ನವದೆಹಲಿ : ಉತ್ತರಾಖಂಡದಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಅಧಿಕಾರಕ್ಕೆ ಬಂದರೆ 300 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ. ಉತ್ತರಾಖಂಡವು 2022 ರಲ್ಲಿ ವಿಧಾನಸಭಾ ಚುನಾವಣೆಗೆ ಸಾಕ್ಷಿಯಾಗಲಿದೆ.


COMMERCIAL BREAK
SCROLL TO CONTINUE READING

ಸಧ್ಯ ಸಿಎಂ ಕೇಜ್ರಿವಾಲ್(Arvind Kejriwal) ಡೆಹ್ರಾಡೂನ್‌ ಪ್ರವಾಸದಲ್ಲಿದ್ದು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿದ್ಯುತ್ ವಿಷಯದಲ್ಲಿ, ನಾನು ನಾಲ್ಕು ವಿಷಯಗಳನ್ನು ಖಾತರಿಪಡಿಸುತ್ತೇನೆ. ನಮ್ಮ ಸರ್ಕಾರ ರಚನೆ ಆದ್ರೆ, ನಾವು 300 ಯುನಿಟ್ ಉಚಿತ ವಿದ್ಯುತ್ ನೀಡುತ್ತೇವೆ. ರೈತರಿಗೆ ಉಚಿತ ವಿದ್ಯುತ್ ಸಿಗಲಿದೆ. ಹಳೆಯ ವಿದ್ಯುತ್ ಬಿಲ್‌ಗಳನ್ನು ಮನ್ನಾ ಮಾಡಲಾಗುವುದು. 24 ಗಂಟೆಗಳ ವಿದ್ಯುತ್ ಒದಗಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಆದರೆ ನಾವು ಅದನ್ನು ಮಾಡುತ್ತೇವೆ ಎಂದು ಉತ್ತರಾಖಂಡದ ನಾಗರಿಕರಿಗೆ ನಾಲ್ಕು ಭರವಸೆಗಳನ್ನು ನೀಡಿದ್ದಾರೆ.


EPF Account Update : ನೀವು ನಿವೃತ್ತಿಯ ನಂತರವೂ PF ಖಾತೆಯಲ್ಲಿ ಬಡ್ಡಿ ಗಳಿಸಬಹುದು! ಹೇಗೆ ಎಂದು ಇಲ್ಲಿ ತಿಳಿಯಿರಿ


ಬಿಜೆಪಿ(BJP) ನೇತೃತ್ವದ ಉತ್ತರಾಖಂಡ ಸರ್ಕಾರವು ಅವರ ಸರ್ಕಾರವು ದೆಹಲಿಯಲ್ಲಿ ಮಾಡಿದ ಕಾರ್ಯಗಳನ್ನು ಹೋಲಿಸಿದರೆ, ಕೇಜ್ರಿವಾಲ್ ಅವರು ಉತ್ತರಾಖಂಡದಲ್ಲಿ 70 ವರ್ಷಗಳಿಂದ ಅಪೂರ್ಣವಾಗಿ ಉಳಿದಿರುವ ಕಾರ್ಯಗಳು ದೆಹಲಿಯಲ್ಲಿ ಪೂರ್ಣಗೊಂಡಿವೆ ಎಂದು ಹೇಳಿದರು. ಅವರು ಹೇಳಿದರು, ಉತ್ತರಾಖಂಡನಲ್ಲಿ ಎಎಪಿ ಅಧಿಕಾರಕ್ಕೆ ತರಲು ನಿರ್ಧರಿಸಿದೆ. ನಾವು ಉತ್ತಮ ಶಾಲೆಗಳನ್ನು ನಿರ್ಮಿಸುತ್ತೇವೆ ಮತ್ತು ವಿದ್ಯುತ್, ನೀರು, ಕೃಷಿ ಮತ್ತು ಹೆಚ್ಚಿನವುಗಳಲ್ಲಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.


ಇದನ್ನೂ ಓದಿ : ಮಾನವ ಹಕ್ಕು ಹೋರಾಟಗಾರ ಸ್ಟಾನ್ ಸ್ವಾಮಿ ಅವರನ್ನು ಜೈಲಿನಲ್ಲಿ ಕೊಲೆ ಮಾಡಲಾಗಿದೆ- ಸಂಜಯ್ ರೌತ್


ವಿದ್ಯುತ್‌(Electricity) ಕಡಿತ ಇರುವುದಿಲ್ಲ. ದೀರ್ಘಾವಧಿ ವಿದ್ಯುತ್ ವ್ಯತ್ಯಯ ಇರುವುದಿಲ್ಲ. ನಾವು ದೆಹಲಿಯಲ್ಲಿ ಅಧಿಕಾರಕ್ಕೆ ಬಂದಾಗ 7-8 ಗಂಟೆ ವ್ಯತ್ಯಯ ಸಾಮಾನ್ಯವಾಗಿತ್ತು. ಅದನ್ನು ಸರಿಪಡಿಸಿದ್ದೇವೆ ಎಂದು ಹೇಳಿದರು.


ಇದನ್ನೂ ಓದಿ : Horrific Incident: ತಾಯಿಯನ್ನೇ ಕೊಂದು ಅಂಗಾಂಗ ಬೇಯಿಸಿ ತಿಂದ ಪುತ್ರನಿಗೆ ಜೀವಾವಧಿ ಶಿಕ್ಷೆ!


ಕಳೆದ ವರ್ಷ ದೆಹಲಿ(Delhi)ಯಲ್ಲಿ 200 ಯೂನಿಟ್‌ವರೆಗೂ ವಿದ್ಯುತ್‌ ಬಳಸುವ ಗೃಹ ಸಂಪರ್ಕಗಳಿಗೆ ಶೇ 100ರಷ್ಟು, 201 ರಿಂದ 400 ಯೂನಿಟ್‌ ಬಳಸುವ ವಿದ್ಯುತ್‌ಗೆ ಶೇ 50ರಷ್ಟು ಸಬ್ಸಿಡಿಯನ್ನು ಪ್ರಕಟಿಸಿದ್ದರು.


ಇದನ್ನೂ ಓದಿ : PNB Junior SF Account: ಮಕ್ಕಳಿಗೆಂದೇ ವಿಶೇಷ ಸೌಕರ್ಯ ಆರಂಭಿಸಿದ PNB, ಭವಿಷ್ಯದ ಚಿಂತೆಯಿಂದ ಮುಕ್ತಿ, ಸಿಗಲಿದೆ ದೊಡ್ಡ ಲಾಭ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ