Controversy: ಆಜಾನ್ ವಿವಾದ ಹಿನ್ನೆಲೆ: ಮಸೀದಿ-ಮಂದಿರಗಳಿಗೆ ಪೊಲೀಸರು ನೀಡಿದ ನೊಟೀಸ್‌ಗಳೆಷ್ಟು..?

ಆಜಾನ್ ವಿರೋಧಿಸಿ ಮಹಾರಾಷ್ಟ್ರದಲ್ಲಿ ಎಂಇಎಸ್ ಕಾರ್ಯಕರ್ತರು ನಡೆಸುತ್ತಿರುವ ಲೌಡ್ ಸ್ಪಿಕರ್ ಅಭಿಯಾನವನ್ನ ರಾಜ್ಯದಲ್ಲಿಯೂ ಹಿಂದೂಪರ ಕಾರ್ಯಕರ್ತರು ಮುಂದುವರೆಸಿದ್ದಾರೆ. 

Written by - Zee Kannada News Desk | Last Updated : Apr 6, 2022, 11:17 AM IST
  • ಮಸೀದಿ-ಮಂದಿರಗಳಿಗೆ ನೊಟೀಸ್‌ ಜಾರಿ ಮಾಡಿದ ಪೊಲೀಸರು
  • ರಾಜ್ಯದಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಆಜಾನ್ ವಿವಾದ
  • ಧಾರ್ಮಿಕ ಕೇಂದ್ರಗಳಿಗೆ ಪೊಲೀಸರು ನೀಡಿದ ನೊಟೀಸ್‌ ವಿವರ ಇಲ್ಲಿದೆ
Controversy: ಆಜಾನ್ ವಿವಾದ ಹಿನ್ನೆಲೆ: ಮಸೀದಿ-ಮಂದಿರಗಳಿಗೆ  ಪೊಲೀಸರು ನೀಡಿದ ನೊಟೀಸ್‌ಗಳೆಷ್ಟು..? title=
Ajan Controversy

ಬೆಂಗಳೂರು: ಹಿಜಾಬ್ ವಿವಾದ, ದೇವಾಲಯಗಳ ಮುಂದೆ ಮುಸ್ಲಿಂ ವ್ಯಾಪಾರಿಗಳ ನಿರ್ಬಂಧ, ಹಲಾಲ್ ಮಾಂಸ‌ ನಿಷೇಧ‌‌ ಅಭಿಯಾನ ಬಳಿಕ ಇದೀಗ ಆಜಾನ್ ವಿವಾದ (Ajan Controversy) ಶುರುವಾಗಿದ್ದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಆಜಾನ್ ವಿರೋಧಿಸಿ ಮಹಾರಾಷ್ಟ್ರದಲ್ಲಿ ಎಂಇಎಸ್ ಕಾರ್ಯಕರ್ತರು ನಡೆಸುತ್ತಿರುವ ಲೌಡ್ ಸ್ಪಿಕರ್ ಅಭಿಯಾನವನ್ನ ರಾಜ್ಯದಲ್ಲಿಯೂ ಹಿಂದೂಪರ ಕಾರ್ಯಕರ್ತರು ಮುಂದುವರೆಸಿದ್ದಾರೆ. 

ಸುಪ್ರೀಂಕೋರ್ಟ್ (Supreme Court)ಆದೇಶ ಪ್ರಕಾರ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗ ಧ್ವನಿವರ್ಧಕ ಬಳಸಬಾರದು.‌ ಪ್ರತಿದಿನ ಮುಂಜಾನೆ ಮಸೀದಿಗಳಲ್ಲಿ ಮೈಕ್ ಹಾಕಿ ಆಜಾನ್ ಕೂಗುವುದು ಸರಿಯಲ್ಲ. ಅಲ್ಲದೆ ಕಾನೂನನ್ನ ಗೌರವಿಸದೆ ಆಜಾನ್ ಕೂಗಿದರೆ ಮುಂದಿನ ದಿನಗಳಲ್ಲಿ ದೇವಾಲಯಗಳಲ್ಲಿಯೂ ನಾವು ಸಹ‌ ಮೈಕ್ ಬಳಸಿ ಮಂತ್ರ ಪಠಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನು ಓದಿ:  ಆಜಾನ್ ವಿರುದ್ಧ ಪ್ರಶಾಂತ್ ಸಂಬರಗಿ ನೇತೃತ್ವದ ನಿಯೋಗದಿಂದ ಕಮೀಷನರ್‌ಗೆ ದೂರು

ಸುಪ್ರೀಂಕೋರ್ಟ್ ಆದೇಶ ಪ್ರಕಾರ ರಾತ್ರಿ 10ರಿಂದ ಮುಂಜಾನೆ 6ವರೆಗೂ ಧ್ವನಿವರ್ಧಕ ಬಳಸುವಂತಿಲ್ಲ. ಅದು ದೇವಾಲಯವಾಗಲಿ, ಮಸೀದಿಯಾಗಲಿ ಅಥವಾ ಇನ್ನಿತರ ಧಾರ್ಮಿಕ ಕೇಂದ್ರ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಮೈಕ್ ಬಳಸಕೂಡದು. ಹೀಗಿದ್ದರೂ ‌ಮಸೀದಿಗಳಲ್ಲಿ ಮುಂಜಾನೆ ವೇಳೆ‌ ಆಜಾನ್‌  ಕೂಗುವುದು ಸರಿಯಲ್ಲ. ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೆಲವರು ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಸುಪ್ರೀಂ‌ಕೋರ್ಟ್ ಗೈಡ್ ಲೈನ್ಸ್ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ‌ ನಿರ್ದೇಶನ ನೀಡಿತ್ತು. ಕಳೆದ ವರ್ಷ ಧಾರ್ಮಿಕ ಕೇಂದ್ರಗಳಿಗೆ ಹಾಗೂ ಕ್ಲಬ್, ಪಬ್ ಹಾಗೂ ರೆಸ್ಟೋರೆಂಟ್‌ಗಳಿಗೆ ಸೇರಿ ಒಟ್ಟು‌ 301 ಮಂದಿಗೆ ನೊಟೀಸ್ ನೀಡಿದ್ದಾರೆ.

ಇದನ್ನು ಓದಿ:   ನಿಷೇಧಿತ ಸಮಯದಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಬಳಸಿದ್ರೆ ಕಾನೂನು ಕ್ರಮ: ಕಮಲ್‌ ಪಂತ್

125 ಮಸೀದಿಗಳಿಗೆ ನೊಟೀಸ್ ನೀಡಿದ‌ ಪೊಲೀಸರು: 

ನ್ಯಾಯಾಲಯ ಆದೇಶ ಉಲ್ಲಂಘಿಸಿ ಧಾರ್ಮಿಕ ಕೇಂದ್ರ(Religious Centre)ಗಳಿಗೆ ಹಾಗೂ ಕ್ಲಬ್-ಪಬ್ ಮಾಲೀಕರಿಗೆ 2021ರಿಂದ 2022ರ ಫೆಬ್ರವರಿವರೆಗೂ‌ ಒಟ್ಟು 301 ಮಂದಿಗೆ  ನೋಟಿಸ್ ನೀಡಲಾಗಿದೆ.  ಮಸೀದಿ 125, ದೇವಾಲಯಗಳಿಗೆ 83, ಚರ್ಚ್‌ಗಳಿಗೆ 22, ಪಬ್, ಕ್ಲಬ್ ಹಾಗೂ ರೆಸ್ಟೋರೆಂಟ್‌ಗಳ 59 ಮಂದಿ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ನಿಗದಿತ ಡೆಸಿಬಲ್ ಹೆಚ್ಚು ಸೌಂಡ್ ಮಾಡಿದ 12 ಕೈಗಾರಿಕೆಗಳ ಮಾಲೀಕರಿಗೆ ಸಹ ನೊಟೀಸ್ ನೀಡಿದ್ದಾರೆ. ‌ಈ ಪೈಕಿ ಅತಿ ಹೆಚ್ಚು ನಗರ‌ ಉತ್ತರ ವಿಭಾಗದಲ್ಲಿ 82, ದಕ್ಷಿಣ ವಿಭಾಗದಲ್ಲಿ 52 ಮಂದಿಗೆ ನೋಟಿಸ್ ನೀಡಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News