ನವದೆಹಲಿ: Punjab National Bank ಸದ್ಯ ಮಕ್ಕಳಿಗೆಂದೇ ಒಂದು ವಿಶೇಷ ಸೌಲಭ್ಯ ಜಾರಿಗೆ ತಂದಿದೆ. ಈ ಸೌಲಭ್ಯದ ಅಡಿಯಲ್ಲಿ ಬ್ಯಾಂಕ್ ಮಕ್ಕಳಿಗೆಂದೇ ಒಂದು ವಿಶೇಷ ಅಕೌಂಟ್ (Saving Acccount) ಜಾರಿಗೆ ತಂದಿದೆ. ಈ ಅಕೌಂಟ್ ಮೂಲಕ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ. ಇದಕ್ಕೆ ಜ್ಯೂನಿಯರ್ ಎಸ್ ಎಫ್ ಅಕೌಂಟ್ (PNB Junior SF Account) ಎಂದು ಹೆಸರಿಡಲಾಗಿದೆ. PNB ಈ ವಿಶೇಷ ಖಾತೆಯನ್ನು ಕೆಲ ವಿಶೇಷ ಮಕ್ಕಳಿಗೆಂದೇ ಆರಂಭಿಸಿದೆ. ಇದರಿಂದ ನಿಮ್ಮ ಮಗುವಿನಲ್ಲಿ ಚಿಕ್ಕಂದಿನಿಂದಲೇ ಉಳಿತಾಯದ ರೂಢಿ ಬೆಳೆಯಲಿದೆ.
ಒಂದು ಮಗುವಿನ ವಯಸ್ಸು 10ಕ್ಕಿಂತ ಹೆಚ್ಚಾಗಿದ್ದರೂ ಕೂಡ ಆತ ಈ ಖಾತೆಯನ್ನು ತೆರೆಯಬಹುದು. ಈ ಖಾತೆ ತೆರೆಯಲು KYC ಅಗತ್ಯವಿದೆ. ಇದರಲ್ಲಿ ಮಗುವಿನ ಫೋಟೋ ಜೊತೆಗೆ ಐಡೆಂಟಿಟಿ ಪ್ರೂಫ್ ಹಾಗೂ ಅಡ್ರೆಸ್ಸ್ ಪ್ರೂಫ್ ನೀಡಬೇಕು. ಈ ಖಾತೆಗಳ ಮೇಲೆ ಬ್ಯಾಂಕ್ ಮಕ್ಕಳಿಗೆಂದೇ ಹಲವು ಆಕರ್ಷಕ ಸೌಲಭ್ಯಗಳನ್ನು ನೀಡುತ್ತಿದೆ. ಹಾಗಾದರೆ ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ.
PNB Junior SF Account ವಿಶೇಷತೆ
>> ಅಪ್ರಾಪ್ತರು ಈ ಖಾತೆಯನ್ನು ತೆರೆಯಬಹುದಾಗಿದೆ.
>> ಈ ಖಾತೆಯನ್ನು ಮಕ್ಕಳ ಅಧಿಕೃತ ಹಾಗೂ ನೈಸರ್ಗಿಕ ಪೋಷಕರು ತೆರೆಯಬಹುದಾಗಿದೆ.
>> ಇದಲ್ಲದೆ 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಖುದ್ದಾಗಿ ಈ ಖಾತೆಯನ್ನು ತೆರೆಯಬಹುದು.
>> ಇದಕ್ಕಾಗಿ ಕನಿಷ್ಠ ಬ್ಯಾಲೆನ್ಸ್ ಕಾಯುವ ಅವಶ್ಯಕತೆ ಇಲ್ಲ.
>> ಈ ಖಾತೆಯಲ್ಲಿ ಆರಂಭಿಕ ಡಿಪಾಸಿಟ್ ಶೂನ್ಯವಾಗಿರಲಿದೆ.
ಟ್ವೀಟ್ ಮೂಲಕ ಮಾಹಿತಿ ನೀಡಿದ PNB
ಈ ಖಾತೆಯ ಕುರಿತು ಟ್ವೀಟ್ ಮಾಡಿರುವ PNB ಮಾಹಿತಿಯನ್ನು ಹಂಚಿಕೊಂಡಿದೆ. ಪಿಎನ್‌ಬಿ ಜೂನಿಯರ್ ಎಸ್‌ಎಫ್ ಖಾತೆಯೊಂದಿಗೆ ಮಕ್ಕಳು ಚಿಕ್ಕಂದಿನಿಂದಲೇ ಉಳಿತಾಯದ ರೂಢಿ ಮಾಡಿಕೊಳ್ಳಬಹುದು ಎಂದು ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಬರೆದಿದೆ ! ಪಿಎನ್‌ಬಿ ಜೂನಿಯರ್ ಎಸ್‌ಎಫ್ ಖಾತೆಯ ಮೂಲಕ, ನಿಮ್ಮ ಮಕ್ಕಳಿಗೆ ನೀವು ಸುರಕ್ಷಿತ ಭವಿಷ್ಯವನ್ನು ನೀಡಬಹುದು.
ಉಚಿತ NEFT ಸೌಕರ್ಯ
ಈ ಖಾತೆಯಲ್ಲಿ Minimum Quarterly Average Balance ಶೂನ್ಯವಾಗಯಾಲಿದೆ. ಇದಲ್ಲದೆ, ಈ ಖಾತೆಗಳಿಗೆ ಬ್ಯಾಂಕ್ (Bank) ಮಕ್ಕಳಿಗೆ 50 ಚೆಕ್ ಗಳನ್ನು ಹೊಂದಿರುವ ಚೆಕ್ ಬುಕ್ ನೀಡಲಿದೆ. ಈ ಚೆಕ್ ಬುಕ್ ಒಂದು ವರ್ಷದ ಅವಧಿಗಾಗಿ ಇರಲಿದೆ. ಜೊತೆಗೆ ಈ ಖಾತೆಯ ಮೂಲಕ ಒಂದು ವೇಳೆ ನೀವು NEFT ವಹಿವಾಟು ನಡೆಸಿದರೆ, ಪ್ರತಿ ನಿತ್ಯ 10 ಸಾವಿರ ರೂ.ಗಳವರೆಗಿನ ವಹಿವಾಟು ಫ್ರೀ ಆಗಿರಲಿದೆ.
ಇದನ್ನೂ ಓದಿ- PM Kisan: ಈ ತಪ್ಪುಗಳಾಗಿದ್ದರೆ ನಿಂತು ಬಿಡಬಹುದು 9 ನೇ ಕಂತು, ಈ ರೀತಿ ಸರಿಪಡಿಸಿಕೊಳ್ಳಿ
ಈ ಖಾತೆಗೆ Rupay ಕಾರ್ಡ್ ಸಿಗುತ್ತದೆ
ಇದಲ್ಲದೆ ಸ್ಕೂಲ್ ಅಥವಾ ಕಾಲೇಜುಗಳಿಗೆ ಡಿಮಾಂಡ್ ಡ್ರಾಫ್ಟ್ ಉಚಿತವಾಗಿ ಸಿಗಲಿದೆ. Rupay ATM Card ಗಳ ಮೇಲೆ ಗ್ರಾಹಕರಿಗೆ ನಿತ್ಯ 5 ಸಾವಿರ ಹಣ ಹಿಂಪಡೆಯುವ ಸೌಕರ್ಯ ಸಿಗುತ್ತದೆ.
ಇದನ್ನೂ ಓದಿ-Gold-Silver Rate : ಮಹಿಳೆಯೆರೆ ಗಮನಿಸಿ : ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ಕಿಸಿ ಖಾತೆಯ ಕುರಿತು ಮಾಹಿತಿ ಪಡೆಯಿರಿ
ಇದಲ್ಲದೆ ಈ ಖಾತೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಬೇಕು ಎಂದಾದಲ್ಲಿ https://www.pnbindia.in/pnb-junior-sf-account.html ಲಿಂಕ್ ಮೇಲೆ ಕ್ಲಿಕ್ಕಿಸಬಹುದಾಗಿದೆ.
ಇದನ್ನೂ ಓದಿ-Petrol-Diesel Price : ವಾಹನ ಸವಾರರೇ ಗಮನಿಸಿ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ