ರಾಯ್ಬರೇಲಿ: ಉತ್ತರಪ್ರದೇಶದಲ್ಲಿ ಋತುವಿನ ಪಾದರಸ ಏರಿಕೆಯಾದ ನಂತರ ರಾಜಕೀಯ ಪಾದರಸವು ಶನಿವಾರ ರಾಯ್ಬರೇಲಿಯಲ್ಲಿ ಏರಿಕೆಯಾಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಇಂದು ಸೋನಿಯಾ ಗಾಂಧಿಯವರ ಪ್ರಬಲ ಕ್ಷೇತ್ರವಾದ ರಾಯ್ಬರೇಲಿಗೆ ಭೇಟಿ ನೀಡಲಿದ್ದಾರೆ. ಲೋಕಸಭಾ ಚುನಾವಣೆ ತಯಾರಿಗಾಗಿ ಶಾ ಮತ್ತು ಯೋಗಿಯ ಈ ಭೇಟಿ ನಡೆಯುತ್ತಿದೆ ಎಂದು ನಂಬಲಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ, ರಾಯ್ ಬರೇಲಿಯ ಮೂಲಕ ಕಾಂಗ್ರೆಸ್ ಕೋಟೆಗೆ ಪ್ರವೇಶಿಸಲು ಬಿಜೆಪಿ ಚುನಾವಣಾ ಚಾಣಕ್ಯ ಯೋಜಿಸುತ್ತಿದ್ದಾರೆ ಮತ್ತು ಯೋಗಿ ಅವರೊಂದಿಗೆ ಈ ಯೋಜನೆಯಲ್ಲಿ ಸಾಥ್ ನೀಡುತ್ತಿದ್ದಾರೆ ಎಂದು ಊಹಿಸಲಾಗಿದೆ.


COMMERCIAL BREAK
SCROLL TO CONTINUE READING

ನಾಯಕರ ಭೇಟಿಯ ಬಗ್ಗೆ ಮಾಹಿತಿ ನೀಡಿರುವ ಬಿಜೆಪಿ ರಾಯ್ಬರೇಲಿ ಉಸ್ತುವಾರಿ ಹಿರೋ ಬಾಜ್ಪಾಯ್ ಅವರು ಕಾಂಗ್ರೆಸ್ ನ ಪ್ರಬಲ ಕ್ಷೇತ್ರವಾದ ರಾಯ್ಬರೇಲಿಯಲ್ಲಿ ಅಮಿತ್ ಶಾ ರ್ಯಾಲಿ ನಡೆಸಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು. ಅಲ್ಲದೆ, ಪಕ್ಷದ ಲಕ್ಷಾಂತರ ಕಾರ್ಯಕರ್ತರನ್ನು ಒಳಗೊಳ್ಳುವ ಈ ರ್ಯಾಲಿ ಐತಿಹಾಸಿಕ ರ್ಯಾಲಿ ಎಂದು ತಿಳಿಸಿದರು. ಯೋಗಿ ಆದಿತ್ಯನಾಥ್, ರಾಜ್ಯ ಬಿಜೆಪಿ ಮುಖ್ಯಸ್ಥ ಮಹೇಂದ್ರ ನಾಥ್ ಪಾಂಡೆ ಮತ್ತು ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಮತ್ತು ಕೇಶವ ಪ್ರಸಾದ್ ಮೌರ್ಯ ಈ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.


ಅಮಿತ್ ಶಾ ಕಾರ್ಯಕ್ರಮದ ಒಂದು ನೋಟ


  • ಬೆಳಿಗ್ಗೆ 11.40 ಗಂಟೆಗೆ ಶಾ ಅವರು ಲಕ್ನೋದ ಅಮೌಸಿ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ.

  • ಅಮೌಸಿ ವಿಮಾನ ನಿಲ್ದಾಣದಿಂದ ಹೆಲಿಕಾಫ್ಟರ್ ಮೂಲಕ ರಾಯ್ಬರೇಲಿ ತಲುಪಲಿರುವ ಶಾ.

  • ಜಿಐಸಿ ಗ್ರೌಂಡ್ ರಾಯ್ಬರೇಲಿಯಲ್ಲಿ ಸಾರ್ವಜನಿಕ ಸಭೆ.

  • ಸಾರ್ವಜನಿಕ ಸಭೆಯ ನಂತರ, ರಾಯ್ಬರೇಲಿ ಲಕ್ನೌ ತಲುಪಲಿದ್ದಾರೆ.

  • ಸಂಜೆ ಲಕ್ನೌ ತಲುಪಿದ ನಂತರ ತಡರಾತ್ರಿ ದೆಹಲಿಗೆ ಹಿಂದಿರುಗಲಿರುವ ಶಾ.


ರಾಯ್ಬರೇಲಿ ಮತ್ತು ಅಮೇಥಿಯಲ್ಲಿ ಬಿಜೆಪಿ ಕಸರತ್ತು
2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ತನ್ನ ಬಲ ಪ್ರದರ್ಶಿಸಿತ್ತಾದರೂ, ಅದು ರಾಯ್ಬರೇಲಿ ಮತ್ತು ಅಮೇಥಿ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಅಮೇಥಿಯಲ್ಲಿ ರಾಹುಲ್ ಗಾಂಧಿಯವರನ್ನು ಸೋಲಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಶಾ ಈಗಿನಿಂದಲೇ ರಣತಂತ್ರ ರೂಪಿಸುತ್ತಿದ್ದಾರೆ. ಇಂದು ರಾಯ್ಬರೇಲಿಯಲ್ಲಿ ನಡೆಯುವ ರ್ಯಾಲಿ ಹಾಗೂ ಸಾರ್ವಜನಿಕ ಸಭೆಯಲ್ಲಿ ಶಾ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಲ್ಲಿ 2019 ಸಾರ್ವತ್ರಿಕ ಚುನಾವಣೆಗಳಿಗೆ ಪಕ್ಷದ ಸಿದ್ಧತೆಗಳನ್ನು ಪರಿಶೀಲಿಸಬಹುದು ಎಂದು ಹೇಳಲಾಗಿದೆ.


ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಮೇಥಿಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕೇಂದ್ರ ಸಚಿವ ಸ್ಮೃತಿ ಇರಾನಿ, ಅವರು ಸೋಲು ಅನುಭವಿಸಬೇಕಾಯಿತು. ಚುನಾವಣೆಯಲ್ಲಿ ಸೋತ ನಂತರ ನಿಯಮಿತವಾಗಿ ಅಮೇಥಿಗೆ ಭೇಟಿ ನೀಡುತ್ತಿರುವ ಇರಾನಿ, ಅಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ, ಬಿಜೆಪಿ ಅವರನ್ನು ತಮ್ಮ ಅಭ್ಯರ್ಥಿಯಾಗಿ ಮತ್ತೆ ಕಣಕ್ಕಿಳಿಸುವ ನಿರೀಕ್ಷೆ ಇದೆ.