ನವದೆಹಲಿ: 'ಅಮ್ಫನ್'  ಚಂಡಮಾರುತ 1999ರ ಒಡಿಶಾ ಚಂಡಮಾರುತದ ಬಳಿಕ ಎರಡನೇ ಗಂಭೀರ ಮತ್ತು ಅತಿ ದೊಡ್ಡ  ಸೂಪರ್ ಸೈಕ್ಲೋನ್ ಆಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಇದರ ಮೇಲೆ ನಿಗಾವಹಿಸಲು ನಾವು ಎಲ್ಲಾ ರೀತಿಯ ಸಾಧನಗಳು ಹಾಗೂ ತಂತ್ರಜ್ಞಾನಗಳನ್ನು ಬಳಸುತ್ತಿದ್ದೇವೆ. ಅಮ್ಫನ್ ಚಂಡಮಾರುತದ ಪ್ರಸ್ತುತ ವಿಂಡ್ ಸ್ಪೀಡ್ ಗಂಟೆಗೆ 200-240 ಕಿ.ಮೀ ಗಳಷ್ಟಿದ್ದು, ಇದು ವಾಯುವ್ಯ ದಿಕ್ಕಿನಲ್ಲಿ ಗಂಟೆಗೆ 15 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ.ಆದರೆ ಈ ವೇಗ ಇನ್ನೂ ಹೆಚ್ಚಾಗಲಿದೆ ಎಂಬುದು ನಮ್ಮ ಅಂದಾಜು ಎಂದು ಇಲಾಖೆ ಹೇಳಿದೆ.


COMMERCIAL BREAK
SCROLL TO CONTINUE READING

ಈ ಸೂಪರ್ ಸೈಕ್ಲೋನ್ ಪಶ್ಚಿಮ ಬಂಗಾಳ-ಬಾಂಗ್ಲಾದೇಶದ ಕರಾವಳಿ ಪ್ರದೇಶವನ್ನು ಪಶ್ಚಿಮ ಬಂಗಾಳದ ದಿಘಾ ಮತ್ತು ಬಾಂಗ್ಲಾದೇಶದ ಹತಿಯಾ ದ್ವೀಪಗಳ ನಡುವೆ ಮೇ 20 ರ ಮಧ್ಯಾಹ್ನದಿಂದ ಸಂಜೆಯ ನಡುವೆ  ದಾಟಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಈ ವೇಳೆ ಚಂಡಮಾರುತದ ವಿಂಡ್ ಸ್ಪೀಡ್  155-165 ಕಿ.ಮೀ ಗಳಷ್ಟಿರಲಿದ್ದು, 185 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಇಲಾಖೆ ಹೇಳಿದೆ. ಸದ್ಯ ಅಮ್ಫನ್ ಚಂಡಮಾರುತ ಭಾರಿ ಭೀಕರ ಮತ್ತು ಅಪಾಯಕಾರಿ ರೂಪವನ್ನು ತಳೆದಿದ್ದು, ಬುಧವಾರ ಭೂಕುಸಿತವನ್ನು ತರಲಿದೆ ಎಂದು NDRF ಎಚ್ಚರಿಕೆ ನೀಡಿದೆ. ಇದು ಅತ್ಯಂತ ಗಂಭೀರವಾದ ಚಂಡಮಾರುತವಾಗಿರುವ ಕಾರಣ ಅದಕ್ಕೆ ತಕ್ಕಂತೆ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದೆ.


ಚಂಡಮಾರುತದ ಕಾರಣ ಬುಧವಾರ ಪಶ್ಚಿಮ ಬಂಗಾಳ ಮತ್ತು ಓಡಿಷಾದ ಕಡಲು ತೀರಗಳಲ್ಲಿ ಭಾರಿ ಬಿರುಗಾಳಿಯೊಂದಿಗೆ ಮಳೆ ಬೀಳಲಿದೆ. ನಾರ್ತ್ ಕೊಸ್ತಲ್ ಓಡಿಷಾದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಪೂರ್ವ ಹಾಗೂ ಪಶ್ಚಿಮ ಮೆದಿನಾಪುರ್, ದಕ್ಷಿಣ ಹಾಗೂ ಉತ್ತರ ಪರಗನಾ, ಹಾವ್ಡಾ, ಹೂಗ್ಲಿ, ಕೊಲ್ಕತ್ತಾ ಹಾಗೂ ಅದಕ್ಕೆ ಹೊಂದಿಕೊಂಡಂತೆ ಇರುವ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳಲಿದೆ. ಭಾರಿ ಬಿರುಗಾಳಿಯ ಕಾರಣ ವಿದ್ಯುತ್ ಕಂಬಗಳು, ಕಚ್ಚಾ ಮನೆಗಳು, ಹೋರ್ಡಿಂಗ್ಗಳು ಹಾರಿಹೋಗುವ ಸಾದ್ಯತೆ ವರ್ತಿಸಲಾಗುತ್ತಿದ್ದು, ರೈಲು ಹಾಗೂ ರಸ್ತೆ ಸಾರಿಗೆ ಅಸ್ತವ್ಯಸ್ತಗೊಳ್ಳಲಿದೆ ಎನ್ನಲಾಗಿದೆ.


ಇಂದು, ಅಮ್ಫನ್ ಸೂಪರ್ ಚಂಡಮಾರುತದ ಕುರಿತು ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯ ಸಭೆ ನಡೆದಿದೆ. ಇದರ ನಂತರ ಮಂಗಳವಾರ ಸಂಜೆ 4 ಗಂಟೆಗೆ ಭಾರತ ಹವಾಮಾನ ವಿಭಾಗದ ಮಹಾನಿರ್ದೇಶಕರು ಮತ್ತು ಎನ್‌ಡಿಆರ್‌ಎಫ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಈ ಸಭೆಯಲ್ಲಿ ಎನ್‌ಡಿಆರ್‌ಎಫ್ ಡಿಜಿ ಎಸ್‌ಎನ್ ಪ್ರಧಾನ್, ಗೃಹ ಸಚಿವರು ಪಶ್ಚಿಮ ಬಂಗಾಳ ಮತ್ತು ಒಡಿಶಾದ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ಅಗತ್ಯ ಸಿದ್ಧತೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಎರಡೂ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ಏತನ್ಮಧ್ಯೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದ 3 ಕರಾವಳಿ ಜಿಲ್ಲೆಗಳಿಂದ ಕನಿಷ್ಠ 3 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ. ಅವರನ್ನು ಪರಿಹಾರ ಶಿಬಿರಗಳಿಗೆ ಕಳುಹಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗುರುವಾರ, ಬುಧವಾರ  ಬೆಳಗ್ಗೆ ರಾಜ್ಯದ ವಲಸೆ ಕಾರ್ಮಿಕರನ್ನು ಮರಳಿ ಕರೆತರಬಾರದು ಎಂದು ರೈಲ್ವೆ ಇಲಾಖೆಗೆ  ಮನವಿ ಮಾಡಿದ್ದಾರೆ. ಅಮ್ಫಾನ್ ಚಂಡಮಾರುತವನ್ನು ಎದುರಿಸಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.


NDRFನ ಒಟ್ಟು 34 ತುಕಡಿಗಳನ್ನು ನಿಯೋಜಿಸಲಾಗಿದೆ
ಈ ವೇಳೆ ಮಾತನಾಡಿರುವ NDRF DG, ನಾವು ಒಟ್ಟಿಗೆ ಎರಡು ಅನಾಹುತಗಳನ್ನು ಎದುರಿಸುತ್ತಿರುವುದು ಇದೆ ಮೊದಲಬಾರಿಗೆ ಎಂದು ಹೇಳಿದ್ದಾರೆ. ದೇಶಾದ್ಯಂತ ಒಂದೆಡೆ ಈಗಾಗಲೇ ನಾವು ಕೊವಿಡ್ ಪ್ರಕೋಪವನ್ನು ಎದುರಿಸುತ್ತಿದ್ದಾರೆ ಇನ್ನೊಂದೆಡೆ ಸೂಪರ್ ಸೈಕ್ಲೋನ್ ಆತಂಕ ಎದುರಾಗಿದೆ ಎಂದು ಡಿಜಿ ಹೇಳಿದ್ದಾರೆ. ಈ ಸವಾಲಿನ ಗಂಭೀರತೆಗೆ ಅನುಗುಣವಾಗಿ ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಎನ್‌ಡಿಆರ್‌ಎಫ್‌ನ ಒಟ್ಟು 34 ತಂಡಗಳನ್ನು ನಿಯೋಜಿಸಲಾಗಿದ್ದು, 7 ತಂಡಗಳು ಸ್ಟ್ಯಾಂಡ್‌ಬೈನಲ್ಲಿವೆ. ಈ ಪೈಕಿ 15 ತಂಡಗಳನ್ನು ಒಡಿಶಾದಲ್ಲಿ ಮತ್ತು 19 ತಂಡಗಳನ್ನು ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಲಾಗಿದೆ. ಚಂಡಮಾರುತದಿಂದ ಪ್ರಭಾವಿತಕ್ಕೆ ಒಳಗಾಗಬಹುದಾದ ಸ್ಥಳಗಳಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು,  ಸೂಪರ್ ಸೈಕ್ಲೋನ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಚಂಡಮಾರುತದ ಪ್ರಭಾವದಿಂದ ಸಂಪೂರ್ಣ ಸಂಪರ್ಕ ಕಡೆದು  ಹೋದರು ಕೂಡ ಈ ತಂಡಗಳನ್ನು ಸಂಪರ್ಕಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.