ಜಮ್ಮುವಿನಲ್ಲಿ ಆಕಸ್ಮಿಕ ಗ್ರೆನೇಡ್ ಸ್ಫೋಟ: ಇಬ್ಬರು ಸೇನಾ ಸಿಬ್ಬಂದಿ ಹುತಾತ್ಮ
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟದಲ್ಲಿ ಸೇನಾ ಕ್ಯಾಪ್ಟನ್ ಮತ್ತು ಜೂನಿಯರ್ ಕಮಿಷನ್ಡ್ ಅಧಿಕಾರಿ (ಜೆಸಿಒ) ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟದಲ್ಲಿ ಸೇನಾ ಕ್ಯಾಪ್ಟನ್ ಮತ್ತು ಜೂನಿಯರ್ ಕಮಿಷನ್ಡ್ ಅಧಿಕಾರಿ (ಜೆಸಿಒ) ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಇದನ್ನೂ ಓದಿ: Bomb threat: ಡಿಕೆ ಶಿವಕುಮಾರ್ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ.!
ಭಾನುವಾರ ತಡರಾತ್ರಿ ಭಾರತೀಯ ಸೇನಾ ಪಡೆಗಳು ಮೆಂಧರ್ ಸೆಕ್ಟರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ಜಮ್ಮುವಿನ ರಕ್ಷಣಾ ವಿಭಾಗದ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ಹೇಳಿದ್ದಾರೆ.
ಸ್ಫೋಟದಲ್ಲಿ ಪರಿಣಾಮವಾಗಿ ಕ್ಯಾಪ್ಟನ್ ಆನಂದ್ ಮತ್ತು ಜೆಸಿಒ ನೈಬ್ ಸುಬೇದಾರ್ ಭಗವಾನ್ ಸಿಂಗ್ ಗಾಯಗೊಂಡರು. ತಕ್ಷಣ ಅವರನ್ನು ಹೆಲಿಕಾಪ್ಟರ್ ಮೂಲಕ ಉಧಮ್‌ಪುರದ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಹುತಾತ್ಮರಾಗಿದ್ದಾರೆ ಎಂದು ಅವರು ಹೇಳಿದರು.
ಕ್ಯಾಪ್ಟನ್ ಆನಂದ್ ಬಿಹಾರದ ಭಾಗಲ್ಪುರ್ ಜಿಲ್ಲೆಯ ಚಂಪಾ ನಗರ ಪ್ರದೇಶದವರು ಮತ್ತು ನೈಬ್ ಸುಬೇದಾರ್ ಭಗವಾನ್ ಸಿಂಗ್ ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಪೋಖರ್ ಭಟ್ಟಾ ಗ್ರಾಮದವರು.
ಇದನ್ನೂ ಓದಿ: Kiccha Sudeep: ʻಕನ್ನಡ್ ಅಲ್ಲ ಕನ್ನಡʼ ಎಂದ ಸುದೀಪ್, ವೈರಲ್ ಆಯ್ತು ಕಿಚ್ಚನ ಮಾತು
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.