ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಲಾಕ್ ಡೌನ್ ನ ಪ್ರಸ್ತುತ ಹಂತವು ಮೇ 31ಕ್ಕೆ ಮುಕ್ತಾಯಗೊಳ್ಳಲಿರುವ ಹಿನ್ನಲೆಯಲ್ಲಿ ಅದರ ವಿಸ್ತರಣೆ ಅಥವಾ ಕೊನೆಗೊಳಿಸುವ ಬಗ್ಗೆ ಅವರ ಅಭಿಪ್ರಾಯಗಳನ್ನು ಕೇಳಿದ್ದಾರೆ.


COMMERCIAL BREAK
SCROLL TO CONTINUE READING

ಎಲ್ಲಾ ಮುಖ್ಯಮಂತ್ರಿಗಳು ಅವರು ಹೇಗೆ ಮುಂದುವರಿಯಲು ಬಯಸುತ್ತಾರೆ ಎಂಬ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ, ಪ್ರಧಾನ ಮಂತ್ರಿಗಳ ಕಚೇರಿ ಜೂನ್ 1 ರಿಂದ ಮುಂದಿನ ದಾರಿ ನಿರ್ಧರಿಸಲು ಸಂಪೂರ್ಣ ಲಾಕ್‌ಡೌನ್ ಅವಧಿಯನ್ನು ಪರಿಶೀಲಿಸುವಲ್ಲಿ ನಿರತವಾಗಿದೆ.ಇದಕ್ಕೂ ಮೊದಲು ಸಾಮಾನ್ಯವಾಗಿ ಕ್ಯಾಬಿನೆಟ್ ಕಾರ್ಯದರ್ಶಿಗಳು ರಾಜ್ಯಗಳನ್ನು ಸಂಪರ್ಕವನ್ನು ಮಾಡುತ್ತಿದ್ದರು.ಆದರೆ ಈ ಸಾರಿ ಶಾ ಅವರ ಕ್ರಮವು ರಾಜಕೀಯ ಪ್ರಭಾವವನ್ನು ಹೊಂದಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ


ಪ್ರತಿಪಕ್ಷಗಳು ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಂದ ಕೊರೊನಾ ವೈರಸ್ ವಿಚಾರದ ಬಗ್ಗೆ ತೀವ್ರವಾಗಿ ಟೀಕಿಸುವ ಬಗ್ಗೆ ಸರ್ಕಾರವು ಕಳವಳ ವ್ಯಕ್ತಪಡಿಸಿದೆ, ಈ ಹಿನ್ನಲೆಯಲ್ಲಿ ಕೇಂದ್ರ ತನ್ನ ನಿಲುವನ್ನು ಬದಲಾಯಿಸಲು ಮುಂದಾಗಿದೆ. ಗೃಹ ಸಚಿವಾಲಯದ ಮೂಲಗಳು ಲಾಕ್ ಡೌನ್ ಬಗ್ಗೆ ಮುಂದಿನ ದಾರಿ ರಾಜಕೀಯ ಕರೆ ಎಂದು ಹೇಳಿವೆ. ಸರ್ಕಾರದ ಆಯ್ಕೆಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯೊಂದಿಗೆ ಮುಂದುವರಿಯುವುದು ಸೇರಿದೆ, ಇದು ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಕೇಂದ್ರಕ್ಕೆ ಅಧಿಕಾರ ನೀಡುತ್ತದೆ.