Raj Thackeray New Announcement on Loudspeaker: ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ನಿರಂತರವಾಗಿ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೊಮ್ಮೆ ಅವರು ಟ್ವೀಟ್ ವೊಂದನ್ನು ಮಾಡುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ರಾಜ್ ಠಾಕ್ರೆ ಹೊಸ ಘೋಷಣೆಯೊಂದನ್ನು ಮಾಡಿದ್ದಾರೆ. ಲೌಡ್ ಸ್ಪೀಕರ್ ಗಳ ಬಳಕೆಯ ವಿರುದ್ಧ ಅವರು ಟ್ವಿಟ್ಟರ್ ಮೂಲಕ ಜನರಿಗೆ ಕರೆಯೊಂದನ್ನು ನೀಡಿದ್ದಾರೆ. ಮೇ 4 ರಂದು ಎಲ್ಲೆಲ್ಲಿ ಜನರು ಅಜಾನ್ ಕೇಳುವರೋ ಅಲ್ಲಲ್ಲಿ ಲೌಡ್ ಸ್ಪೀಕರ್ ಮೂಲಕ ಹನುಮಾನ್ ಚಾಲಿಸಾ ಪಠಿಸಬೇಕು ಎಂದು ಕರೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಎಲ್ಲಾ ಹಿಂದೂಗಳಿಗೆ ರಾಜ್ ಠಾಕ್ರೆ ಮನವಿ
ಈ ಕುರಿತು ಟ್ವೀಟ್‌ನಲ್ಲಿ 'ಎಲ್ಲರಿಗೂ ನನ್ನ ಮನವಿ' ಎಂಬ ಶೀರ್ಷಿಕೆ ಬರೆದುಕೊಂಡಿರುವ ರಾಜ್ ಠಾಕ್ರೆ, ನಂತರ ಸುದೀರ್ಘ ಟಿಪ್ಪಣಿ ಮಾಡಿ, 'ನಾಳೆ ಮೇ 4 ರಂದು ನೀವು ಧ್ವನಿವರ್ಧಕಗಳ ಮೂಲಕ  ಆಜಾನ್ ಅನ್ನು ಮೊಳಗುವುದನ್ನು ಕೇಳಿದರೆ, ಅದೇ ಸ್ಥಳಗಳಲ್ಲಿ ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾವನ್ನು ಕೂಡ ಮೊಳಗಿಸಿ ಎಂದು ನಾನು ಎಲ್ಲ ಹಿಂದೂಗಳಲ್ಲಿ ಮನವಿ ಮಾಡುತ್ತೇನೆ! ಆಗ ಮಾತ್ರ ಅವರಿಗೆ ಈ ಧ್ವನಿವರ್ಧಕಗಳ ಕಿರಿಕಿರಿ ಅರ್ಥವಾಗುತ್ತದೆ!' ಎಂದಿದ್ದಾರೆ.

ಹಿಂದೂಗಳ ಶಕ್ತಿ ಪ್ರದರ್ಶಿಸಿ
'ನಮ್ಮ ದೇಶದಲ್ಲಿ ಅನೇಕ ಮುಸ್ಲಿಂ ಬಾಂಧವರಿಗೆ ಧ್ವನಿವರ್ಧಕಗಳಿಂದ ಕಿರಿಕಿರಿ ಉಂಟಾಗುತ್ತದೆ ಎಂಬುದು ನನಗೆ ಅರಿವಿದೆ. ಆದರೆ ಮೂಲಭೂತವಾದಿ ಧಾರ್ಮಿಕ ಮುಖಂಡರು ಮತ್ತು ಧರ್ಮಗುರುಗಳ ಮುಂದೆ ಅವರಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ನನ್ನ ಎಲ್ಲಾ ಹಿಂದೂ ಸಹೋದರರು ಧ್ವನಿವರ್ಧಕಗಳ ವಿರುದ್ಧ ತಮ್ಮ ಅಭಿಯಾನವನ್ನು ಪ್ರಾರಂಭಿಸಬೇಕು. ಈ ವಿಷಯವು 1 ದಿನದಲ್ಲಿ ಕೊನೆಗೊಳ್ಳುವ ವಿಷಯವಲ್ಲ. ಈ ವಿಷಯವನ್ನು ನಿಮ್ಮ ಮನಸ್ಸಿನಲ್ಲಿಟ್ಟುಕೊಂಡು ಧ್ವನಿವರ್ಧಕಗಳನ್ನು ಆಫ್ ಮಾಡುವಂತೆ ದೇಶದ ಎಲ್ಲಾ ಸರ್ಕಾರಗಳ ಮೇಲೆ ಒತ್ತಡ ಹೇರಿ. ಕೊನೆಯಲ್ಲಿ, ನಾನು ಒಂದೇ ಒಂದು ಮಾತನ್ನು ಹೇಳಲು ಬಯಸುತ್ತೇನೆ, ಪ್ರತಿ ರಾಜ್ಯದ ನಾಗರಿಕರು ತಮ್ಮ ಸರ್ಕಾರಗಳಿಗೆ ಹಿಂದೂಗಳ ಶಕ್ತಿ ಏನೆಂಬುದನ್ನು ತೋರಿಸಬೇಕು' ಎಂದು ರಾಜ್ ಠಾಕ್ರೆ ತಮ್ಮ ಟಿಪ್ಪಣಿಯ ಕೊನೆಯಲ್ಲಿ ಬರೆದುಕೊಂಡಿದ್ದಾರೆ.


ಇದನ್ನೂ ಓದಿ-Rahul Gandhi: ನೈಟ್‌ ಪಾರ್ಟಿ ಮೂಡ್‌ನಲ್ಲಿ ರಾಹುಲ್‌ ಗಾಂಧಿ... ಸ್ಪಷ್ಟನೆ ನೀಡಿದ ಕಾಂಗ್ರೆಸ್‌

ಉದ್ಧವ್ ಠಾಕ್ರೆಗೆ ಮಾಡಿದ ಮನವಿ ಏನು?
ಈ ಕುರಿತು ತಮ್ಮ ಸಹೋದರ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಮನವಿ ಮಾಡಿರುವ ರಾಜ್ ಠಾಕ್ರೆ, 'ಹಿಂದೂ ಹೃದಯ ಸಾಮ್ರಾಟ್, ಶಿವಸೇನಾ ಮುಖ್ಯಸ್ಥ ಶ್ರೀ ಬಾಳಾಸಾಹೇಬ್ ಠಾಕ್ರೆ ಅವರು ಹಲವು ವರ್ಷಗಳ ಹಿಂದೆ ಧ್ವನಿವರ್ಧಕಗಳನ್ನು ನಿಲ್ಲಿಸುವ ಕುರಿತು ಮಾತನಾಡಿದ್ದರು ಎಂದು ನಾನು ನಿಮಗೆ ಹೇಳಬಯಸುತ್ತೇನೆ, ಆದರೆ ನೀವು ಅವರ ಮಾತನ್ನು ಕೇಳುವಿರಾ? ಅಥವಾ ಅಧಿಕಾರದ ಗದ್ದುಗೆಯಲ್ಲಿ ಮುಂದುವರೆಯಲು ಅನುಕೂಲಕ್ಕೆ ತಕ್ಕಂತೆ ಜಾತ್ಯತೀತರಾಗಿರುವ ಶರದ್ ಪವಾರ್ ಪವಾರ್ ಸಾಹೇಬರ ಮಾತನ್ನು ಕೇಳುವಿರಾ?' ಎಂದು ಪ್ರಶ್ನಿಸಿದ್ದಾರೆ. 'ಈ ಕುರಿತಾದ ನಿರ್ಧಾರವನ್ನು ನೀವು ಮಹಾರಾಷ್ಟ್ರದ ಜನತೆಯ ಮುಂದೆ ಒಮ್ಮೆ ತೆಗೆದುಕೊಳ್ಳಬೇಕು. ದೇಶದ ಎಲ್ಲಾ ಹಿಂದೂಗಳನ್ನು ಜೈಲಿನಲ್ಲಿ ಇರಿಸಬಹುದಾದಷ್ಟು ಜೈಲುಗಳು ಈ ದೇಶದ ಸರ್ಕಾರಗಳ ಬಳಿ ಇಲ್ಲ ಮತ್ತು ಅದು ಸರ್ಕಾರಗಳಿಗೂ ಸಾಧ್ಯವಿಲ್ಲ. ಈ ವಿಷಯವನ್ನು ಎಲ್ಲ ಸರ್ಕಾರಗಳು ಕೂಡ ಗಮನದಲ್ಲಿಟ್ಟುಕೊಳ್ಳಬೇಕು. ಎಲ್ಲಾ ಹಿಂದೂ ಸಹೋದರ ಸಹೋದರಿಯರಿಗೆ ಮತ್ತು ತಾಯಂದಿರಿಗೆ ನಾನು ಹೇಳುವುದು ಇಷ್ಟೇ.. ಎಲ್ಲಾ ರಾಜಕೀಯ ಪಕ್ಷಗಳ ಸಂಕೋಲೆಗಳನ್ನು ಮುರಿದು ಧ್ವನಿವರ್ಧಕಗಳನ್ನು ತೆಗೆದುಹಾಕಲು ಒಗ್ಗೂಡಿ. ಈಗ ಇಲ್ಲಾ ಅಥವಾ ಇನ್ನೆಂದಿಗೂ ಇಲ್ಲ' ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-video : ಹಾವು ಮುಂಗುಸಿಯ ಈ ಭಯಂಕರ ಕಾದಾಟದಲ್ಲಿ ಕೊನೆಗೂ ಗೆದ್ದವರು ಯಾರು ?

ರಾಜ್ ಠಾಕ್ರೆ ಅವರ ಈ ಘೋಷಣೆಯ ಬಳಿಕ ರಾಜ್ಯ ಸರ್ಕಾರದ ಸಂಕಷ್ಟ ಇನ್ನಷ್ಟು ಹೆಚ್ಚಾಗಿದೆ. ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.