ನವದೆಹಲಿ: ತಮಿಳುನಾಡಿನ ಜನರಿಗೆ ಹಿಂದಿ ಭಾಷೆ ಹೇರಿಕೆ ಪ್ರಯತ್ನವನ್ನು ಎಂದಿಗೂ ಸಹಿಸಲಾಗುವುದಿಲ್ಲ ಎಂದು ಡಿಎಂಕೆ ನಾಯಕ ಟಿ.ಶಿವ  ತಿಳಿಸಿದ್ದಾರೆ.ಬಲವಂತವಾಗಿ ಜನರ ಮೇಲೆ ಹಿಂದಿ ಭಾಷೆಯನ್ನು ಹೇರಲು ಪ್ರಯತ್ನಿಸಿದರೆ ತಾವು ಯಾವುದೇ ಪರಿಣಾಮಗಳನ್ನು ಎದುರಿಸಲು ಸಿದ್ದ ಎಂದು ಹೇಳಿದರು.


COMMERCIAL BREAK
SCROLL TO CONTINUE READING

ಕೇಂದ್ರ ಸರ್ಕಾರವು ನೂತನ ಶಿಕ್ಷಣ ನೀತಿ ಕುರಿತಾಗಿ ನೇಮಿಸಿದ ಸಮಿತಿ ಈಗ ವರದಿಯೊಂದನ್ನು ನೂತನ ಸಚಿವರಿಗೆ ಸಲ್ಲಿಸಿದೆ ಎನ್ನುವ ವಿಚಾರವನ್ನು ಉಲ್ಲೇಖಿಸಿ ಮಾತನಾಡಿದ ಡಿಎಂಕೆ ಶಿವ " "ಅವರು ರಾಜ್ಯಗಳನ್ನು ಹಿಂದಿ ಮಾತನಾಡುವ ರಾಜ್ಯಗಳು ಮತ್ತು ಹಿಂದಿ ಮಾತನಾಡದ ರಾಜ್ಯಗಳಾಗಿ ವರ್ಗೀಕರಿಸಿದ್ದಾರೆ ಎಂದು ಅವರು ಹೇಳಿದರು. ಅಲ್ಲದೆ ಹಿಂದಿಯನ್ನು ಕಡ್ಡಾಯಗೊಳಿಸುವ ಪ್ರಯತ್ನವನ್ನು ಮಾಡಿದ್ದಾರೆ.ಆದರೆ ದಕ್ಷಿಣ ಭಾರತದ ಭಾಷೆಗಳನ್ನು ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಕಲಿಸುವ ವಿಚಾರವಾಗಿ ಅವರು ಪ್ರಸ್ತಾಪಿಸಿಲ್ಲವೆಂದು ಹೇಳಿದರು.


ಡಿಎಂಕೆ ನಾಯಕ ಶಿವ ಅವರ ನಿಲುವನ್ನು  ಬೆಂಬಲಿಸಿರುವ ನಟ ಹಾಗೂ ಮಕಲ್ ನಿಧಿ ಮಯ್ಯಂ  ಸಂಸ್ಥಾಪಕ ಕಮಲ್ ಹಾಸನ್ ಅವರು, "ನಾನು ಅನೇಕ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ, ನನ್ನ ಪ್ರಕಾರ  ಹಿಂದಿ ಭಾಷೆಯನ್ನು ಯಾರ ಮೇಲೆಯೂ ಒತ್ತಾಯವಾಗಿ ಹೇರಬಾರದು " ಎಂದು ಹೇಳಿದರು.