Earthquake: ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಪೂರ್ವ ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಹಳ್ಳಿಯ ಕಟ್ಟಡಗಳು ಹಾನಿಗೊಳಗಾಗಿವೆ. ಇದಲ್ಲದೆ, ಉತ್ತರ ಆಸ್ಟ್ರೇಲಿಯಾದಲ್ಲಿಯೂ ಭೂಮಿ ನಡುಗಿದ ಅನುಭವವಾಗಿದೆ ಎಂದು ವರದಿಯಾಗಿದೆ.
Delhi-NCR Earthquake: ದೆಹಲಿ NCRನಲ್ಲಿ ಭೂಕಂಪದ ಕಂಪನದೊಂದಿಗೆ ಹೊಸ ವರ್ಷ ಪ್ರಾರಂಭವಾಗಿದೆ. ಹೊಸ ವರ್ಷ ಬರುತ್ತಿದ್ದಂತೆಯೇ ಭೂಮಿ ಕಂಪಿಸಿದ್ದು, ಸಂಭ್ರಮದಲ್ಲಿ ಮೈಮರೆತಿದ್ದ ಜನರು ಬೆಚ್ಚಿಬಿದ್ದಿದ್ದಾರೆ. ಇದರ ತೀವ್ರತೆ ಕಡಿಮೆಯಿದ್ದ ಕಾರಣ ಅನೇಕರಿಗೆ ಭೂಕಂಪನದ ಅನುಭವವಾಗಿಲ್ಲವಂತೆ.
Earthquake in Delhi: ಕಳೆದ ಕೆಲವು ದಿನಗಳಲ್ಲಿ ದೆಹಲಿ ಎನ್‌ಸಿಆರ್‌ನಲ್ಲಿ ಹಲವಾರು ಬಾರಿ ಭೂಕಂಪನ ಸಂಭವಿಸಿದೆ. ದೆಹಲಿಯ ಜನವಸತಿ ಮತ್ತು ಅದರ ಭೌಗೋಳಿಕ ಸ್ಥಳವು ಇಲ್ಲಿ ಭೂಕಂಪದ ತೀವ್ರತೆ ಸ್ವಲ್ಪ ಹೆಚ್ಚಿದ್ದರೂ ದೊಡ್ಡ ವಿನಾಶದ ಅನುಭವವನ್ನು ನೀಡಬಹುದು.
Earthquake in Solomon Islands: ಮಂಗಳವಾರ (ನವೆಂಬರ್ 22) ಪೆಸಿಫಿಕ್ ಮಹಾಸಾಗರದ ಸೊಲೊಮನ್ ದ್ವೀಪಗಳಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪದಿಂದಾಗಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
Earthquake In Indonesia: ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದ ಸಿಯಾಂಜೂರ್ ಪ್ರದೇಶದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದೆ. 5.4 ತೀವ್ರತೆಯ ಭೂಕಂಪವು ಪಶ್ಚಿಮ ಜಾವಾ ಪ್ರಾಂತ್ಯದ ಸಿಯಾಂಜೂರ್ ಪ್ರದೇಶದಲ್ಲಿ 10 ಕಿಲೋಮೀಟರ್ (6.2 ಮೈಲುಗಳು) ಆಳದಲ್ಲಿ ಕೇಂದ್ರೀಕೃತವಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ.
Earthquake In Punjab: ಇಂದು (ನವೆಂಬರ್ 03) ಬೆಳಗಿನ ಜಾವ 3:42ರ ಸುಮಾರಿಗೆ ಭೂಕಂಪದ ಅನುಭವವಾಗಿದೆ. 14 ನವೆಂಬರ್ 2022ರ ಸೋಮವಾರದಂದು ಬೆಳಗಿನ ಜಾವ 03:42:27ರ ಸುಮಾರಿಗೆ ಪಂಜಾಬ್‌ನ ಅಮೃತಸರದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ.
ನೇಪಾಳದಲ್ಲಿ ರಿಕ್ಟರ್ ಮಾಪಕದಲ್ಲಿ 5.4 ಅಳತೆಯ ಭೂಕಂಪದ ನಂತರ, ಶನಿವಾರ ಸಂಜೆ ದೆಹಲಿ-ಎನ್‌ಸಿಆರ್‌ನಲ್ಲಿ ಭಾರಿ ಕಂಪನಗಳು ಸಂಭವಿಸಿದವು. ಶನಿವಾರ ಸಂಜೆ 7.57ರ ಸುಮಾರಿಗೆ ಭೂಕಂಪ ಸಂಭವಿಸಿದೆ.
Nepal Earthquake: ನೇಪಾಳದಲ್ಲಿ ಇಂದು ಮುಂಜಾನೆ 6.6 ತೀವ್ರತೆಯ ಭೂಕಂಪ ಸಂಭವಿಸಿದ್ದು ಕನಿಷ್ಠ ಆರು ಸಾವುನೋವುಗಳು ವರದಿಯಾಗಿವೆ. ಇದಲ್ಲದೆ, ಭಾರತದ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲ ಎನ್‌ಸಿಆರ್‌ನಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಶಿರಾಳಕೊಪ್ಪದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಮಿ ಕಂಪಿಸುವುದರ ಜೊತೆಗೆ ಭಾರೀ ಶಬ್ದ ಕೇಳಿ ಬಂದಿದ್ದು, ಮನೆಗೆ ಗೋಡೆ ಹಂಚುಗಳು ಅಲುಗಾಡಿವೆ ಎನ್ನಲಾಗಿದೆ.
Taiwan Earthquake: ಚೀನಾ ಜೋತೆಗಿನ ದೀರ್ಘಕಾಲದ ಸಂಘರ್ಷದ ನಡುವೆ ಶನಿವಾರ ಮತ್ತು ಭಾನುವಾರ ತೈವಾನ್ ಪಾಲಿಗೆ ಆತಂಕಕಾರಿ ಸಾಬೀತಾಗಿವೆ. ಏಕೆಂದರೆ, ಶನಿವಾರದ ಬಳಿಕ ಭಾನುವಾರ ಮಧ್ಯಾಹ್ನವೂ ಕೂಡ ಅಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಭಾನುವಾರದ ಭೂಕಂಪದ ತೀವ್ರತೆ 7.2 ರಷ್ಟು ದಾಖಲಾಗಿದ್ದು, ಇದೀಗ ಅಲ್ಲಿನ ಸರ್ಕಾರದ ಆತಂಕವನ್ನು ಹೆಚ್ಚಿಸಿದೆ.
China earthquake : 2013 ರಿಂದೀಚೆಗೆ ದೇಶಕ್ಕೆ ಅಪ್ಪಳಿಸಿದ ಅತ್ಯಂತ ಶಕ್ತಿಶಾಲಿ ಭೂಕಂಪದಿಂದ ಸೋಮವಾರ ಚೀನಾ ತತ್ತರಿಸಿದೆ. ನೈಋತ್ಯ ಪ್ರಾಂತ್ಯದ ಸಿಚುವಾನ್‌ನಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ.
Earthquake in Jammu and Kashmir: ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿ ನಿನ್ನೆ (ಸೋಮವಾರ) ತಡರಾತ್ರಿ ಭೂಕಂಪದ ಅನುಭವವಾಗಿದೆ. ಮಧ್ಯರಾತ್ರಿ ಸುಮಾರು 2.20ರ ಸುಮಾರಿಗೆ ಕತ್ರಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿ ಕಂಪಿಸಿದ ಅನುಭವಾವಾಗಿದೆ ಎಂದು ವರದಿ ಆಗಿದೆ.
ಫಿಲಿಪೈನ್ಸ್‌ನಲ್ಲಿ ಇಂದು ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆಯು 7.0 ರಷ್ಟು ದಾಖಲಾಗಿದೆ. ಅದೇ ಸಮಯದಲ್ಲಿ, ಅಫ್ಘಾನಿಸ್ತಾನದಲ್ಲಿ ಸಹ ಭೂಮಿ ಕಂಪಿಸಿದ್ದು ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲಾಗಿದೆ.