ಅರುಣಾಚಲ ಪ್ರದೇಶದ ಗ್ರಾಮವೊಂದು ಇದೀಗ ಏಷ್ಯಾದಲ್ಲೇ ಅತಿ ಶ್ರೀಮಂತ ಗ್ರಾಮಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಕೇಂದ್ರದ ರಕ್ಷಣಾ ಸಚಿವಾಲಯವು ಈ ಪ್ರದೇಶದ ಭೂ ಸ್ವಾಧೀನಕ್ಕಾಗಿ ಪಾವತಿಸಿದ ಹಣವೆಷ್ಟು ಗೊತ್ತೇ? ಬರೋಬ್ಬರಿ 40,80,38,400 ರೂ.ಗಳು!


COMMERCIAL BREAK
SCROLL TO CONTINUE READING

ಹೌದು, 200.056 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ ಬೋಂಜಾ ಗ್ರಾಮದ 31 ಮನೆಗಳಿಗೆ ರಕ್ಷಣಾ ಸಚಿವಾಲಯ ಈ ಹಣ ಬಿಡುಗಡೆ ಮಾಡಿದೆ. 


ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರದಿಂದ ಹಣ ಪಡೆದ ಬಹಳಷ್ಟು ಕುಟುಂಬಗಳು ಇಂದು ಕೋಟ್ಯಾಧಿಪತಿಗಳಾಗಿವೆ. ಅಂದರೆ, ಭೂ ಸ್ವಾಧಿನಕ್ಕಾಗಿ ಒಂದು ಕುಟುಂಬಕ್ಕೆ 2.44 ಕೋಟಿ ರೂ. ದೊರೆತಿದ್ದಾರೆ, ಮತ್ತೊಂದು ಕುಟುಂಬಕ್ಕೆ 6.73 ಕೋಟಿ ರೂ. ಪರಿಹಾರ ದೊರೆತಿದೆ. 


31 ಕುಟುಂಬಗಳಲ್ಲಿ 29 ಕುಟುಂಬಗಳಿಗೆ ಭೂ ಸ್ವಾಧಿನ ಪರಿಹಾರವಾಗಿ 1,09,03,813.37 ರೂ. ಪಾವತಿಸಲಾಗಿದೆ. ಹಾಗಾಗಿ ಕೋಟ್ಯಾಧಿಪತಿಯಾಗಿರುವ ಎಲ್ಲಾ ಕುಟುಂಬಗಳನ್ನು ಹೊಂದಿರುವ ಏಕೈಕ ಗ್ರಾಮ ಎಂಬ ಹೆಗ್ಗಳಿಕೆಗೆ ಬೋಂಜಾ ಗ್ರಾಮ ಪಾತ್ರವಾಗಿದೆ. 


ತವಾಂಗ್ ಗ್ಯಾರಿಸನ್ ನ ಕೀ ಲೋಕೇಶನ್ ಪ್ಲ್ಯಾನ್ ಯುನಿಟ್ಗಳನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಭಾರತೀಯ ಸೇನೆಯು ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು.


ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪಿಮಾ ಖುಂಡು ಅವರು ಕುಟುಂಬಗಳಿಗೆ ಸೋಮವಾರ ಪರಿಹಾರ ವಿತರಿಸಿದರು.