ಸೇನಾ ದಿನಾಚರಣೆಯ ಪಥಸಂಚಲನದ ತೀರ್ಪುಗಾರಿಕೆಯಲ್ಲಿ ಕ್ರಾಂತಿ ತರಲಿದೆ ಕೃತಕ ಬುದ್ಧಿಮತ್ತೆ
Artificial Intelligence in Army Day: ಮೇಜರ್ ಜನರಲ್ ಸಲಿಲ್ ಸೇಥ್ ಅವರು ಮಧ್ಯ ಯುಪಿ ಸಬ್ ಲಕ್ನೋದ ಜನೆಲ್ ಆಫೀಸರ್ ಕಮಾಂಡಿಂಗ್ ಆಗಿದ್ದು, `ಸೇನಾ ದಿನಾಚರಣೆಯ ಪಥಸಂಚಲನವನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ನಡೆಸಬೇಕಾಗುತ್ತದೆ.
Artificial Intelligence in Army Day: ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ಬರು, ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯುತ್ತಿರುವ ಭಾರತೀಯ ಸೇನಾ ದಿನಾಚರಣೆಯ ಪಥ ಸಂಚಲನದ ತೀರ್ಪುಗಾರಿಕೆಯಲ್ಲಿ ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆಯ (ಎಐ) ಬಳಕೆಯಾಗಲಿದೆ ಎಂದಿದ್ದಾರೆ. ಪಥ ಸಂಚಲನದ ಉಸ್ತುವಾರಿ ಹೊಂದಿರುವ ಮೇಜರ್ ಜನರಲ್ ಸಲಿಲ್ ಸೇಥ್ ಅವರು ಈ ಕುರಿತು ಮಾತನಾಡುತ್ತಾ, "ಇದೇ ಮೊದಲ ಬಾರಿಗೆ ನಾವು ಅತ್ಯುತ್ತಮ ಪಥ ಸಂಚಲನ ನಡೆಸುವ ತಂಡವನ್ನು ಆಯ್ಕೆ ಮಾಡಲು ಕೃತಕ ಬುದ್ಧಿಮತ್ತೆಯನ್ನು ಬಳಸಲಿದ್ದೇವೆ. ಎಲ್ಲ ತಂಡಗಳೂ ಅತ್ಯಂತ ನಿಖರವಾಗಿ ಪಥ ಸಂಚಲನ ನಡೆಸುತ್ತವೆ. ಈ ಹಿಂದಿನ ಪಥ ಸಂಚಲನ ಕಳೆದ ವರ್ಷ ಜನವರಿ 15ರಂದು ಬೆಂಗಳೂರಿನಲ್ಲಿ ನೆರವೇರಿತ್ತು" ಎಂದರು.
ಇದನ್ನೂ ಓದಿ: Makara Jyothi 2024: ಶಬರಿಮಲೆಯಲ್ಲಿ ಮಕರ ಜ್ಯೋತಿ ಗೋಚರಿಸುವ ಶುಭ ಸಮಯ ಹೀಗಿದೆ
ಮೇಜರ್ ಜನರಲ್ ಸಲಿಲ್ ಸೇಥ್ ಅವರು ಮಧ್ಯ ಯುಪಿ ಸಬ್ ಲಕ್ನೋದ ಜನೆಲ್ ಆಫೀಸರ್ ಕಮಾಂಡಿಂಗ್ ಆಗಿದ್ದು, "ಸೇನಾ ದಿನಾಚರಣೆಯ ಪಥಸಂಚಲನವನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ನಡೆಸಬೇಕಾಗುತ್ತದೆ. ಪಥ ಸಂಚಲನ ನಡೆಸುವಾಗ, ಕೈ ಮತ್ತು ಕಾಲುಗಳನ್ನು ಒಂದು ನಿರ್ದಿಷ್ಟ ಎತ್ತರಕ್ಕೆ ಮೇಲೆ ಒಯ್ಯಬೇಕು. ಮತ್ತು ಆಯುಧವನ್ನು ನಿರ್ದಿಷ್ಟ ಚೌಕಟ್ಟಿನಲ್ಲಿ ಸಾಗಿಸಬೇಕು" ಎಂದು ಮಾಹಿತಿ ನೀಡಿದ್ದಾರೆ.
ಭಾರತೀಯ ಸೇನಾ ದಿನಾಚರಣೆಯನ್ನು, 1949ರ ಜನವರಿ 15ರಂದು ಜನರಲ್ ಕೆ ಎಂ ಕಾರ್ಯಪ್ಪ (ಬಳಿಕ ಫೀಲ್ಡ್ ಮಾರ್ಷಲ್) ಅವರು ಕೊನೆಯ ಬ್ರಿಟಿಷ್ ಕಮಾಂಡರ್ ಇನ್ ಚೀಫ್ ಆಗಿದ್ದ ಫ್ರಾನ್ಸಿಸ್ ರಾಯ್ ಬುಚರ್ ಅವರಿಂದ ಅಧಿಕಾರ ವಹಿಸಿಕೊಂಡ ದಿನವನ್ನು ಸ್ಮರಿಸಲು ಪ್ರತಿ ವರ್ಷವೂ ಜನವರಿ 15ರಂದು ಆಚರಿಸಲಾಗುತ್ತದೆ.
ಈ ದಿನದಂದು ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಅಪ್ರತಿಮ ಶೌರ್ಯ, ಬದ್ಧತೆ, ಮತ್ತು ತ್ಯಾಗವನ್ನು ಪ್ರದರ್ಶಿಸಿದ ಯೋಧರನ್ನು ಸ್ಮರಿಸಲಾಗುತ್ತದೆ. ಭಾರತೀಯ ಸೇನಾ ದಿನವನ್ನು ಪ್ರತಿ ವರ್ಷವೂ ಜನವರಿ 15ರಂದು ಆಚರಿಸಲಾಗುತ್ತದೆ. ಈ ವರ್ಷದ ಸೇನಾ ದಿನಾಚರಣೆ ಲಕ್ನೋದಲ್ಲಿ ಜರುಗಲಿದೆ.
ಭಾರತೀಯ ಸೇನೆ ನಿಧಾನವಾಗಿ ಆಧುನಿಕ ಸೇನಾಪಡೆಯಾಗಿ ಪರಿವರ್ತನೆ ಹೊಂದುತ್ತಿದೆ. ಭಾರತೀಯ ಸೇನೆ ಮುಂದಿನ ದಿನಗಳಲ್ಲಿ ಡ್ರೋನ್ ಮತ್ತು ಆ್ಯಂಟಿ ಡ್ರೋನ್ ವ್ಯವಸ್ಥೆಗಳನ್ನು ತಮ್ಮ ಪದಾತಿದಳ, ಆರ್ಟಿಲರಿ ಮತ್ತು ಶಸ್ತ್ರಸಜ್ಜಿತ ಬಟಾಲಿಯನ್‌ಗಳಿಗೆ ಸೇರಿಸಲು ಉದ್ದೇಶಿಸಿದೆ.
ಅದರೊಡನೆ, ಸಾಂಪ್ರದಾಯಿಕ ಅಂತರಗಳನ್ನು ತಗ್ಗಿಸುವ ಸಲುವಾಗಿ, ಭಾರತೀಯ ಸೇನೆ 2024ರ ವರ್ಷವನ್ನು ತಾಂತ್ರಿಕತೆಯ ಅಳವಡಿಕೆಯ ವರ್ಷ ಎಂದು ಪರಿಗಣಿಸಲಾಗಿದೆ. ಸೇನೆ ಈ ವರ್ಷ ಕಮಾಂಡ್ ಸೈಬರ್ ಆಪರೇಷನ್ಸ್ ಸಪೋರ್ಟ್ ವಿಂಗ್ಸ್ (ಸಿಸಿಒಎಸ್‌ಡಬ್ಲ್ಯು) ಅನ್ನು ಜಾರಿಗೆ ತರಲಿದೆ.
ಈ ವರ್ಷದ ಭಾರತೀಯ ಸೇನಾ ದಿನವನ್ನು 'ನಿರಂತರ ದೇಶದ ಸೇವೆಯಲ್ಲಿ' ಎಂಬ ಘೋಷವಾಕ್ಯದಡಿ ಆಚರಿಸಲಾಗುತ್ತಿದೆ. ಈ ಥೀಮ್ ದೇಶದ ಸೇವೆಗೆ ಸಂಬಂಧಿಸಿದಂತೆ ಭಾರತೀಯ ಸೇನೆಯ ಅಮಿತ ಉತ್ಸಾಹ, ಬದ್ಧತೆ ಮತ್ತು ವೃತ್ತಿಪರತೆಯನ್ನು ತೋರುತ್ತದೆ. ಅದರೊಡನೆ, ದೇಶದ ಸುರಕ್ಷತೆ ಮತ್ತು ನೀತಿಗಳನ್ನು ಎತ್ತಿಹಿಡಿಯಲು ಭಾರತೀಯ ಸೇನಾ ಸಿಬ್ಬಂದಿಗಳ ನಿಸ್ವಾರ್ಥ ನಡೆಯನ್ನೂ ಪ್ರದರ್ಶಿಸುತ್ತದೆ.
ಈ ಬಾರಿಯ ಥೀಮ್ ಭಾರತೀಯ ಸೇನಾ ಘೋಷವಾಕ್ಯವಾದ 'ಸರ್ವಿಸ್ ಬಿಫೋರ್ ಸೆಲ್ಫ್' ಎಂಬುದಕ್ಕೆ ಪೂರಕವಾಗಿದೆ. ಭಾರತೀಯ ಸೇನೆಯ ಘೋಷವಾಕ್ಯ ವೈಯಕ್ತಿಕ ಹಿತಾಸಕ್ತಿಗಳಿಗಿಂತಲೂ ರಾಷ್ಟ್ರೀಯ ಹಿತಾಸಕ್ತಿಗೆ ಹೆಚ್ಚಿನ ಗಮನ ನೀಡಬೇಕು ಎನ್ನುವುದನ್ನು ಸೂಚಿಸುತ್ತದೆ. ಇದು ಭಾರತದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ, ಮತ್ತು ಸಾರ್ವಜನಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಭಾರತೀಯ ಸೇನೆಯ ಬದ್ಧತೆಗೆ ಕೈಗನ್ನಡಿಯಾಗಿದೆ.
2024ರ ಭಾರತೀಯ ಸೇನಾ ದಿನದ ಆಚರಣೆ ಹೇಗೆ?
ಸೇನಾ ದಿನಾಚರಣೆ ಯುವ ಜನತೆಗೆ ಸೇನೆಯಲ್ಲಿ ಉದ್ಯೋಗ ಪಡೆದುಕೊಳ್ಳುವುದಕ್ಕೆ ಮತ್ತು ದೇಶದ ರಕ್ಷಣೆಗೆ ಕೊಡುಗೆ ನೀಡಲು ಕಾರ್ಯಾಚರಿಸುವುದಕ್ಕೆ ಉತ್ತೇಜನ ನೀಡುತ್ತದೆ.
ಭಾರತೀಯ ಸೇನಾ ದಿನದಂದು ಅದ್ಧೂರಿ ಆಚರಣೆಗಳು ನಡೆದು, ಭಾರತೀಯ ಸೇನಾ ಸಿಬ್ಬಂದಿಗಳ ಶೌರ್ಯ ಮತ್ತು ಬದ್ಧತೆಯನ್ನು ಗುರುತಿಸಿ, ಶ್ಲಾಘಿಸಲಾಗುತ್ತದೆ.
2024ರ ಸೇನಾ ದಿನದಂದು ಲಕ್ನೋದ ಪೆರೇಡ್ ಮೈದಾನದಲ್ಲಿ ಆಕರ್ಷಕ ಪಥ ಸಂಚಲನ ನೆರವೇರಲಿದೆ. ಈ ಪಥ ಸಂಚಲನ ಸೇನಾ ದಿನಾಚರಣೆಯ ಪ್ರಮುಖ ಆಕರ್ಷಣೆಯಾಗಿದೆ. ಇದು ಭಾರತೀಯ ಸೇನಾ ಸಾಮರ್ಥ್ಯ, ಶಿಸ್ತು, ಮತ್ತು ಕಾರ್ಯಾಚರಣಾ ಸಿದ್ಧತೆಗಳನ್ನು ಪ್ರದರ್ಶಿಸಲಿದೆ.
ಸೈನಿಕರು ತಮ್ಮ ಅಪ್ರತಿಮ ಶೌರ್ಯ ಮತ್ತು ಸಾಹಸ ಕಾರ್ಯಗಳಿಗಾಗಿ ಶೌರ್ಯ ಪದಕಗಳು ಮತ್ತು ವೀರ ಚಕ್ರ, ಪರಮ ವೀರ ಚಕ್ರ, ಮತ್ತು ಇತರ ಸೇನಾ ಗೌರವಗಳನ್ನು ಪಡೆದುಕೊಳ್ಳುತ್ತಾರೆ.
ಈ ದಿನದಂದು ಭಾರತೀಯ ಸೇನಾ ಮುಖ್ಯಸ್ಥರು ಪಥ ಸಂಚಲನಕ್ಕೆ ವಂದನೆ ಸಲ್ಲಿಸುತ್ತಾರೆ. ಈ ದಿನದಂದು ದೇಶಕ್ಕಾಗಿ ತಮ್ಮ ಪ್ರಾಣಾರ್ಪಣೆ ಮಾಡಿದ ಭಾರತೀಯ ವೀರ ಯೋಧರನ್ನು ಸ್ಮರಿಸಲಾಗುತ್ತದೆ.
ವಿವಿಧ ರೆಜಿಮೆಂಟ್‌ಗಳು ಪರಸ್ಪರ ಸಮನ್ವಯ ಹೊಂದಿ ಪಥ ಸಂಚಲನ ನಡೆಸುವ ಮೂಲಕ, ಭಾರತೀಯ ಸೇನೆಯಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಪ್ರದರ್ಶಿಸಲಾಗುತ್ತದೆ. ಇದು ವಿವಿಧ ರೆಜಿಮೆಂಟ್‌ಗಳ ವಿಶಿಷ್ಟ ಇತಿಹಾಸ ಮತ್ತು ಪರಂಪರೆಗಳನ್ನು ತೋರಿಸುತ್ತದೆ.
ಪಥ ಸಂಚಲನದ ಬಳಿಕ, ಸಾಂಪ್ರದಾಯಿಕ ನೃತ್ಯಗಳು, ಮಿಲಿಟರಿ ಇತಿಹಾಸ ಪ್ರದರ್ಶನ ಮತ್ತು ಸಂಗೀತದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರುತ್ತವೆ.
ಈ ಸಮಾರಂಭ ಭಾರತೀಯ ಸೇನೆ ಮತ್ತು ನಾಗರಿಕರ ನಡುವೆ ಪರಸ್ಪರ ಮೆಚ್ಚುಗೆ ಮತ್ತು ಗ್ರಹಿಕೆ ಮೂಡಿಸಲು ನೆರವಾಗುತ್ತದೆ. ಸೇನೆ ಮತ್ತು ನಾಗರಿಕರ ನಡುವಿನ ಬಾಂಧವ್ಯ ಹೆಚ್ಚಿಸಲು ನೆರವಾಗುತ್ತದೆ.
ಇದನ್ನೂ ಓದಿ: ಈ ಎಣ್ಣೆಗೆ ಕರ್ಪೂರ ಬೆರೆಸಿ ಹಚ್ಚಿದರೆ ಸಾಕು… ಬಿಳಿಕೂದಲು ಕ್ಷಣದಲ್ಲೇ ಗಾಢವಾಗಿ ಕಪ್ಪಾಗುತ್ತೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.