Kiccha Sudeep: ʻಕನ್ನಡ್ ಅಲ್ಲ ಕನ್ನಡʼ ಎಂದ ಸುದೀಪ್, ವೈರಲ್ ಆಯ್ತು ಕಿಚ್ಚನ ಮಾತು

Kiccha Sudeep: ವಿಕ್ರಾಂತ್ ರೋಣ ಪ್ರಚಾರ ಕಾರ್ಯ ದೆಹಲಿ ಸೇರಿದಂತೆ ಹಲವೆಡೆ ಭರ್ಜರಿಯಾಗಿ ನಡೆಯುತ್ತಿದೆ. ಈ ಮಧ್ಯೆ ಪ್ರಚಾರ ಕಾರ್ಯದಲ್ಲಿ ಕಿಚ್ಚನ ಒಂದು ಮಾತು ಕನ್ನಡಿಗರ ಅಭಿಮಾನ ಹೆಚ್ಚು ಮಾಡಿದೆ.

Written by - Chetana Devarmani | Last Updated : Jul 18, 2022, 02:54 PM IST
  • ವಿಕ್ರಾಂತ್ ರೋಣ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ
  • ದೆಹಲಿ ಸೇರಿದಂತೆ ಹಲವೆಡೆ ಭರ್ಜರಿ ಪ್ರಮೋಷನ್‌ ನಡೆಸುತ್ತಿರುವ ಚಿತ್ರತಂಡ
  • ನಿನ್ನೆ ವಿಕ್ರಾಂತ್ ರೋಣ ಸಿನಿಮಾದ NFT ಕುರಿತು ಸುದ್ದಿಗೋಷ್ಠಿ
Kiccha Sudeep: ʻಕನ್ನಡ್ ಅಲ್ಲ ಕನ್ನಡʼ ಎಂದ ಸುದೀಪ್, ವೈರಲ್ ಆಯ್ತು ಕಿಚ್ಚನ ಮಾತು title=
ವಿಕ್ರಾಂತ್ ರೋಣ

Kiccha Sudeep: ಸದ್ಯ ಎಲ್ಲೆಲ್ಲೂ ವಿಕ್ರಾಂತ್‌ ರೋಣ ಹವಾ ಬಲು ಜೋರಾಗಿದೆ. ಇನ್ನೇನೂ ಕೆಲವೇ ದಿನಗಳಲ್ಲಿ ಬೆಳ್ಳಿ ಪರದೆ ಮೇಲೆ ಅಬ್ಬರಿಸಲಿರುವ ವಿಕ್ರಾಂತ್‌ ರೋಣ ಪ್ರಮೋಷನ್‌ ಕೂಡ ಜೋರಾಗಿದೆ. ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ವಿಕ್ರಾಂತ್ ರೋಣ ಪ್ರಚಾರ ಕಾರ್ಯ ದೆಹಲಿ ಸೇರಿದಂತೆ ಹಲವೆಡೆ ಭರ್ಜರಿಯಾಗಿ ನಡೆಯುತ್ತಿದೆ. ಈ ಮಧ್ಯೆ ಪ್ರಚಾರ ಕಾರ್ಯದಲ್ಲಿ ಕಿಚ್ಚನ ಒಂದು ಮಾತು ಕನ್ನಡಿಗರ ಅಭಿಮಾನ ಹೆಚ್ಚು ಮಾಡಿದೆ.

ಇದನ್ನೂ ಓದಿ: ಮೊಗ್ಗಿನ ಮನಸ್ಸಿನಿಂದ ಕೆಜಿಎಫ್‌ವರೆಗೆ ರಾಕಿಂಗ್ ಸ್ಟಾರ್ ಯಶ್ 14 ವರ್ಷಗಳ ಸಿನಿಪಯಣ!!

ಈ ಮೊದಲು ಹಿಂದಿ ರಾಷ್ಟ್ರಭಾಷೆಯ ಕುರಿತು ಬಾಲಿವುಡ್ ನಟ ಅಜಯ್ ದೇವಗನ್ ಜೊತೆಗಿನ ಟ್ವೀಟ್ ವಾರ್‌ನಿಂದ ಕನ್ನಡಾಭಿಮಾನ ಮೆರೆದಿದ್ದ ಸುದೀಪ್‌, ಇದೀಗ ಸ್ಟೇಜ್ ಮೇಲೆ ಕನ್ನಡದ ಬಗೆಗಿನ ಅವರ ಮಾತು ಫುಲ್ ವೈರಲ್ ಆಗುತ್ತಿದೆ.

ನಿನ್ನೆ ವಿಕ್ರಾಂತ್ ರೋಣ ಸಿನಿಮಾದ NFT  ಕುರಿತು ಸುದ್ದಿಗೋಷ್ಠಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ NFT ಅನ್ನು ಪ್ರತಿನಿಧಿಸುವ ವ್ಯಕ್ತಿಯೊಬ್ಬರು ಸಿನಿಮಾ ಬಗ್ಗೆ ಹಾಗೂ ಕನ್ನಡ ಸಿನಿರಂಗದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಅವರು ಕನ್ನಡ್ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಕನ್ನಡ ಭಾಷೆ ಬರದ ಹಲವಾರು ಜನರು ಕನ್ನಡ ಎಂದು ಉಚ್ಛರಣೆ ಮಾಡಲ್ಲ. ಕನ್ನಡ್ ಎಂದು ಹೇಳುತ್ತಾರೆ.

 

 

ಹಾಗೆಯೇ ಈ ವ್ಯಕ್ತಿ ಸಹ ಕನ್ನಡ್‌ ಎಂದು ಹೇಳಿದ್ದಾರೆ. ಅದಕ್ಕೆ ನಟ ಸುದೀಪ್‌ ಅದು ಕನ್ನಡ್ ಅಲ್ಲ ಕನ್ನಡ ಎಂದು ಹೇಳಿಕೊಟ್ಟಿದ್ದಾರೆ. ಸದ್ಯ ಸುದೀಪ್‌ ಅವರ ಈ ವಿಡಿಯೋ ಎಲ್ಲೆಡೆ ಫುಲ್ ವೈರಲ್ ಆಗುತ್ತಿದೆ. ಅಲ್ಲದೇ ಕನ್ನಡಿಗರು ಮತ್ತೊಮ್ಮೆ ಸುದೀಪ್‌ ಬಾಷಾಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ:Yatharv Yash Video: ಯಶ್‌ಗೆ 'ಬ್ಯಾಡ್ ಬಾಯ್' ಎಂದ ಪುತ್ರ! ಅಪ್ಪ-ಮಗನ ಪ್ರೀತಿಯ ಜಗಳಕ್ಕೆ ಫ್ಯಾನ್ಸ್‌ ಫಿದಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News