ಲಕ್ನೋ:  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿ ಲೋಕಸಭಾ ಕ್ಷೇತ್ರದಿಂದ ಸಲ್ಲಿಸಿರುವ ನಾಮಪತ್ರ ಸಿಂಧು ಆಗಿರುವುದಾಗಿ ಉತ್ತರ ಪ್ರದೇಶ ಚುನಾವಣಾ ಆಯೋಗ ತಿಳಿಸಿದೆ.


COMMERCIAL BREAK
SCROLL TO CONTINUE READING

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ಪ್ರದೇಶದ ಅಮೇಥಿ ಮತ್ತು ಕೇರಳದ ವಯನಾಡ್ ನಿಂದ ಸ್ಪರ್ಧಿಸುತ್ತಿದ್ದಾರೆ. ರಾಹುಲ್ ಗಾಂಧಿ ಅಮೇಥಿಯಲ್ಲಿ ಸಲ್ಲಿಸಿದ್ದ ನಾಮಪತ್ರಕ್ಕೆ ಸ್ವತಂತ್ರ ಅಭ್ಯರ್ಥಿ ಧ್ರುವಪಾಲ್ ಕೌಶಲ್ ಆಕ್ಷೇಪ ವ್ಯಕ್ತಪಡಿಸಿದ್ದರು.


ಭಾರತದಲ್ಲಿ ಅವರು ತಮ್ಮ ಹೆಸರನ್ನು ರಾಹುಲ್‌ ಗಾಂಧಿ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರಿಗೆ ವಿದೇಶದಲ್ಲಿ ರಾಹುಲ್‌ ವಿನ್ಸಿ ಎಂದೂ ಹೆಸರಿದೆ. ಇನ್ನು ಈ ಹಿಂದೆ ರಾಹುಲ್‌ ತಾವು ಡೆವಲಪ್‌ಮೆಂಟ್‌ ಎಕನಾಮಿಕ್ಸ್‌ನಲ್ಲಿ ಎಂ.ಫಿಲ್‌ ಪದವಿ ಪಡೆದಿದ್ದಾಗಿ ಹೇಳಿಕೊಂಡಿದ್ದರು. ಪ್ರಮಾಣ ಪತ್ರದಲ್ಲಿ ರಾಹುಲ್ ಗಾಂಧಿ ಅವರ ಹೆಸರು ರೌಲ್ ವಿನ್ಸಿ ಎಂದು ಮುದ್ರಿತವಾಗಿದೆ. ಈ ಬಗ್ಗೆ ರಾಹುಲ್ ಗಾಂಧಿ ಅವರು ಸ್ಪಷ್ಟನೆ ನೀಡಬೇಕು ಎಂದು ಧ್ರುವಪಾಲ್ ಕೌಶಲ್ ತಾವು ಚುನಾವಣಾ ಆಯೋಗಕ್ಕೆ ತಾವು ಸಲ್ಲಿಸಿದ್ದ ದೂರಿನಲ್ಲಿ ಆಕ್ಷೇಪವೆತ್ತಿದ್ದರು.


ಈ ಕುರಿತು ರಾಹುಲ್ ಗಾಂಧಿ ಪರ ವಕೀಲರು ಇಂದು ಚುನಾವಣಾ ಆಯೋಗಕ್ಕೆ ಸ್ಪಷ್ಟನೆ ನೀಡಿದರು. ರಾಹುಲ್ ಗಾಂಧಿ ಬ್ರಿಟಿಷ್ ಪೌರತ್ವ ಹೊಂದಿಲ್ಲ ಎಂದು ರೌಲ್ ವಿನ್ಸ್ ಹಾಗೂ ರಾಹುಲ್ ಗಾಂಧಿ ಎಂಬ ಹೆಸರಿನ ಗೊಂದಲದ ಬಗ್ಗೆ ರಾಹುಲ್ ಪರ ವಕೀಲರ ವಾದವನ್ನು ಪುರಸ್ಕರಿಸಿದ ಚುನಾವಣಾ ಆಯೋಗ ರಾಹುಲ್ ಗಾಂಧಿ ಅವರ ವಕೀಲ ನೀಡಿರುವ ಉತ್ತರ ಸಮರ್ಪಕವಾಗಿದ್ದು, ಅಫಿಡವಿಟ್ ನಲ್ಲಿ ಯಾವುದೇ ಲೋಪ ದೋಷ ಕಂಡು ಬಂದಿಲ್ಲ. ನಾಮಪತ್ರ ಅಸಿಂಧುಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ.