ಕೃಷ್ಣ (ಆಂಧ್ರಪ್ರದೇಶ): ಹಾವು ಕಚ್ಚಿದ ನಂತರ, ಮೊವ್ವಾ ಮಂಡಲದ ಹಲವಾರು ಗ್ರಾಮಗಳ 15 ಜನರನ್ನು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.


COMMERCIAL BREAK
SCROLL TO CONTINUE READING

"ಹಾವಿನ ಕಡಿತಕ್ಕೆ ಬಲಿಯಾಗಿ ಆಸ್ಪತ್ರೆಗೆ ದಾಖಲಾಗಿರುವ 15 ಮಂದಿಯನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರೆಲ್ಲರ ರಕ್ತವನ್ನು ಪರೀಕ್ಷಿಸಿದ್ದೇವೆ ಮತ್ತು ಅವರಿಗೆ ಹಾವಿನ ವಿರೋಧಿ ವಿಷ ಚುಚ್ಚುಮದ್ದನ್ನು9Anti-snake venom) ನೀಡಿದ್ದೇವೆ. ಎಲ್ಲರೂ ಈಗ ಅಪಾಯದಿಂದ ಪಾರಾಗಿದ್ದಾರೆ. ಈ ಚುಚ್ಚುಮದ್ದು ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಆದ್ದರಿಂದ ಜನರು ಚಿಂತಿಸಬೇಕಾಗಿಲ್ಲ"ಎಂದು ಮೊವ್ವಾ ಸರ್ಕಾರಿ ಆರೋಗ್ಯ ಕೇಂದ್ರದ ವೈದ್ಯ ಶಿವರಾಮಕೃಷ್ಣ ಹೇಳಿದರು.


ಆಗಸ್ಟ್ 1 ರಿಂದ ಇಲ್ಲಿಯವರೆಗೆ 90 ಜನರಿಗೆ "Anti-snake venom" ಚುಚ್ಚುಮದ್ದು ನೀಡಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.


"ಯಾವುದೇ ವ್ಯಕ್ತಿಗೆ ಹಾವು ಕಚ್ಚಿದ ಕೊಡಲೇ ಸಮಯ ವ್ಯರ್ಥ ಮಾಡದೆ ಅಥವಾ ಯಾವುದೇ ಮಂತ್ರ-ತಂತ್ರದ ಮೊರೆ ಹೋಗದೇ ಆಸ್ಪತ್ರೆಗೆ ಕರೆತರುವಂತೆ ಪ್ರದೇಶದ ವೈದ್ಯಾದಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ. ಹಾವು ಕಡಿತಕ್ಕೆ ಬಲಿಯಾದವರಲ್ಲಿ ಹೆಚ್ಚಿನವರು ರೈತರು ಅಥವಾ ಕೂಲಿ ಕಾರ್ಮಿಕರು ಸೇರಿದ್ದಾರೆ. ಅಂತಹವರನ್ನು ಖಾಸಗಿ ಆಸ್ಪತ್ರೆಗೆ ತೆರಳಿ ಹಣ ವ್ಯರ್ಥ ಮಾಡುವ ಬದಲು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವಂತೆ ನಾವು ಸೂಚಿಸುತ್ತೇವೆ. ಸರ್ಕಾರವೇ ಉಚಿತವಾಗಿ ಎಲ್ಲಾ ಔಷಧಿಗಳನ್ನು ಒದಗಿಸುತ್ತಿದೆ" ಎಂದು ಶಿವರಾಮಕೃಷ್ಣ ಹೇಳಿದರು.