ನವದೆಹಲಿ: ಮಿಲಿಟರಿ ಪೊಲೀಸ್ ಪಡೆಯಲ್ಲಿ ಮಹಿಳಾ ಯೋಧರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸುವ ಮೂಲಕ ಭಾರತೀಯ ಸೇನೆ ಇತಿಹಾಸ ನಿರ್ಮಿಸಿದೆ. ಇದಕ್ಕಾಗಿ ಈಗಾಗಲೇ ಆನ್ಲೈನ್ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.


COMMERCIAL BREAK
SCROLL TO CONTINUE READING

ಭಾರತಿಯ ಸೇನೆಯಲ್ಲಿ ಜನರಲ್ ಡ್ಯೂಟಿಗಾಗಿ 100 ಮಹಿಳಾ ಯೋಧರ ನೇಮಕಾತಿಗೆ ಇಂದು(ಏಪ್ರಿಲ್ 25) https://joinindianarmy.nic.in ವೆಬ್ಸೈಟ್ ನಲ್ಲಿಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಜೂನ್ 8 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. 


ಅರ್ಜಿ ಸಲ್ಲಿಸಲು ಗರಿಷ್ಠ 21 ವರ್ಷ ಮತ್ತು ಕನಿಷ್ಠ 17 ವರ್ಷ 6 ತಿಂಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು, ಹುತಾತ್ಮರಾದ ಯೋಧರ ವಿಧವಾ ಪತ್ನಿಯರಿಗೆ ಗರಿಷ್ಠ 30 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ. 


ಆಫೀಸರ್​ ಹುದ್ದೆಗಿಂತ ಕೆಳಗಿನ ಹುದ್ದೆಗಳಿಗಾಗಿ ಈ ನೇಮಕಾತಿ ಆರಂಭಿಸಲಾಗಿದ್ದು ಬೆಂಗಳೂರು, ಅಂಬಾಲಾ, ಲಖನೌ, ಜಬಲ್​ಪುರ್​ ಮತ್ತು ಶಿಲ್ಲಾಂಗ್​ನಲ್ಲಿ ನೇಮಕಾತಿ ರ‍್ಯಾಲಿ ನಡೆಯಲಿದೆ. ಆನ್​ಲೈನ್​ನಲ್ಲಿ ಹೆಸರು ನೋಂದಾಯಿಸಿಕೊಂಡವರಿಗೆ ಅಡ್ಮಿಟ್​ ಕಾರ್ಡ್​ ಅನ್ನು ಕಳುಹಿಸಿ, ಯಾವುದಾದರೂ ಒಂದು ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. 


ನೇಮಕಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.