ್ ಮತ್ತು ಅಡಾಪ್ಟರ್ ಸಾಮರ್ಥ್ಯಕ್ಕಾಗಿ ಸ್ಮಾರ್ಟ್ ಗುರುತಿಸುವಿಕೆಯಂತಹ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂದು ಕಂಪನಿ ತಿಳಿಸಿದೆ.


ಪ್ರಸ್ತುತ ಚೀನಾದಲ್ಲಿರುವ ಈ ಭಾರತೀಯ ಮೊಬೈಲ್ ಕಂಪನಿಯಿಂದ ಮಹತ್ವದ ನಿರ್ಧಾರ


ಇದು ಹೇಗೆ ಕೆಲಸ ಮಾಡುತ್ತದೆ?
ಇದರಲ್ಲಿ 2 ಎಸ್ ಬ್ಯಾಟರಿಗಳು ಮತ್ತು 20 ವಾಲ್ಟ್ ವಿದ್ಯುತ್ ವಿತರಣೆಯಿಂದಾಗಿ ವೇಗದ ಚಾರ್ಜಿಂಗ್ ಸಾಧ್ಯವಿದೆ. ಇದರರ್ಥ ಮುಂಬರುವ ಸಮಯದಲ್ಲಿ ನೀವು ಎರಡು ಬ್ಯಾಟರಿ ಪ್ಯಾಕ್‌ಗಳನ್ನು ಸ್ಮಾರ್ಟ್‌ಫೋನ್‌ನಲ್ಲಿ ನೋಡುತ್ತೀರಿ. ಇದು ಚಾರ್ಜಿಂಗ್ ವೇಗವನ್ನು ದ್ವಿಗುಣಗೊಳಿಸುತ್ತದೆ. ಚಾರ್ಜಿಂಗ್ ವಾಲ್ಟ್ ಅಧಿಕವಾಗಿದ್ದಾಗ ಕ್ವಾಲ್ಕಾಮ್ ಕ್ವಿಕ್ ಚಾರ್ಜ್ 5 ಹಿಂದಿನ ಆವೃತ್ತಿಯ ಕ್ಲಿಕ್ ಚಾರ್ಜ್ 4 ಗಿಂತ 10 ಡಿಗ್ರಿ ಸೆಲ್ಸಿಯಸ್ ತಂಪಾಗಿರುತ್ತದೆ ಎಂದು ಹೇಳುತ್ತದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865 ಮತ್ತು ಸ್ನಾಪ್‌ಡ್ರಾಗನ್ 865 ಪ್ಲಸ್ ಚಿಪ್‌ಸೆಟ್‌ಗಳೊಂದಿಗೆ ಬರುವ ಪ್ರಮುಖ ಫೋನ್‌ಗಳು ಈಗಾಗಲೇ ಕ್ವಿಕ್ ಚಾರ್ಜ್ 5 ತಂತ್ರಜ್ಞಾನವನ್ನು ಬೆಂಬಲಿಸುತ್ತಿವೆ.