ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಸಿಸೋಡಿಯಾ ಹೆಸರು, ಅದಕ್ಕೆ ಸಿಬಿಐ ದಾಳಿ ಗಿಫ್ಟ್!
ಇದಾದ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸುದ್ದಿಗೋಷ್ಠಿ ನಡೆಸುವ ಮೂಲಕ ಮನೀಶ್ ಸಿಸೋಡಿಯಾ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
Arvind Kejriwal Press Conference: ಅಬಕಾರಿ ಹಗರಣ ಪ್ರಕರಣದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮನೆ ಸೇರಿದಂತೆ ದೆಹಲಿ-ಎನ್‌ಸಿಆರ್‌ನ 21 ಸ್ಥಳಗಳ ಮೇಲೆ ಸಿಬಿಐ ಇಂದು ದಾಳಿ ನಡೆಸಿತು. ಇದಾದ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸುದ್ದಿಗೋಷ್ಠಿ ನಡೆಸುವ ಮೂಲಕ ಮನೀಶ್ ಸಿಸೋಡಿಯಾ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ದೆಹಲಿಯ ಶಿಕ್ಷಣ ಮಾದರಿ ಪ್ರಪಂಚದಾದ್ಯಂತ ಚರ್ಚೆ
ಸುದ್ದಿಗೋಷ್ಠಿಗೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯೊಂದಿಗೆ ಆಗಮಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ವಿಶ್ವದ ಅತ್ಯುತ್ತಮ ಶಿಕ್ಷಣ ಸಚಿವ ಎಂದು ಹೊಗಳಿದರು. ಮನೀಷ್ ಸಿಸೋಡಿಯಾ ಅವರ ಫೋಟೋ ಹಾಗೂ ದೆಹಲಿಯ ಶಿಕ್ಷಣ ಮಾದರಿಯ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಸುದ್ದಿ ಪ್ರಕಟವಾಗಿದೆ ಎಂದರು.
Rajinikanth as Governor: ರಾಜ್ಯಪಾಲರಾಗಿ ನೇಮಕವಾಗಲಿದ್ದಾರಾ ರಜನಿಕಾಂತ್?
ಈ ಮೊಬೈಲ್ ನಂಬರ್ ಬಿಡುಗಡೆ ಮಾಡಿದ ಸಿಎಂ ಕೇಜ್ರಿವಾಲ್
ಸುದ್ದಿಗೋಷ್ಠಿಯಲ್ಲಿ ಅರವಿಂದ್ ಕೇಜ್ರಿವಾಲ್, ಮೊಬೈಲ್ ನಂಬರ್ ಒಂದನ್ನು ಬಿಡುಗಡೆ ಮಾಡಿ, ದೇಶಾದ್ಯಂತದ ಜನರು ಮಿಸ್ಡ್ ಕಾಲ್ ಮಾಡಿ ಮತ್ತು ಭಾರತವನ್ನು ನಂಬರ್ ಒನ್ ಮಾಡಲು ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. 'ಭಾರತವನ್ನು ವಿಶ್ವದ ನಂ 1 ರಾಷ್ಟ್ರವಾಗಿ ನೋಡಲು ಈ ಮಿಷನ್‌ಗೆ ಸೇರಲು ಬಯಸುವವರಿಗೆ ನಾನು ಇಂದು ಮಿಸ್ಡ್ ಕಾಲ್ ನಂಬರ್ 9510001000 ಸಂಖ್ಯೆಯನ್ನು ಬಿಡುಗಡೆ ಮಾಡುತ್ತಿದ್ದೇನೆ. ಅತ್ಯಂತ ಶಕ್ತಿಶಾಲಿ ರಾಷ್ಟ್ರ ಮತ್ತು ಅತ್ಯುತ್ತಮ ರಾಷ್ಟ್ರವನ್ನಾಗಿ ಮಾಡಲು ಅವರು ಈ ಮಿಷನ್‌ಗೆ ಸೇರಿಕೊಳ್ಳಬೇಕು ಎಂದರು.
ಈ ಹಿಂದೆ ಏನೂ ಸಿಕ್ಕಿಲ್ಲ, ಈಗ ಸಿಗುವುದಿಲ್ಲ: ಕೇಜ್ರಿವಾಲ್
ಇನ್ನು ಮುಂದುವರೆದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, 'ಇಂದು ಮನೀಶ್ ಸಿಸೋಡಿಯಾ ಅವರನ್ನು ವಿಶ್ವದ ಅತ್ಯುತ್ತಮ ಶಿಕ್ಷಣ ಸಚಿವ ಎಂದು ಘೋಷಿಸಲಾಗಿದೆ, ಆದರೆ ಸಿಬಿಐ ತಂಡವು ದಾಳಿ ನಡೆಸಲು ಅವರ ನಿವಾಸಕ್ಕೆ ತಲುಪಿದೆ. ನ್ಯೂಯಾರ್ಕ್ ಟೈಮ್ಸ್ ಮುಖಪುಟದಲ್ಲಿ ಬಂದು ದೆಹಲಿಯಲ್ಲಿ ಶಿಕ್ಷಣ ಕ್ರಾಂತಿ ತರುವುದು ಅಷ್ಟು ಸುಲಭವಾಗಿರಲಿಲ್ಲ. 'ಇದು ಮೊದಲ ದಾಳಿಯಲ್ಲ. ಕಳೆದ 7 ವರ್ಷಗಳಲ್ಲಿ ಮನೀಶ್ ಸಿಸೋಡಿಯಾ ಮೇಲೆ ಹಲವು ಬಾರಿ ದಾಳಿ ನಡೆದಿದೆ. ಅವರ ವಿರುದ್ಧ ಹಲವು ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ನನ್ನ ಮೇಲೆ, ಸತ್ಯೇಂದ್ರ ಜೈನ್, ಕೈಲಾಶ್ ಗೆಹ್ಲೋಟ್ ಅವರ ಮೇಲೂ ದಾಳಿ ನಡೆಸಲಾಯಿತು, ಆದರೆ ಏನೂ ಪತ್ತೆಯಾಗಲಿಲ್ಲ. ಸಿಬಿಐ ತನ್ನ ಕೆಲಸವನ್ನು ಮಾಡುತ್ತಿದೆ, ಭಯಪಡುವ ಅಗತ್ಯವಿಲ್ಲ. ಸಿಬಿಐ ತನ್ನ ಕೆಲಸ ಮಾಡಲು ಬಿಡಬೇಕು, ನಮಗೆ ಕಿರುಕುಳ ನೀಡಲು ಮೇಲಿನಿಂದ ಆದೇಶವಿದೆ. ಅಡೆತಡೆಗಳು ಬಂದರೂ ಕೆಲಸ ನಿಲ್ಲುವುದಿಲ್ಲ’ ಎಂದು ಗುಡುಗಿದರು.
ಇದನ್ನೂ ಓದಿ : Video: ಮೃಗಗಳಂತೆ ವರ್ತಿಸಿದ ಮನುಷ್ಯ, ಬಾಲ-ಕಾಲ ಹಿಡಿದೆಳೆದು ಚಿರತೆಯ ಪ್ರಾಣವನ್ನೇ ಹೀರಿದ ಕ್ರೂರಿ
ಅಬಕಾರಿ ನೀತಿಯಲ್ಲಿನ ಹಗರಣದ ಆಧಾರದ ಮೇಲೆ ದಾಳಿ
ಕಳೆದ ವರ್ಷ ನವೆಂಬರ್‌ನಲ್ಲಿ ದೆಹಲಿಯಲ್ಲಿ ತಂದ ಹೊಸ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐನಿಂದ ಎಫ್‌ಐಆರ್ ದಾಖಲಿಸಲಾಗಿದೆ. ಈಗ ಸಿಬಿಐ ಇದರ ಮೇಲೆಯೇ ದಾಳಿ ನಡೆಸುತ್ತಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿನ ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.