ಭಾರತ ಚುನಾವಣಾ ಆಯೋಗವು ಚುನಾವಣೆಗೆ ಸಂಬಂಧಿಸಿದಂತೆ 2020ನೇ ಸಾಲಿನಲ್ಲಿ ಮತದಾರರ ಶಿಕ್ಷಣ ಮತ್ತು ಅರಿವು ಮೂಡಿಸುವಲ್ಲಿ ಅತ್ಯುತ್ತಮ ಪ್ರಚಾರ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡ ಮಾಧ್ಯಮ ಸಂಸ್ಥೆಗಳಿಂದ ರಾಷ್ಟ್ರಮಟ್ಟದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದೆ.
94 ವಿಧಾನಸಭಾ ಕ್ಷೇತ್ರಗಳಲ್ಲಿ 1,463 ಅಭ್ಯರ್ಥಿಗಳಲ್ಲಿ ಸುಮಾರು 10 ಶೇಕಡಾ (146) ಮಹಿಳಾ ಅಭ್ಯರ್ಥಿಗಳಿದ್ದಾರೆ. 2.85 ಕೋಟಿ ಮತದಾರರಲ್ಲಿ, ಮಹಿಳೆಯರ ಪಾಲು 1.35 ಕೋಟಿ. ಮಹಾರಾಜ್ ಗಂಜ್ ಕ್ಷೇತ್ರದಲ್ಲಿ ಗರಿಷ್ಠ 27 ಅಭ್ಯರ್ಥಿಗಳು ಕಣದಲ್ಲಿದ್ದರೆ, ದಾರೌಲಿ (04) ಅತಿ ಕಡಿಮೆ ಅಭ್ಯರ್ಥಿಗಳನ್ನು ಹೊಂದಿದೆ.
ಚುನಾವಣಾ ಆಯೋಗವು ಬುಧವಾರ ಬಿಜೆಪಿ ಅಭ್ಯರ್ಥಿ ಇಮಾರ್ತಿ ದೇವಿ ಅವರ ಕುರಿತ ಐಟಂ ಹೇಳಿಕೆಗೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಅವರಿಗೆ ನೋಟಿಸ್ ನೀಡಿದೆ.
ಬಿಹಾರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 12 ರ್ಯಾಲಿಗಳನ್ನು ನಡೆಸಲಿದ್ದು, ಇದು ಬಿಜೆಪಿಗೆ ಮಾತ್ರವಲ್ಲ ಇಡೀ ಎನ್‌ಡಿಎಗೆ ಬಹುಮತ ಪಡೆಯಲು ಸಹಕಾರಿಯಾಗಲಿದೆ ಎಂದು ನಂಬಲಾಗಿದೆ.
ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿಗೆ 121 ಸ್ಥಾನಗಳು, ಜೆಡಿಯುಗೆ 122 ಸ್ಥಾನಗಳು ಸಿಕ್ಕಿವೆ. ಆದರೆ, ಜೆಡಿಯು ತನ್ನ ಕೋಟಾದಿಂದ 7 ಸ್ಥಾನಗಳನ್ನು ಜಿತಾನ್ ರಾಮ್ ಮಾಂಜಿ ಅವರ ಪಕ್ಷ 'ಹಮ್' ಗೆ ನೀಡಿದೆ.