Corona in Kids: ಮಕ್ಕಳಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಳ, ತಜ್ಞರಿಂದ ಎಚ್ಚರಿಕೆ ಸಂದೇಶ..!
ಮಾಹಿತಿಯ ಪ್ರಕಾರ ಒಟ್ಟು ಸಕ್ರಿಯ ಕೋವಿಡ್ -19 ಪ್ರಕರಣಗಳಲ್ಲಿ ಮಕ್ಕಳ ಪಾಲು ಈ ವರ್ಷದ ಮಾರ್ಚ್ನಲ್ಲಿ ಶೇ. 2.80 ರಿಂದ ಆಗಸ್ಟ್ ನಲ್ಲಿ ಶೇ.7.04ಕ್ಕೆ ಏರಿಕೆ ಕಂಡಿದೆ.
ನವದೆಹಲಿ: ದೇಶದಾದ್ಯಂತ ಕೋವಿಡ್-19(COVID-19) ಪ್ರಕರಣಗಳು ಇಳಿಮುಖ ಕಾಣುತ್ತಿವೆ. ಆದರೆ ಮಹಾಮಾರಿ ವೈರಸ್ ಗೆ ಪ್ರತಿದಿನವೂ ಅನೇಕರು ಬಲಿಯಾಗುತ್ತಲೇ ಇದ್ದಾರೆ. ಕೇರಳ, ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಕೊರೊನಾ 3ನೇ ಅಲೆಯ ಭೀತಿಯೂ ಹೆಚ್ಚಾಗಿದೆ. ಹಬ್ಬ-ಹರಿದಿನಗಳಲ್ಲಿ ಜನದಟ್ಟಣೆ ಹೆಚ್ಚಾಗದಂತೆ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಈಗಾಗಲೇ ಸೂಚಿಸಿದೆ.
ದೇಶದಾದ್ಯಂತ ಕೋವಿಡ್ ಪ್ರಕರಣಗಳ ಇಳಿಕೆಯ ಮಧ್ಯೆಯೇ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕೊರೊನಾ ಪಾಸಿಟಿವ್(Corona in Kids) ಸ್ಥಿರವಾದ ಹೆಚ್ಚಳ ಕಂಡಿದೆ. ರಾಷ್ಟ್ರದ ಕೋವಿಡ್-19 ತುರ್ತು ಕಾರ್ಯತಂತ್ರವನ್ನು ರೂಪಿಸುವ ಕೆಲಸ ನಿರ್ವಹಿಸುತ್ತಿರುವ ಎಂಪವರ್ಡ್ ಗ್ರೂಪ್ -1(Empowered Group-1)ನಲ್ಲಿ ಲಭ್ಯವಿರುವ ಮಾಹಿತಿ ಈ ಬಗ್ಗೆ ಹೇಳಿದೆ. ಇದು ಪೋಷಕರಲ್ಲಿ ಹೆಚ್ಚಿನ ಆಂತಕಕ್ಕೆ ಕಾರಣವಾಗಿದೆ.
ಮಾಹಿತಿಯ ಪ್ರಕಾರ, ಒಟ್ಟು ಸಕ್ರಿಯ ಕೋವಿಡ್ -19(COVID-19)ಪ್ರಕರಣಗಳಲ್ಲಿ ಮಕ್ಕಳ ಪಾಲು ಈ ವರ್ಷದ ಮಾರ್ಚ್‌ನಲ್ಲಿಶೇ. 2.80 ರಿಂದ ಆಗಸ್ಟ್ ನಲ್ಲಿ ಶೇ.7.04ಕ್ಕೆ ಏರಿಕೆ ಕಂಡಿದೆ. ಇದರರ್ಥ ಪ್ರತಿ 100 ಸಕ್ರಿಯ ಕೋವಿಡ್ ಪ್ರಕರಣಗಳಲ್ಲಿ ಸುಮಾರು 7 ಮಕ್ಕಳು ಸೋಂಕಿಗೆ ತುತ್ತಾಗುತ್ತಿದ್ದಾರೆ.
ಇದನ್ನೂ ಓದಿ: Ration Card: ಮನೆಯಲ್ಲಿಯೇ ಕುಳಿತು ನಿಮ್ಮ ಪಡಿತರ ಚೀಟಿಯಲ್ಲಿ ಮೊಬೈಲ್ ಸಂಖ್ಯೆಯನ್ನು ಈ ರೀತಿ ಬದಲಾಯಿಸಿ
ವಯಸ್ಕರು ವೈರಸ್‌ಗೆ ತುತ್ತಾಗುವ ಸಾಧ್ಯತೆ ಕಡಿಮೆಯಾಗಿರುವುದರಿಂದ ಮಕ್ಕಳಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬುದು ಸರಿಯಲ್ಲವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನೀತಿ ಆಯೋಗ(NITI Aayog)ದ ಸದಸ್ಯ ವಿ.ಕೆ.ಪಾಲ್ ನೇತೃತ್ವದ EG-1ರ ಸಭೆಯಲ್ಲಿ ಈ ಡೇಟಾವನ್ನು ಪ್ರಸ್ತುತಪಡಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೇರಿದಂತೆ ವಿವಿಧ ಸಚಿವಾಲಯಗಳ ಅಧಿಕಾರಿಗಳು ಈ ಸಭೆಯಲ್ಲಿ ಹಾಜರಿದ್ದರು.
18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಆಗಸ್ಟ್ ನಲ್ಲಿ ಮಕ್ಕಳಲ್ಲಿ ದಾಖಲಾದ ಕೋವಿಡ್ -19 ಪ್ರಕರಣಗಳ ಬಗ್ಗೆ ನೋಡುವುದಾದರೆ ಮಿಜೋರಾಂನಲ್ಲಿ ಅತಿ ಹೆಚ್ಚು (ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇ.16.48ರಷ್ಟು) ಮತ್ತು ದೆಹಲಿ(New Delhi)ಯಲ್ಲಿ (ಶೇ.2.25) ಕಡಿಮೆ ಪ್ರಕರಣಗಳು ದಾಖಲಾಗಿವೆ. 8 ರಾಜ್ಯಗಳಲ್ಲಿ ಮಿಜೋರಾಂ (ಶೇ16.48), ಮೇಘಾಲಯ (ಶೇ.9.35), ಮಣಿಪುರ (ಶೇ.8.74), ಕೇರಳ (ಶೇ.8.62), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (ಶೇ.8.2), ಸಿಕ್ಕಿಂ (ಶೇ.8.02), ದಾದ್ರಾ ಮತ್ತು ನಗರ ಹವೇಲಿ (ಶೇ.7.69) ಮತ್ತು ಅರುಣಾಚಲ ಪ್ರದೇಶ (ಶೇ.7.38)ದಲ್ಲಿ ರಾಷ್ಟ್ರೀಯ ಸರಾಸರಿ ಶೇ.7.04 ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ಆಗಸ್ಟ್ ನಲ್ಲಿ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಪ್ರಮಾಣದಲ್ಲಿ ಕೋವಿಡ್ -19 ಪ್ರಕರಣಗಳು ದಾಖಲಾಗಿರುವ ರಾಜ್ಯಗಳ ಪೈಕಿ ಪುದುಚೇರಿ (ಶೇ.6.95), ಗೋವಾ (ಶೇ.6.86), ನಾಗಾಲ್ಯಾಂಡ್ (ಶೇ.5.48), ಅಸ್ಸಾಂ (ಶೇ.5.04), ಕರ್ನಾಟಕ(Karnataka) (ಶೇ.4.59), ಆಂಧ್ರ ಪ್ರದೇಶ (ಶೇ.4.53), ಒಡಿಶಾ (ಶೇ.4.18), ಮಹಾರಾಷ್ಟ್ರ (ಶೇ.4.08), ತ್ರಿಪುರ (ಶೇ.3.54) ಮತ್ತು ದೆಹಲಿ (ಶೇ.2.25) ಇವೆ.
ಇದನ್ನೂ ಓದಿ: Samsung: 5 ಕ್ಯಾಮೆರಾಗಳ ಗದರ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್, ಬಲವಾದ ಬ್ಯಾಟರಿಯೊಂದಿಗೆ ಸಿಗಲಿದೆ ಈ ವೈಶಿಷ್ಟ್ಯ
ಮಕ್ಕಳಲ್ಲಿ ದಾಖಲಾಗುತ್ತಿರುವ ಕೋವಿಡ್-19 ಪ್ರಕರಣಗಳು ಮೊದಲಗಿಂತಲೂ ಹೆಚ್ಚಾಗಿವೆ. ಹೆಚ್ಚಿನ ಜಾಗೃತಿ ಮತ್ತು ಜಾಗರೂಕತೆ ಹಾಗೂ ದುರ್ಬಲತೆಯ ಪ್ರಮಾಣಾನುಗುಣವಾಗಿ ಮಕ್ಕಳಿಗೆ ಸೋಂಕು ವ್ಯಾಪಿಸುತ್ತಿರಬಹುದು ಎಂದು ಅಂದಾಜಿಸಲಾಗಿದೆ. ದೇಶದ ಜನರು ಕಟ್ಟುನಿಟ್ಟಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಕ್ಕಳ ಆರೋಗ್ಯದ ಮೇಲೆ ನಿಗಾವಹಿಸಬೇಕೆಂದು ತಜ್ಞರು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.