ಎಚ್ಚರಿಕೆ...! ಭಾರತದ ಪಾಲಿಕೆ ಮಾರಕ ಸಾಬೀತಾಗಲಿದೆ ಚೀನಾದ ಮತ್ತೊಂದು ವೈರಸ್
ಈಗಾಗಲೇ ಕೊರೊನಾ ವೈರಸ್ ಪ್ರಕೋಪ ಎದುರಿಸುತ್ತಿರುವ ಭಾರತದ ಪಾಲಿಗೆ ಚೀನಾದಿಂದ ಹೊರಬಂದ ಸುದ್ದಿಯೊಂದು ಚಿಂತೆ ಹೆಚ್ಚಿಸುವ ಕೆಲಸ ಮಾಡಲಿದೆ. ಈ ಕುರಿತು ಎಚ್ಚರಿಕೆ ನೀಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR), ಚೀನಾ ಮೂಲದ ಕ್ಯಾಟ್ ಕ್ಯೂ (CQO) ಹೆಸರಿನ ವೈರಸ್ ಭಾರತದಲ್ಲಿ ಜ್ವರಕ್ಕೆ ಸಂಬಂಧಿಸಿದ ಇತರ ಹಲವು ರೋಗಗಳನ್ನು ಹಬ್ಬಿಸುವ ಸಾಧ್ಯತೆ ಇದೆ ಎಂದು ಹೇಳಿದೆ.
ನವದೆಹಲಿ: ಈಗಾಗಲೇ ಕೊರೊನಾ ವೈರಸ್ ಪ್ರಕೋಪ ಎದುರಿಸುತ್ತಿರುವ ಭಾರತದ ಪಾಲಿಗೆ ಚೀನಾದಿಂದ ಹೊರಬಂದ ಸುದ್ದಿಯೊಂದು ಚಿಂತೆ ಹೆಚ್ಚಿಸುವ ಕೆಲಸ ಮಾಡಲಿದೆ. ಈ ಕುರಿತು ಎಚ್ಚರಿಕೆ ನೀಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR), ಚೀನಾ ಮೂಲದ ಕ್ಯಾಟ್ ಕ್ಯೂ (CQO) ಹೆಸರಿನ ವೈರಸ್ ಭಾರತದಲ್ಲಿ ಜ್ವರಕ್ಕೆ ಸಂಬಂಧಿಸಿದ ಇತರ ಹಲವು ರೋಗಗಳನ್ನು ಹಬ್ಬಿಸುವ ಸಾಧ್ಯತೆ ಇದೆ ಎಂದು ಹೇಳಿದೆ. ಕೊರೊನಾ ವೈರಸ್ ಸೋಂಕು ಚೀನಾದಿಂದಲೇ ಇತರೆ ದೇಶಗಳಿಗೆ ಪಸರಿಸಿದೆ ಹಾಗೂ ಇಡೀ ವಿಶ್ವಾದ್ಯಂತ ಈ ಮಾರಕ ವೈರಸ್ ದಾಳಿಗೆ ಸುಮಾರು 8 ಲಕ್ಷಕ್ಕೂ ಅಧಿಕ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಭಾರತದಲ್ಲಿಯೂ ಕೂಡ ಕೊರೊನಾ ವೈರಸ್ ಸೋಂಕಿಗೆ 96 ಸಾವಿರಕ್ಕೂ ಅಧಿಕ ಜನರು ತನ್ನ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನು ಓದಿ-ಇನ್ಮುಂದೆ ಖಾದ್ಯ ತೈಲದಲ್ಲಿಯೇ ಸಿಗಲಿವೆ Vitamin A ಹಾಗೂ D
ಸೊಳ್ಳೆಗಳ ಮೂಲಕ ದಾಳಿ ನಡೆಸುತ್ತದೆ ಈ ಹೊಸ ವೈರಸ್
ಐಸಿಎಂಆರ್ ತನ್ನ ಇತ್ತೀಚಿನ ಪ್ರಕಟಿತ ಸಂಶೋಧನೆಯೊಂದರಲ್ಲಿ, ಸೊಳ್ಳೆಗಳಂತಹ ರಕ್ತ ಹೀರುವ ಜೀವಿಗಳಿಂದ ಮನುಷ್ಯರಿಗೆ ಹರಡುವ ಈ ವೈರಸ್ ಮಾನವರಲ್ಲಿ ಮೆನಿಂಜೈಟಿಸ್ ಮತ್ತು ಮಕ್ಕಳಲ್ಲಿ ಮೆದುಳು ಜ್ವರದಂತಹ ಕಾಯಿಲೆಗಳನ್ನು ಹರಡುತ್ತದೆ ಎಂದು ಹೇಳಿದೆ. ಐಸಿಎಂಆರ್ ಪ್ರಕಾರ, ಭಾರತದಲ್ಲಿ ಕಂಡುಬರುವ ಸೊಳ್ಳೆಗಳು ಸಿಕ್ಯೂವಿ ವೈರಸ್ ಹರಡಲು ಸಮರ್ಥವಾಗಿವೆ. ಸಸ್ತನಿಗಳಲ್ಲಿ ಈ ವೈರಸ್‌ನ ಪ್ರಾಥಮಿಕ ವಾಹಕಗಳು ಹಂದಿಗಳಾಗಿವೆ.
ಇದನ್ನು ಓದಿ- ಬೆಳಗಿನ ಉಪಹಾರದಲ್ಲಿ ಈ ಡ್ರಿಂಕ್ ಬಳಸಿ Blood Sugar Level ಕಂಟ್ರೋಲ್ ಮಾಡಿ
ಕರ್ನಾಟಕದಲ್ಲಿ ಇಬ್ಬರು ಸೊಂಕಿತರು ಪತ್ತೆ
ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಾಜಿ (NIV) ತಜ್ಞರು ಒಟ್ಟು 883 ಮನುಷ್ಯರ ಸಿರಂಗಳ ಪರೀಕ್ಷೆ ನಡೆಸಿದ್ದು, ಇವರಲ್ಲಿ ಇಬ್ಬರು ಈ ವೈರಸ್ ಸೋಂಕಿಗೆ ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದಾರೆ. ಈ ಎಲ್ಲಾ ಸ್ಯಾಂಪಲ್ ಗಳನ್ನು ದೇಶದ ವಿಭಿನ್ನ ರಾಜ್ಯಗಳಿಂದ ಸಂಗ್ರಹಿಸಲಾಗಿದ್ದು. ಪಾಸಿಟಿವ್ ಕಂಡು ಬಂದಿರುವ ಎರಡೂ ಪ್ರಕರಣಗಳು ಕರ್ನಾಟಕದಿಂದ ವರದಿಯಾಗಿವೆ.