ಬೆಳಗಿನ ಉಪಹಾರದಲ್ಲಿ ಈ ಡ್ರಿಂಕ್ ಬಳಸಿ Blood Sugar Level ಕಂಟ್ರೋಲ್ ಮಾಡಿ

ಹಾಲಿನ ಬಳಕೆ ಡಯಾಬಿಟಿಸ್ ನ ರೋಗಿಗಳಿಗೆ ಅಪಾಯಕಾರಿ ಅಲ್ಲ, ಬ್ರೇಕ್ ಫಾಸ್ಟ್ ನಲ್ಲಿ ಹಾಲು ಸೇವಿಸಿ ನೀವು ನಿಮ್ಮ ಬ್ಲಡ್ ಶುಗರ್ ಲೆವಲ್ ಅನ್ನು ನಿಯಂತ್ರಿಸಬಹುದಾಗಿದೆ.  

Last Updated : Sep 27, 2020, 03:32 PM IST
  • ಹಾಲಿನ ಬಳಕೆ ಡಯಾಬಿಟಿಸ್ ನ ರೋಗಿಗಳಿಗೆ ಅಪಾಯಕಾರಿ ಅಲ್ಲ,
  • ಬ್ರೇಕ್ ಫಾಸ್ಟ್ ನಲ್ಲಿ ಹಾಲು ಸೇವಿಸಿ ನೀವು ನಿಮ್ಮ ಬ್ಲಡ್ ಶುಗರ್ ಲೆವಲ್ ಅನ್ನು ನಿಯಂತ್ರಿಸಬಹುದಾಗಿದೆ.
  • ಈ ಸಂಶೋಧನೆಯನ್ನು 2018 ರಲ್ಲಿ ಜರ್ನಲ್ ಆಫ್ ಡೈರಿ ಸೈನ್ಸ್‌ನಲ್ಲಿ ಪ್ರಕಟಿಸಲಾಗಿದೆ.
ಬೆಳಗಿನ ಉಪಹಾರದಲ್ಲಿ ಈ ಡ್ರಿಂಕ್ ಬಳಸಿ Blood Sugar Level ಕಂಟ್ರೋಲ್ ಮಾಡಿ  title=

ನವದೆಹಲಿ: ಮಧುಮೇಹ (Diabetes) ರೋಗಿಗಳಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಪಾಸಣೆ ಮಾಡುವುದು ಒಂದು ಸವಾಲಿನ ಸಂಗತಿಯಾಗಿದೆ. ಅವರು ಯಾವಾಗಲೂ ತಮ್ಮ ಆಹಾರದ ಬಗ್ಗೆ ಜಾಗರೂಕರಾಗಿರಲು ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಬೇಕಾಗುತ್ತದೆ. ಆದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಲಭವಾಗಿ ನಿಯಂತ್ರಿಸಬಹುದು ಎಂದು ನಿಮಗೆ ತಿಳಿದಿದೆಯೇ? ಬೆಳಗಿನ ಉಪಾಹಾರದಲ್ಲಿ ಬಳಸುವ ಹಾಲು ರಕ್ತದಲ್ಲಿನ ಸಕ್ಕರೆ ಮಟ್ಟದ ಸಂಕೀರ್ಣತೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಸಂಶೋಧನೆಯ ಪ್ರಕಾರ, ಹಾಲು ದಿನವಿಡೀ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಇದನ್ನು ಓದಿ- Health Insurance ಖರೀದಿಸುವ ವೇಳೆ ಈ 5 ತಪ್ಪುಗಳನ್ನು ಮಾಡಬೇಡಿ

ಬ್ಲಡ್ ಶುಗರ್ ಲೆವಲ್ ಹಾಗೂ ಹಾಲಿನ ನಡುವಿನ ಸಂಬಂಧ
ಈ ಸಂಶೋಧನೆಯನ್ನು 2018 ರಲ್ಲಿ ಜರ್ನಲ್ ಆಫ್ ಡೈರಿ ಸೈನ್ಸ್‌ನಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಬೆಳಗಿನ ಉಪಾಹಾರದಲ್ಲಿ ಹಾಲು ಕುಡಿಯುವುದರಿಂದ ದಿನವಿಡೀ ರಕ್ತದಲ್ಲಿನ ಗ್ಲೂಕೋಸ್ ಕಡಿಮೆಯಾಗುತ್ತದೆ ಎಂದು ತಿಳಿಸಲಾಯಿತು. ಬೆಳಗಿನ ಉಪಹಾರದಲ್ಲಿ ಹೆಚ್ಚಿನ ಪ್ರೋಟೀನ್ ಭರಿತ ಹಾಲು ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ ಎಂದು ಸಂಶೋಧಿಸಿದ್ದಾರೆ. ಸಂಶೋಧನೆಯ ಸಮಯದಲ್ಲಿ, ಬೆಳಗಿನ ಉಪಾಹಾರದೊಂದಿಗೆ ಹಾಲಿನ ಸೇವನೆಯು ರಕ್ತದಲ್ಲಿನ ಗ್ಲೂಕೋಸ್ ಶೇಖರಣೆಯನ್ನು ಕಡಿಮೆ ಮಾಡುತ್ತದೆ ಎಂದು ಅವರು ಕಂಡುಕೊಂಡಿದ್ದಾರೆ. ಪ್ರೋಟೀನ್ ಶೇಖರಣೆ ಮತ್ತು ವ್ಹೆ ಪ್ರೋಟೀನ್‌ನ ಪರಿಣಾಮವನ್ನು ಪರೀಕ್ಷಿಸಿದ್ದಾರೆ. ಗ್ಯಾಸ್ಟ್ರಿಕ್ ಹಾರ್ಮೋನುಗಳನ್ನು ವ್ಹೆ ಪ್ರೋಟೀನ್ ಮತ್ತು ಕ್ಯಾಸೀನ್ ಪ್ರೋಟೀನ್ ಸ್ರವಿಸುತ್ತದೆ ಎಂದು ಅವರು ಹೇಳಿದ್ದಾರೆ. 

ಇದನ್ನು ಓದಿ- ಒತ್ತಡ, ಕಾಯಿಲೆಗಳಿಂದ ಸದಾ ದೂರವಿರಲು ರಾತ್ರಿ ಮಲಗುವ ಮೊದಲು ಈ ಕೆಲಸಗಳನ್ನು ಮಾಡಿ

ಬ್ರೇಕ್ ಫಾಸ್ಟ್ ವೇಳೆ ಹಾಲು ಸೇವನೆ ಡಯಾಬಿಟಿಸ್ ರೋಗಿಗಳಿಗೆ ಅತ್ಯಾವಶ್ಯಕ ಸಂಗತಿ ಎಂದು ಸಂಶೋಧಕರು ಹೇಳಿದ್ದಾರೆ. ಇದು ಕಾರ್ಬೋಹೈಡ್ರೇಟ್ ಪಚನ ಕ್ರಿಯೆಯನ್ನು ಕುಂಠಿತಗೊಳಿಸುತ್ತದೆ. ಹೀಗಾಗಿ ದಿನವಿಡೀ ಬ್ಲಡ್ ಶುಗರ್ ಲೆವಲ್ ನಿಯಂತ್ರಣದಲ್ಲಿರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಇದನ್ನು ಓದಿ- Health Tips: ಇಮ್ಯೂನಿಟಿ ವೃದ್ಧಿಗೆ ಇಲ್ಲಿವೆ 5 ರಾಮಬಾಣ ಉಪಾಯಗಳು

ಸಕ್ಕರೆ ಕಾಯಿಲೆ ಇರುವವರಿಗೆ ಹಾಲು ಅಪಾಯಕಾರಿ ಅಲ್ಲ
ಮಧುಮೇಹ ರೋಗಿಗಳ ಆರೋಗ್ಯಕ್ಕೆ ಹಾಲು ಹಾನಿಕಾರಕ ಎಂಬ ಕಲ್ಪನೆಯನ್ನು ಈ ಸಂಶೋಧನೆಯು ತೊಡೆದುಹಾಕುತ್ತದೆ. ಅವರ ಪ್ರಕಾರ, ಹಾಲಿನಲ್ಲಿ ಪೌಷ್ಟಿಕ ಅಂಶಗಳು ಮತ್ತು ಖನಿಜಗಳು ಕಂಡುಬರುತ್ತವೆ. ಅವು ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಯಾವುದೇ ರೀತಿಯ ಹಾಲು, ಅದು ಕೆನೆರಹಿತ ಹಾಲು ಅಥವಾ ಸೋಯಾ ಹಾಲು ಅಥವಾ ಬಾದಾಮಿ ಹಾಲು ಆಗಿರಲಿ, ಮಧುಮೇಹ ರೋಗಿಗಳಿಗೆ ಸೂಕ್ತವಾಗಿದೆ. ಹಾಲು ಬಳಸುವಾಗ ಸಕ್ಕರೆಯನ್ನು ತಪ್ಪಿಸಬೇಕು. ಉತ್ತಮ ಫಲಿತಾಂಶಕ್ಕಾಗಿ, ಜೇನುತುಪ್ಪ ಅಥವಾ ಬೆಲ್ಲದ ಪುಡಿಯನ್ನು ಹಾಲಿಗೆ ಸೇರಿಸಬಹುದು.

Trending News