Covid-19 Vaccine For Under 12 Years Old Children: 5 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೂ ಕರೋನಾ ಲಸಿಕೆ

Covid-19 Vaccine For Under 12 Years Old Children: ಯುಎಸ್ನಲ್ಲಿ ಹೆಚ್ಚುತ್ತಿರುವ ಡೆಲ್ಟಾ ರೂಪಾಂತರ ಪ್ರಕರಣಗಳ ನಡುವೆ,  12 ವರ್ಷದೊಳಗಿನ ಮಕ್ಕಳಿಗೆ ಮುಂದಿನ ತಿಂಗಳ ಅಂತ್ಯದ ವೇಳೆಗೆ ಕೋವಿಡ್ -19 ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ.   

Written by - Yashaswini V | Last Updated : Sep 13, 2021, 01:50 PM IST
  • 12 ವರ್ಷದೊಳಗಿನ ಮಕ್ಕಳಿಗೂ ಕರೋನಾ ಲಸಿಕೆ ಲಭ್ಯ
  • ಅಕ್ಟೋಬರ್ ಅಂತ್ಯದ ವೇಳೆಗೆ ಐದರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್-19 ಲಸಿಕೆಗಳು (Covid-19 Vaccine) ಲಭ್ಯವಿರಬಹುದು
  • ಸದ್ಯ 12 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಲಸಿಕೆಗಳು ಲಭ್ಯವಿದೆ
Covid-19 Vaccine For Under 12 Years Old Children: 5 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೂ ಕರೋನಾ ಲಸಿಕೆ title=
Covid-19 Vaccine For Under 12 Years Old Children

Covid-19 Vaccine For Under 12 Years Old Children: ಇಡೀ ಜಗತ್ತನೇ ತನ್ನ ಕಪಿಮುಷ್ಟಿಯಲ್ಲಿ ಹಿಡಿದಿರುವ ಕರೋನಾ ವಿರುದ್ಧದ ಹೋರಾಟದಲ್ಲಿ ಇದೀಗ 12 ವರ್ಷದೊಳಗಿನ ಮಕ್ಕಳಿಗೂ ಲಸಿಕೆ ಲಭ್ಯವಾಗುತ್ತಿದೆ. ಯುಎಸ್ನಲ್ಲಿ ಹೆಚ್ಚುತ್ತಿರುವ ಡೆಲ್ಟಾ ರೂಪಾಂತರ ಪ್ರಕರಣಗಳ ನಡುವೆ,  12 ವರ್ಷದೊಳಗಿನ ಮಕ್ಕಳಿಗೆ ಮುಂದಿನ ತಿಂಗಳ ಅಂತ್ಯದ ವೇಳೆಗೆ ಕೋವಿಡ್ -19 ಲಸಿಕೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

'ನ್ಯೂಯಾರ್ಕ್ ಟೈಮ್ಸ್' ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯು ಇಬ್ಬರು ಆರೋಗ್ಯ ತಜ್ಞರನ್ನು ಉಲ್ಲೇಖಿಸಿ, ಅಕ್ಟೋಬರ್ ಅಂತ್ಯದ ವೇಳೆಗೆ ಐದರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್-19 ಲಸಿಕೆಗಳು (Covid-19 Vaccine) ಲಭ್ಯವಿರಬಹುದು. ಸದ್ಯ 12 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಲಸಿಕೆಗಳು ಲಭ್ಯವಿರುವುದರಿಂದ ಇದು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಪರಿಹಾರ ಸಿಗಬಹುದು ಎಂದು ತಿಳಿಸಿದೆ.

ಇದನ್ನೂ ಓದಿ- Narendra Modi: ಟೀಂ ಇಂಡಿಯಾಗೆ ವಿಭಿನ್ನ ರೀತಿಯಲ್ಲಿ ಅಭಿನಂದಿಸಿದ ಪ್ರಧಾನಿ ಮೋದಿ

ಆಹಾರ ಮತ್ತು ಔಷಧ ಆಡಳಿತದ ಮಾಜಿ ಆಯುಕ್ತರು ಮತ್ತು ಫೈಜರ್ ಮಂಡಳಿಯ ಸದಸ್ಯರಾದ ಸ್ಕಾಟ್ ಗಾಟ್ಲೀಬ್ ಅವರ ಹೇಳಿಕೆಯನ್ನು ಈ ಸುದ್ದಿಯಲ್ಲಿ ಉಲ್ಲೇಖಿಸಿದ್ದು, ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಲಸಿಕೆಗಳನ್ನು (Corona Vaccine For Kids) ಅನುಮೋದಿಸಲು ಕ್ಲಿನಿಕಲ್ ಡೇಟಾವನ್ನು ಎಚ್ಚರಿಕೆಯಿಂದ ಮತ್ತು ಶೀಘ್ರವಾಗಿ ಪರಿಶೀಲಿಸಬೇಕಾಗುತ್ತದೆ ಎಂದಿದ್ದಾರೆ.

ಗಾಟ್ಲೀಬ್ ಸಿಬಿಎಸ್ ನ "ಫೇಸ್ ದಿ ನೇಷನ್" ನಲ್ಲಿ ಫೈಜರ್ ಸಂಗ್ರಹಿಸಿದ ಡೇಟಾವನ್ನು ನಾನು ನಂಬುತ್ತೇನೆ. ಅತ್ಯುತ್ತಮ ಸನ್ನಿವೇಶದಲ್ಲಿ, ಅಕ್ಟೋಬರ್ 31 ರೊಳಗೆ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ  ಫಿಜರ್ ಲಸಿಕೆಗಳು ಸಿದ್ಧವಾಗುತ್ತವೆ ಎಂದು ಹೇಳಿದರು.  

ಟೆಕ್ಸಾಸ್ ಮಕ್ಕಳ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ನ ಹಂಗಾಮಿ ಮುಖ್ಯಸ್ಥರಾದ ಡಾ. ಜೇಮ್ಸ್ ವರ್ಸಲೋವಿಕ್ ಅವರು, ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಲಸಿಕೆಗಳನ್ನು ಅಕ್ಟೋಬರ್ ವೇಳೆಗೆ ಅನುಮೋದಿಸುವ ಸಾಧ್ಯತೆಯ ಬಗ್ಗೆ ಗಾಟ್ಲೀಬ್ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ- Covishield Side Effects:ಕೊವಿಶೀಲ್ದ್ ಲಸಿಕೆಯ ನಾಲ್ಕು ಹೊಸ ಅಡ್ಡ ಪರಿಣಾಮಗಳು..! ಈ ಲಕ್ಷಣಗಳು ಕಂಡು ಬಂದರೆ ಕಡೆಗಣಿಸಬೇಡಿ

"ನಾವು ಇನ್ನೂ ಕೆಟ್ಟ ಸ್ಥಿತಿಯಲ್ಲಿದ್ದೇವೆ" ಮತ್ತು "ಇನ್ನೊಂದು ವಿಪರೀತ" ವನ್ನು ನೋಡಬಹುದು ಎಂದು ವೆರ್ಸಲೋವಿಕ್ ಡೆಲ್ಟಾ ವೈರಸ್ ರೂಪಾಂತರದ ಬಗ್ಗೆ ಹೇಳಿದರು.

ಸಾಂಕ್ರಾಮಿಕ ರೋಗದಿಂದ ವಿಶ್ವದಲ್ಲೇ ಅತಿ ಹೆಚ್ಚು ಹಾನಿಗೊಳಗಾದ ದೇಶ ಯುಎಸ್. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೊನಾವೈರಸ್ ಮಾಹಿತಿಯ ಪ್ರಕಾರ, ದೇಶವು ಒಟ್ಟು 40,955,201 ಕೋವಿಡ್ -19 ಪ್ರಕರಣಗಳು ಮತ್ತು 659,970 ಸಾವುಗಳನ್ನು ದಾಖಲಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News