ನವದೆಹಲಿ: ಕಾಂಗ್ರೆಸ್ ಹಾಗೂ ನ್ಯಾಷನಲ್ ಹೆರಾಲ್ಡ್ ವಿರುದ್ಧ ಹಾಕಿದ್ದ ಮಾನನಷ್ಟ ಮೊಕದ್ದಮೆಯನ್ನು ಈಗ ರಿಲಯನ್ಸ್ ಗ್ರೂಪ್ ನ ಅನಿಲ್ ಅಂಬಾನಿ ಈಗ ಹಿಂತೆಗೆದುಕೊಳ್ಳುಲು ನಿರ್ಧರಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.ಈ ಹಿಂದೆ ರಫೇಲ್ ಒಪ್ಪಂದದ ವಿಚಾರವಾಗಿ ಕಾಂಗ್ರೆಸ್ ನಾಯಕರು ನೀಡಿದ್ದ ಹೇಳಿಕೆಗಳು ಹಾಗೂ ಇದಕ್ಕೆ ಸಂಬಂಧಿಸಿದ ವಿಸ್ತೃತ ಲೇಖನ ಪ್ರಕಟಿಸಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿರುದ್ದ ಅನಿಲ್ ಅಂಬಾನಿ ಮಾನಹಾನಿ ಮೊಕದ್ದಮೆಯನ್ನು ಹಾಕಿದ್ದರು.


COMMERCIAL BREAK
SCROLL TO CONTINUE READING

ಈಗ ಪಿಟಿಐ ಗೆ ಪ್ರತಿಕ್ರಿಯಿಸಿರುವ ರಿಲಯನ್ಸ್ ಗ್ರೂಪ್ ವಕೀಲ ರಾಸೇಶ್ ಪರಖ್ " ನಾವು ಪ್ರತಿವಾದಿ ವಿರುದ್ದವಾಗಿ ಹಾಕಿದ್ದ ಪ್ರಕರಣವನ್ನು ಹಿಂತೆಗುಕೊಳ್ಳುತ್ತಿದ್ದೇವೆ ಎಂದು ತಿಳಿಸುತ್ತಿದ್ದೇವೆ" ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ಹಾಗೂ ನ್ಯಾಷನಲ್ ಹೆರಾಲ್ಡ್ ವಿರುದ್ದದ ಮಾನಹಾನಿ ಮೊಕದ್ದಮೆಯನ್ನು ರಿಲಯನ್ಸ್ ಹಿಂತೆಗೆದುಕೊಂಡಿರುವ ಬಗ್ಗೆ ಈಗ ಕಾಂಗ್ರೆಸ್ ಪ್ರತಿನಿಧಿಸುತ್ತಿದ್ದ ವಕೀಲ ಪಿ ಚಂಪಾನಿರಿ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ನ ಬೇಸಿಗೆ ರಜೆ ಮುಗಿದ ನಂತರ ಪ್ರಕರಣವನ್ನು ಹಿಂತೆಗೆದುಕೊಳ್ಳುವ ಔಪಚಾರಿಕ ಪ್ರಕ್ರಿಯೆಯನ್ನು  ಮುಗಿಸಲಾಗುವುದು ಎಂದು ಚಂಪನೇರಿ ತಿಳಿಸಿದ್ದಾರೆ.


ಅನಿಲ್ ಅಂಬಾನಿ ಸ್ವಾಮ್ಯದ ರಿಲಯನ್ಸ್ ಗ್ರೂಪ್ ರಿಲಯನ್ಸ್ ಡಿಫೆನ್ಸ್ , ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಮತ್ತು ರಿಲಯನ್ಸ್ ಏರೋಸ್ಟ್ರಕ್ಚರ್ ಮುಂತಾದ ಸಮೂಹಗಳು  ಸುನೀಲ್ ಜಖರ್, ರಂದೀಪ್ ಸಿಂಗ್ ಸುರ್ಜೆವಾಲಾ, ಉಮ್ಮನ್ ಚಾಂಡಿ, ಅಶೋಕ್ ಚವಾಣ್, ಅಭಿಷೇಕ್ ಮನು ಸಿಂಘ್ವಿ, ಸಂಜಯ್ ನಿರುಪಮ್ ಮತ್ತು ಶಕ್ತಿಸಿನಿ ಸೇರಿದಂತೆ ಕಾಂಗ್ರೆಸ್ ಮುಖಂಡರ ವಿರುದ್ಧ ನಾಗರಿಕ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ನ್ಯಾಶನಲ್ ಹೆರಾಲ್ಡ್  ಪತ್ರಿಕೆಯಲ್ಲಿ ಪ್ರಕಟಿಸಿದ ಲೇಖನದ ಹಿನ್ನಲೆಯಲ್ಲಿ ಸಂಪಾದಕ ಜಾಫರ್ ಅಘಾ, ಲೇಖನದ ಲೇಖಕ ವಿಶ್ವೇದೀಕ್ ಅವರ ವಿರುದ್ಧ ಸಹ ಪ್ರಕರಣವನ್ನು ದಾಖಲಿಸಲಾಗಿತ್ತು.  


ಇದನ್ನು ವಿರೋಧಿಸಿ ರಿಲಯನ್ಸ್ ನ ಅನಿಲ್ ಅಂಬಾನಿ ಈ ಲೇಖನ ವ್ಯವಹಾರದ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡಿದೆ ಎಂದು ಆರೋಪಿಸಿ 5000 ಕೋಟಿ ರೂ ಮೌಲ್ಯದ  ಮಾನನಷ್ಟ ಮೊಕದ್ದಮೆಯನ್ನುಹೂಡಿದ್ದರು.