ಕಾಶ್ಮೀರದಲ್ಲಿ ಸೇಬು ಹಣ್ಣು ಮಾರುತ್ತಿದ್ದ ವ್ಯಾಪಾರಿ ಹತ್ಯೆಗೈದ ಉಗ್ರರು
ಪಂಜಾಬ್‌ನ ಸೇಬು ವ್ಯಾಪಾರಿಯೊಬ್ಬರನ್ನು ಇಂದು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಮೂರು ದಿನಗಳಲ್ಲಿ ರಾಜ್ಯದ ಹೊರಗಿನ ವ್ಯಕ್ತಿಯೊಬ್ಬನ ಮೂರನೇ ಹತ್ಯೆಯಾಗಿದೆ.
ನವದೆಹಲಿ: ಪಂಜಾಬ್‌ನ ಸೇಬು ವ್ಯಾಪಾರಿಯೊಬ್ಬರನ್ನು ಇಂದು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಮೂರು ದಿನಗಳಲ್ಲಿ ರಾಜ್ಯದ ಹೊರಗಿನ ವ್ಯಕ್ತಿಯೊಬ್ಬನ ಮೂರನೇ ಹತ್ಯೆಯಾಗಿದೆ.
ಸಂತ್ರಸ್ತನೊಂದಿಗೆ ಬಂದಿದ್ದ ಚರಣಜೀತ್ ಸಿಂಗ್ ಗೂ ಸಹ ಗುಂಡುಗಳಿಂದ ತಗುಲಿ ಗಂಭೀರ ಗಾಯವಾಗಿದೆ. ಅವರನ್ನು ಪುಲ್ವಾಮಾ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ನಂತರ ಶ್ರೀನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇಂದು ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಛತ್ತೀಸ್ ಗಡ್ ದಲ್ಲಿ ಕಾರ್ಮಿಕನೋಬ್ಬನನ್ನು ಉಗ್ರರು ಗುಂಡಿಕ್ಕಿ ಕೊಂದ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದೆ. ಹೊರ ರಾಜ್ಯದಿಂದ ಕಾಶ್ಮೀರಕ್ಕೆ ವ್ಯಾಪಾರಕ್ಕೆ ಬರುತ್ತಿರುವ ಜನರನ್ನು ಗುರಿಯಾಗಿಸಿಕೊಂಡು ಉಗ್ರರು ಹತ್ಯೆಗೈಯುತ್ತಿದ್ದಾರೆ ಎನ್ನಲಾಗಿದೆ. ಛತ್ತೀಸ್ ಗಡ್ ದ ಬೆಸೋಲಿ ನಿವಾಸಿ ಸೇಥಿ ಕುಮಾರ್ ಸಾಗರ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು ಎಂದು ಸುದ್ದಿ ಪಿಟಿಐ ವರದಿ ಮಾಡಿದೆ. ಇಬ್ಬರು ಭಯೋತ್ಪಾದಕರು ಆತನನ್ನು ಗುಂಡಿಕ್ಕಿ ಕೊಂದಾಗ ಅವರು ಇನ್ನೊಬ್ಬ ನಾಗರಿಕನೊಂದಿಗೆ ನಡೆದುಕೊಂಡು ಹೋಗುತ್ತಿದ್ದರು ಎಂದು ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
ಸೋಮವಾರದಂದು ಹಣ್ಣಿನ ತೋಟದಿಂದ ಟ್ರಕ್ ಓಡಿಸುತ್ತಿದ್ದ ರಾಜಸ್ಥಾನದ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಕಾಶ್ಮೀರ ಕಣಿವೆಯಲ್ಲಿ ಹಣ್ಣಿನ ಸಾಗಣೆಯನ್ನು ಹೆಚ್ಚಿಸಿರುವುದರಿಂದ ಭಯೋತ್ಪಾದಕರು ಹತಾಶೆಯಿಂದ ವರ್ತಿಸುತ್ತಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ.