ಅಮೃತಸರ: ಅಮೃತಸರದಲ್ಲಿರುವ ನಿರಂಕಾರಿ ಪಂಥದ ಪ್ರಾರ್ಥನಾ ಮಂದಿರದ ಮೇಲೆ ದಾಳಿ ಮಾಡಿರುವ ವಿಚಾರವಾಗಿ ಭಾನುವಾರದಂದು ಪೊಲೀಸರು ಇಬ್ಬರು ಅನುಮಾನಾಸ್ಪದ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಇಬ್ಬರೂ ವಿದ್ಯಾರ್ಥಿಗಳು ತಮ್ಮ ಗುರುತಿನ ಕಾರ್ಡ್ ನ್ನು ತೋರಿಸಲು ವಿಫಲರಾಗಿದ್ದರಿಂದ ಬಥಿಂಡಾದ ಅಜಿತ್ ರಸ್ತೆಯ ಅತಿಥಿ ಗೃಹದಿಂದ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಪೊಲೀಸರು ಈಗ ಅವರನ್ನು ಪ್ರಶ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಭಾನುವಾರ ನಗರದ ಹೊರವಲಯದಲ್ಲಿರುವ ಅಮೃತಸರ್ ರಾಜಸಾನ್ಸಿಯ ಸಮೀಪದ ಅದ್ಲ್ವಾಲ್ ಹಳ್ಳಿಯಲ್ಲಿರುವ ನಿರಂಕರಿ ಭವನದ ಪ್ರಾರ್ಥನಾ ಸಭಾಂಗಣದಲ್ಲಿ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದರು.ದಾಳಿ ನಡೆಸುವ ವೇಳೆಯಲ್ಲಿ ಅವರು ಮುಖವಾಡ ಧರಿಸಿದ್ದರು ಎಂದು ತಿಳಿದುಬಂದಿದೆ.


ಸಂತ ನಿರಾಂಕರಿ ಮಿಷನ್ ಒಂದು ಆಧ್ಯಾತ್ಮಿಕ ಸಂಘಟನೆಯಾಗಿದೆ ಮತ್ತು ಇಲ್ಲಿನ ಭವನವು ಅಂತರರಾಷ್ಟ್ರೀಯ ವಿಮಾನನಿಲ್ದಾಣ ಮತ್ತು ಇಂಡೋ-ಪಾಕ್ ಗಡಿಯಲ್ಲಿದೆ. ಸೋಮವಾರದಂದು ಪೊಲೀಸರು ಇಬ್ಬರು ಸ್ಥಳೀಯ ಯುವಕರ ಕೈವಾಡ  ಈ ದಾಳಿಯಲ್ಲಿ ಇರುವುದನ್ನು ಅವರು ದೃಢಪಡಿಸಿದ್ದಾರೆ. ಈ ಯುವಕರು ಆಶ್ರಮದ ಆವರಣದಲ್ಲಿ ಎರಡು ಬಾರಿ ಸಮೀಕ್ಷೆ ನಡೆಸಿದ್ದಾರೆ ಮತ್ತು ಪ್ರತಿ ಭಾನುವಾರದಂದು ಧಾರ್ಮಿಕ ಸಭೆ ನಡೆಯುತ್ತದೆ ಎಂದು ತಿಳಿದಿದ್ದರು ಎನ್ನಲಾಗಿದೆ.


 ಈ ಘಟನೆಯ ಕುರಿತಾಗಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪ್ರತಿಕ್ರಿಯಿಸುತ್ತಾ ತನಿಖಾ ಸಂಸ್ಥೆಗಳು " ಈ ದಾಳಿಯ ರೂವಾರಿಗಳನ್ನು ಪತ್ತೆ ಹಚ್ಚಿದ್ದಾರೆ ಶೀಘ್ರದಲ್ಲೇ ಅವರನ್ನು ಹಿಡಿಯಲಾಗುವುದು" ಎಂದು ಹೇಳಿದರು.