ಮಂಗಳೂರು: ಭಾರತದ ನಾಲ್ಕನೇ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕಾದ ಯೆಸ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಮಂಗಳೂರು ಮೂಲದ ಅನಿತಾ ಪೈ ಮತ್ತು ಬ್ಯಾಂಕಿನ ಮುಖ್ಯ ಮಾರುಕಟ್ಟೆ ಅಧಿಕಾರಿಯಾಗಿ ಜಸ್ನೀತ್ ಬಚಲ್ ಅವರನ್ನು ನೇಮಕ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಚಿಲ್ಲರೆ ಮತ್ತು ಕಾರ್ಪೊರೇಟ್ ಕಾರ್ಯಾಚರಣೆಗಳು, ಎಟಿಎಂ ಮತ್ತು ಶಾಖೆ ಬ್ಯಾಂಕಿಂಗ್ ಸೇವೆ, ಗ್ರಾಹಕ ಸೇವೆ ಮತ್ತು ಸೇವಾ ಗುಣಮಟ್ಟದಾದ್ಯಂತ ಅನಿತಾ ಪೈ ಅವರು ಬ್ಯಾಂಕಿಂಗ್ ಮತ್ತು ಹಣಕಾಸು ಸೇವಾ ಕ್ಷೇತ್ರದಲ್ಲಿ 29 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ. ಈ ನಿರ್ಣಾಯಕ ನಾಯಕತ್ವದ ಪಾತ್ರದಲ್ಲಿ, ಬ್ಯಾಂಕಿನ ಕಾರ್ಯಾಚರಣೆ ಮತ್ತು ಸೇವಾ ವಿತರಣೆ (ಒಎಸ್ಡಿ) ಮತ್ತು ಮಾಹಿತಿ ತಂತ್ರಜ್ಞಾನ ಕಾರ್ಯಗಳ ಜವಾಬ್ದಾರಿಯನ್ನು ಅನಿತಾ ನಿರ್ವಹಿಸಲಿದ್ದಾರೆ.


ಎಲ್ಲಾ ಗ್ರಾಹಕ ವಿಭಾಗಗಳಿಗೆ ಉತ್ತಮವಾದ ಕಾರ್ಯಾಚರಣೆಯ ವಿತರಣಾ ಪ್ರಸ್ತಾಪವನ್ನು ಖಚಿತಪಡಿಸಿಕೊಳ್ಳಲು ವ್ಯವಸ್ಥೆಗಳು, ನಿಯಂತ್ರಣಗಳು ಮತ್ತು ಪ್ರಕ್ರಿಯೆಗಳನ್ನು ವೃದ್ಧಿಸುವ ಬಗ್ಗೆಯೂ ಅನಿತಾ ಗಮನ ಹರಿಸಲಿದ್ದು, ಬ್ಯಾಂಕಿನ ಎಲ್ಲಾ ಕಾರ್ಯಾಚರಣೆಗಳಿಗೆ ಜವಾಬ್ದಾರರಾಗಿರುತ್ತಾರೆ. ಅವರು ಯೆಸ್ ಬ್ಯಾಂಕ್‌ನ ಎಂಡಿ ಮತ್ತು ಸಿಇಒಗೆ ವರದಿ ಸಲ್ಲಿಸಲಿದ್ದಾರೆ.