ವಿಶ್ವದ ಮೊಬೈಲ್ ತಯಾರಿಕೆಯ ಮುಂಚೂಣಿಯಲ್ಲಿರುವ ಕಂಪನಿ ಆಪಲ್, ಪ್ರತಿ ಬಾರಿ ನಿಮಗಾಗಿ ಆಕರ್ಷಕ ಗ್ಯಾಜೆಟ್ ಗಳನ್ನು ಹೊತ್ತು ತರುತ್ತದೆ. ಈ ಕಂಪನಿ ತನ್ನ ಗ್ಯಾಜೆಟ್ ಗಳ ಲುಕ್ ಕುರಿತು ಕೂಡ ತುಂಬಾ ಗಂಭೀರವಾಗಿ ಆಲೋಚಿಸುತ್ತದೆ.  ತನ್ನ ಇದೇ ಥೀಮ್ ಅನ್ನು ಮುಂದುವರೆಸಿರುವ ಕಂಪನಿ ಹೊಸ ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡುವ ಸಿದ್ಧತೆಯಲ್ಲಿ ತೊಡಗಿದೆ. Apple Watch 6 ಹೆಸರಿನ ಈ ವಾಚ್ ಲುಕ್ ಎಷ್ಟೊಂದು ಆಕರ್ಷಕವಾಗಿದೆ ಎಂದರೆ ಎಲ್ಲರೂ ಇದನ್ನು ತಮ್ಮ ಕೈಗೆ ಧರಿಸಲು ಇಷ್ಟಪಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

MicroLED ಪ್ಯಾನೆಲ್ ಕಾಣಬಹುದು
ಆಪಲ್ ಯಾವಾಗಲೂ ತನ್ನ ಸ್ಮಾರ್ಟ್ ವಾಚ್ ಗಳಲ್ಲಿ ಸ್ಕ್ವೆಯರ್ ಶೇಪ್ ಡಿಸೈನ್ ಬಳಸುತ್ತದೆ. ಆದರೆ, ಈ ಬಾರಿ ಕಂಪನಿ ತನ್ನ ಸಾಂಪ್ರದಾಯಿಕ ಡಿಸೈನ್ ನಿಂದ ಹೊರಬಂದು ಗೋಲಾಕಾರದ ಡಿಸೈನ್ ಬಳಕೆಮಾಡಬಹುದು ಎಂದು ಅಂದಾಜಿಸಲಾಗುತ್ತಿದೆ. ಕಂಪನಿ ಬಿಡುಗಡೆಗೊಳಿಸಿರುವ Apple Watch 6 ಟೀಸರ್ ನಲ್ಲಿ ಕಂಪನಿ ಮೈಕ್ರೋ LED ಪ್ಯಾನೆಲ್ ಬಳಕೆ ಮಾಡಬಹುದು ಎಂಬುದನ್ನು ತೋರಿಸಲಾಗಿದೆ. ಅಷ್ಟೇ ಅಲ್ಲ ಈ ವಾಚ್ ನ ಮೇಲ್ಮೈ ಸಂಪೂರ್ಣವಾಗಿ ರೊಟೆಟಿಂಗ್ ಇರುವಂತೆ ಕಂಡುಬರುತ್ತಿದೆ.


ನೂತನ ಸ್ಟೈಲ್ ನಲ್ಲಿ ಸ್ಪೀಕರ್ ಗಳಿರಲಿವೆ
ಈ ನೂತನ ಸ್ಮಾರ್ಟ್ ವಾಚ್ ನಲ್ಲಿ ಕಂಪನಿ ಹಲವು ಹೊಸ ಪ್ರಯೋಗಗಳನ್ನು ಮಾಡಬಹುದು. ಮಾಹಿತಿಗಳ ಪ್ರಕಾರ ಈ ಬಾರಿ ಕಂಪನಿ ಸ್ಲಿಮ್ ರೋಟೆಟಿಂಗ್ ಸ್ಪೀಕರ್ ಗಳ ಬಳಕೆ ಮಾಡಲಿದೆ ಎನ್ನಲಾಗಿದೆ. ಜೊತೆಗೆ ಇದರಲ್ಲಿ 48 ಗಂಟೆಗಳ ಕಾಲ ನಡೆಯುವ ಬ್ಯಾಟರಿ ಇರಲಿದೆ. ಸದ್ಯ ಇರುವ ಆಪಲ್ ಸ್ಮಾರ್ಟ್ ವಾಚ್ ಗಳು 18 ಗಂಟೆ ಬ್ಯಾಟರಿ ಬ್ಯಾಕಪ್ ಹೊಂದಿವೆ.


ಆಪಲ್ ನ ಈ ಪ್ರಾಡಕ್ಟ್ ಗೆ ಸಂಬಂಧಿಸಿದ ಅಧಿಕಾರಿಗಳು ಈ ನೂತನ ಸ್ಮಾರ್ಟ್ ವಾಚ್ ಕೇವಲ ಕಾನ್ಸೆಪ್ಟ್ ಲೆವಲ್ ನಲ್ಲಿಯೇ ಇದ್ದು, 2020 ರ ಅಂತ್ಯದಲ್ಲಿ ಅಥವಾ 2021ರ ಆರಂಭದಲ್ಲಿ ಈ ವಾಚ್ ಬಿಡುಗಡೆಯಾಗುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.