ನವದೆಹಲಿ: ಭಾರತ ಚುನಾವಣಾ ಆಯೋಗವು ಚುನಾವಣೆಗೆ ಸಂಬಂಧಿಸಿದಂತೆ 2020ನೇ ಸಾಲಿನಲ್ಲಿ ಮತದಾರರ ಶಿಕ್ಷಣ ಮತ್ತು ಅರಿವು ಮೂಡಿಸುವಲ್ಲಿ ಅತ್ಯುತ್ತಮ ಪ್ರಚಾರ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡ ಮಾಧ್ಯಮ ಸಂಸ್ಥೆಗಳಿಂದ ರಾಷ್ಟ್ರಮಟ್ಟದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದೆ.


COMMERCIAL BREAK
SCROLL TO CONTINUE READING

ಪ್ರಶಸ್ತಿಯನ್ನು ಒಟ್ಟು ನಾಲ್ಕು ವಿಭಾಗಗಳಲ್ಲಿ ನೀಡಲಾಗುತ್ತಿದ್ದು, ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ (ಟೆಲಿವಿಷನ್), ರೆಡಿಯೋ ಮತ್ತು ಆನ್‍ಲೈನ್ (ಇಂಟರ್‍ನೆಟ್) /ಸೋಷಿಯಲ್ ಮೀಡಿಯಾ ಸಂಸ್ಥೆಗಳು “National Media Award-2020” ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.


ಕಮಲ್ ನಾಥ್ 'ಐಟಂ' ಹೇಳಿಕೆಗೆ ಚುನಾವಣಾ ಆಯೋಗದಿಂದ ನೋಟಿಸ್


ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಆಸಕ್ತ ಮಾಧ್ಯಮ ಸಂಸ್ಥೆಗಳು ನೇರವಾಗಿ ಭಾರತ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸಲು ನವೆಂಬರ್ 20 ಕೊನೆಯ ದಿನವಾಗಿರುತ್ತದೆ. ಪವನ್ ದಿವಾನ್, ಅಧೀನ ಕಾರ್ಯದರ್ಶಿ (ಕಮ್ಯುನಿಕೇಷನ್) ಭಾರತ ಚುನಾವಣಾ ಆಯೋಗ, ನಿರ್ವಾಚನಾ  ಸದನ್, ಅಶೋಕ ರಸ್ತೆ, ನವದೆಹಲಿ -110001. 


ಹೆಚ್ಚಿನ ಮಾಹಿತಿಗಾಗಿ ಭಾರತ ಚುನಾವಣಾ ಆಯೋಗದ ವೆಬ್‍ಸೈಟ್ ವೀಕ್ಷಿಸಬಹುದಾಗಿದೆ ಅಥವಾ media.election.eci@gmail.com ಇ-ಮೇಲ್ ಮಾಡಬಹುದಾಗಿದೆ. ದೂರವಾಣಿ 011-23052133 ಸಂಖ್ಯೆಯನ್ನು ಸಹ ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.