Manish Sisodia Arrest: ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಬಂಧನ: ಸುದೀರ್ಘ ವಿಚಾರಣೆ ಬಳಿಕ ಸಿಬಿಐ ಮಹತ್ವದ ಕ್ರಮ
Delhi Deputy Chief Minister Manish Sisodia Arrest: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಆದರೆ ಕೆಲವೇ ನಿಮಿಷಗಳಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಇಂದು ಬಂಧಿಸಲಿದೆ ಎಂದು ನಮಗೆ ತಿಳಿಯಿತು” ಎಂದು ಪಕ್ಷ ಹೇಳಿದೆ.
Delhi Deputy Chief Minister Manish Sisodia Arrest: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಕೇಂದ್ರ ತನಿಖಾ ಸಂಸ್ಥೆ ಮಹತ್ವದ ಕ್ರಮ ಕೈಗೊಂಡಿದೆ. ಸುದೀರ್ಘ ವಿಚಾರಣೆ ಬಳಿಕ ಸಿಬಿಐ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿದೆ. ಮನೀಶ್ ಸಿಸೋಡಿಯಾ ಬಂಧನದಿಂದ ಆಮ್ ಆದ್ಮಿ ಪಕ್ಷದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: Mallika Sherawat: ತನ್ನ ಮೊದಲ ಸಿನಿಮಾದಲ್ಲಿಯೇ 21 ಕಿಸ್ ಕೊಟ್ಟಿದ್ದ ಆ ಬಾಲಿವುಡ್ ಸುಂದರಿ ಈಗ ಏನ್ಮಾಡ್ತಿದ್ದಾರೆ?
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಆದರೆ ಕೆಲವೇ ನಿಮಿಷಗಳಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಇಂದು ಬಂಧಿಸಲಿದೆ ಎಂದು ನಮಗೆ ತಿಳಿಯಿತು” ಎಂದು ಪಕ್ಷ ಹೇಳಿದೆ.
ಸಿಬಿಐ ವಿಚಾರಣೆಗೂ ಮುನ್ನ ಸಿಸೋಡಿಯಾ ಹೇಳಿದ್ದೇನು?
ಆಪಾದಿತ ಅಬಕಾರಿ ನೀತಿ ಹಗರಣದಲ್ಲಿ ಎಂಟು ಗಂಟೆಗಳ ವಿಚಾರಣೆಯ ನಂತರ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿದೆ. “ನಾನು 7-8 ತಿಂಗಳು ಜೈಲಿನಲ್ಲಿದ್ದರೂ ನನ್ನ ಬಗ್ಗೆ ಅನುಕಂಪ ಬೇಡ, ಹೆಮ್ಮೆ ಪಡಬೇಕು” ಎಂದು ಸಿಬಿಐ ವಿಚಾರಣೆಗೂ ಮುನ್ನ ಮನೀಶ್ ಸಿಸೋಡಿಯಾ ಹೇಳಿದ್ದರು. “ಪ್ರಧಾನಿ ಮೋದಿ ಅರವಿಂದ್ ಕೇಜ್ರಿವಾಲ್‌ಗೆ ಹೆದರುತ್ತಾರೆ, ಆದ್ದರಿಂದ ಅವರು ನನ್ನನ್ನು ನಕಲಿ ಪ್ರಕರಣದಲ್ಲಿ ಸಿಲುಕಿಸಲು ಬಯಸುತ್ತಾರೆ. ನೀವು ಹೋರಾಡಬೇಕು” ಎಂಬುದಾಗಿ ಹೇಳಿಕೆ ನೀಡಿದ್ದಾರೆ.
"ನನ್ನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ಆಕೆಯನ್ನು ನೋಡಿಕೊಳ್ಳಿ. ನಾನು ದೆಹಲಿಯ ಮಕ್ಕಳಿಗೆ ಹೇಳಲು ಬಯಸುತ್ತೇನೆ. ಕಷ್ಟಪಟ್ಟು ಓದಿ ಮತ್ತು ನಿಮ್ಮ ಹೆತ್ತವರನ್ನು ನೋಡಿಕೊಳ್ಳಿ" ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಕೇಂದ್ರದ ಸೂಚನೆ ಮೇರೆಗೆ ಸಿಬಿಐ ಕ್ರಮ!
ಎಎಪಿ ಶಾಸಕ ಸೌರಭ್ ಭಾರದ್ವಾಜ್, "ಸಿಬಿಐ ಸಂಪೂರ್ಣವಾಗಿ ಕೇಂದ್ರದ ಆದೇಶದಲ್ಲಿದೆ. ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲಾಗುವುದು ಎಂದು ನಮಗೆ ಯಾವಾಗಲೋ ತಿಳಿದಿತ್ತು" ಎಂದು ಹೇಳಿದರು. "ತನಿಖಾ ಸಂಸ್ಥೆಗಳು ಈ ರೀತಿ ಕಾರ್ಯನಿರ್ವಹಿಸುತ್ತವೆ ಎಂಬುದು ದುಃಖಕರ ಮತ್ತು ಊಹಿಸಬಹುದಾದ ಸಂಗತಿಯಾಗಿದೆ" ಎಂದು ಅವರು ಹೇಳಿದರು.
ಇದನ್ನೂ ಓದಿ: 17 ಕೋಟಿಯ ಸೀರೆ, 90 ಕೋಟಿ ಬೆಲೆಯ ಚಿನ್ನಾಭರಣ ಧರಿಸಿ ಅದ್ಧೂರಿ ಮದುವೆಯಾದ ದಕ್ಷಿಣ ಭಾರತದ ತಾರೆಯರು
'ಬಂಧನವು ಸರ್ವಾಧಿಕಾರದ ಅಂತ್ಯ'
“ಈ ಬಂಧನ ಸರ್ವಾಧಿಕಾರದ ಪರಮಾವಧಿ” ಎಂದು ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ. “ಮೋದಿ ಜೀ, ಒಬ್ಬ ಒಳ್ಳೆಯ ವ್ಯಕ್ತಿ. ಆದರೆ ಅತ್ಯುತ್ತಮ ಶಿಕ್ಷಣ ಮಂತ್ರಿಯನ್ನು ಬಂಧಿಸಿ ನೀವು ಒಳ್ಳೆಯದನ್ನು ಮಾಡಿಲ್ಲ, ದೇವರು ಕೂಡ ನಿಮ್ಮನ್ನು ಕ್ಷಮಿಸುವುದಿಲ್ಲ. ಒಂದಲ್ಲ ಒಂದು ದಿನ ನಿಮ್ಮ ಸರ್ವಾಧಿಕಾರ ಖಂಡಿತಾ ಮೋದಿಜೀ ಅಂತ್ಯವಾಗುತ್ತದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.