ಹಿಮಾಚಲ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಎರಡು ಮಧ್ಯಮ-ತೀವ್ರತೆಯ ಭೂಕಂಪ
ಶನಿವಾರ ಬೆಳಿಗ್ಗೆ ಹಿಮಾಚಲದ ಬಿಲಾಸ್ಪುರದಲ್ಲಿ 3.2 ತೀವ್ರತೆಯ ಮಧ್ಯಮ ತೀವ್ರತೆಯ ಭೂಕಂಪ ಸಂಭವಿಸಿದೆ.
ಶಿಮ್ಲಾ: ಹಿಮಾಚಲ ಪ್ರದೇಶದ ಬಿಲಾಸ್ಪುರದಲ್ಲಿ ಶನಿವಾರ ಬೆಳಿಗ್ಗೆ 3.2 ತೀವ್ರತೆಯ ಮಧ್ಯಮ ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನ (Earthquake) ವು ಬೆಳಿಗ್ಗೆ 10.34ಕ್ಕೆ ಪ್ರದೇಶವನ್ನು ಅಪ್ಪಳಿಸಿತು ಮತ್ತು ಅದರ ಕೇಂದ್ರಬಿಂದು 7 ಕಿ.ಮೀ ಆಳದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ಇದಕ್ಕೂ ಮೊದಲು ಹಿಮಾಚಲ ಪ್ರದೇಶದ (Himachal Pradesh) ಚಂಬಾ ಜಿಲ್ಲೆಯಲ್ಲಿ ಶುಕ್ರವಾರ (ಅಕ್ಟೋಬರ್ 23, 2020) 2.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಡ್ರಗ್ಸ್ ನ ಮೂಲವಾದ ಹಿಮಾಚಲದಿಂದಲೇ ಕಂಗನಾ ಹೋರಾಟ ಪ್ರಾರಂಭಿಸಲಿ- ಉರ್ಮಿಳಾ ಮಾತೋಂಡ್ಕರ್
10 ಕಿಲೋಮೀಟರ್ ಆಳದಲ್ಲಿ ಕಾರ್ಗಿಲ್‌ನ 110 ಕಿಲೋಮೀಟರ್ ವಾಯುವ್ಯ (ಎನ್‌ಎನ್‌ಡಬ್ಲ್ಯೂ) ಭಾಗದಲ್ಲಿ ಭೂಕಂಪ ಸಂಭವಿಸಿದೆ ಎಂದು ಎನ್‌ಸಿಎಸ್ ತಿಳಿಸಿದೆ. ಘಟನೆಯಲ್ಲಿ ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.