Korean Ambassador Dance to Natu Natu Song: ಇತ್ತೀಚೆಗೆ ಭಾರತದ ಸಿನಿಮಾಗಳ ಕಡೆ ಜಗತ್ತೇ ತಿರುಗಿನೋಡುತ್ತಿದೆ. ಅದರಲ್ಲೂ ದಕ್ಷಿಣ ಭಾರತದ ಸಿನಿಮಾಗಳು ಜನಮನ್ನಣೆ ಗಳಿಸುತ್ತಿವೆ. ತೆಲುಗು ಭಾಷೆಯ ‘RRR’ ಸಿನಿಮಾ ಜಾಗತಿಕವಾಗಿ ಮನ್ನಣೆ ಪಡೆದಿದ್ದು, ಅದರ ಹಾಡು ‘ನಾಟು ನಾಟು’ವಿಗೆ ಗ್ಲೋಬಲ್ ಅವಾರ್ಡ್ ಕೂಡ ಲಭಿಸಿತ್ತು.
ಇದನ್ನೂ ಓದಿ: Virat Kohli:“ನನ್ನನ್ನು ಮದುವೆಯಾಗು ಕೊಹ್ಲಿ…!!”: ವಿರಾಟ್’ಗೆ ಪ್ರಪೋಸ್ ಮಾಡಿದ ಈ ಸ್ಟಾರ್ ಕ್ರಿಕೆಟ್ ಆಟಗಾರ್ತಿ
ಈ ಹಾಡಿನ ಕ್ರೇಜ್ ಎಷ್ಟರ ಮಟ್ಟಿಗೆ ಇದೆ ಎಂದರೆ, ಇತ್ತೀಚೆಗೆ ಪಾಕಿಸ್ತಾನದ ಯುವತಿಯೊಬ್ಬಳು ‘ನಾಟು ನಾಟು’ ಸಾಂಗ್’ಗೆ ಡ್ಯಾನ್ಸ್ ಮಾಡಿದ್ದಳು. ಇದೀಗ ಮತ್ತೆ ಭಾರತದಲ್ಲಿನ ಕೊರಿಯನ್ ರಾಯಭಾರ ಕಚೇರಿಯ ಕೊರಿಯನ್ ರಾಯಭಾರಿ ಮತ್ತು ಸಿಬ್ಬಂದಿ ನಾಟು ನಾಟು ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಇದರ ವಿಡಿಯೋ ಸಖತ್ ವೈರಲ್ ಆಗಿದೆ.
ಟ್ವಿಟರ್‌ನಲ್ಲಿ ಕೊರಿಯಾದ ರಾಯಭಾರ ಕಚೇರಿಯು ಕೊರಿಯಾದ ರಾಯಭಾರಿ ಚಾಂಗ್ ಜೇ-ಬೊಕ್ ಮತ್ತು ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುವ ಕೊರಿಯಾದ ಸಿಬ್ಬಂದಿ ಆರ್‌ಆರ್‌ಆರ್ ಚಲನಚಿತ್ರದ ‘ನಾಟು ನಾಟು’ ಹಾಡಿಗೆ ಕುಣಿಯುತ್ತಿರುವ ವೀಡಿಯೊ ಕ್ಲಿಪ್ ಅನ್ನು ಪೋಸ್ಟ್ ಮಾಡಿದೆ.
ಕೊರಿಯನ್ ರಾಯಭಾರ ಕಚೇರಿಯು RRR ಚಲನಚಿತ್ರದ ನಾಟು ನಾಟು ಹಾಡಿನ ಡ್ಯಾನ್ಸ್ ವಿಡಿಯೋ ಶೇರ್ ಮಾಡುತ್ತಿದ್ದಂತೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು, “ಲವ್ಲಿ ಆಂಡ್ ಲವ್ಲಿ ಟೀಂ ಎಫರ್ಟ್” ಎಂದು ಹೇಳಿದ್ದಾರೆ.
𝐍𝐚𝐚𝐭𝐮 𝐍𝐚𝐚𝐭𝐮 𝐑𝐑𝐑 𝐃𝐚𝐧𝐜𝐞 𝐂𝐨𝐯𝐞𝐫 - 𝐊𝐨𝐫𝐞𝐚𝐧 𝐄𝐦𝐛𝐚𝐬𝐬𝐲 𝐢𝐧 𝐈𝐧𝐝𝐢𝐚
Do you know Naatu?
We are happy to share with you the Korean Embassy's Naatu Naatu dance cover. See the Korean Ambassador Chang Jae-bok along with the embassy staff Naatu Naatu!! pic.twitter.com/r2GQgN9fwC
— Korean Embassy India (@RokEmbIndia) February 25, 2023
2022 ರಲ್ಲಿ ಬಿಡುಗಡೆಯಾದ ತೆಲುಗು ಭಾಷೆಯ ‘RRR’ ಆಕ್ಷನ್ ಡ್ರಾಮಾ ಸೂಪರ್ ಹಿಟ್ ಆಗಿದೆ. ಈ ಹಿಂದೆ ಬಾಹುಬಲಿ ಚಲನಚಿತ್ರಗಳನ್ನು ನಿರ್ಮಿಸಿದ ಎಸ್‌ಎಸ್ ರಾಜಮೌಳಿ ಅವರೇ ಈ ಸಿನಿಮಾವನ್ನು ಸಹ ನಿರ್ದೇಶಿಸಿದ್ದಾರೆ. 1920 ರಲ್ಲಿದ್ದ ಇಬ್ಬರು ಭಾರತೀಯ ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು (ರಾಮ್ ಚರಣ್) ಮತ್ತು ಕೊಮರಂ ಭೀಮ್ (ಜೂನಿಯರ್ ಎನ್ ಟಿ ಆರ್) ಅವರ ಕಾಲ್ಪನಿಕ ಕಥೆಯನ್ನು ಈ ಸಿನಿಮಾ ಹೇಳುತ್ತದೆ.
ಇದನ್ನೂ ಓದಿ: Sarah Taylor: ಮಗುವಿನ ನಿರೀಕ್ಷೆಯಲ್ಲಿದ್ದಾರೆ ವಿರಾಟ್’ಗೆ ಪ್ರಪೋಸ್ ಮಾಡಿದ್ದ ಲೆಸ್ಬಿಯನ್ ಕ್ರಿಕೆಟ್ ಆಟಗಾರ್ತಿ!
ಈ ಚಲನಚಿತ್ರವು ಭಾರೀ ಅಂತರರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿದೆ. ನಾಟು ನಾಟು ಹಾಡು 80 ನೇ ಗೋಲ್ಡನ್ ಗ್ಲೋಬ್ಸ್‌ನಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದು, ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಗೀತೆಯಾಗಿದೆ. ಎಂಎಂ ಕೀರವಾಣಿ ಸಂಯೋಜನೆಯ ಈ ಹಾಡನ್ನು ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ್ ಹಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.