ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿಭಾವಂತರಿಗೆ ಸ್ಕೂಟರ್: ಅಸ್ಸಾಂ ಸರ್ಕಾರದ ಘೋಷಣೆ
Free scooters and bicycles for students: ಸರ್ಕಾರಿ ಮತ್ತು ಪ್ರಾಂತೀಯ ಶಾಲೆಗಳಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ 3.78 ಲಕ್ಷ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆಗೆ 167 ಕೋಟಿ ರೂ. ನಿಗದಿಪಡಿಸಲಾಗಿದೆ.
ಅಸ್ಸಾಂ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿಎಂ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಅಸ್ಸಾಂ ಸರ್ಕಾರವು ಉಚಿತ ಸ್ಕೂಟರ್ ಮತ್ತು ಬೈಸಿಕಲ್‍ಗಳನ್ನು ನೀಡಲು ನಿರ್ಧರಿಸಿದೆ. ಜುಲೈ 5ರಂದು ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಹೈಯರ್ ಸೆಕೆಂಡರಿ ಪರೀಕ್ಷೆಗಳಲ್ಲಿ ಮೆರಿಟ್ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಟರ್ ನೀಡಲಾಗುವುದು ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಹೈಯರ್ ಸೆಕೆಂಡರಿ ಪರೀಕ್ಷೆಗಳಲ್ಲಿ ಶೇ.60 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ಹುಡುಗಿಯರು ಮತ್ತು ಶೇ75 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ಹುಡುಗರು ಉಚಿತ ಸ್ಕೂಟರ್‌ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಉಪಕ್ರಮವು ಶೈಕ್ಷಣಿಕ ಸಾಧನೆಯನ್ನು ಉತ್ತೇಜಿಸಲು ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಉತ್ತಮ ಪ್ರವೇಶ ಒದಗಿಸುವ ಗುರಿ ಹೊಂದಿದೆ ಎಂದು ಅಸ್ಸಾಂ ಪ್ರವಾಸೋದ್ಯಮ ಸಚಿವ ಜಯಂತ್ ಮಲ್ಲಾ ಬರೂಹ್ ತಿಳಿಸಿದ್ದಾರೆ.
ಇದನ್ನೂ ಓದಿ: ಯುಸಿಸಿಗೆ ಮುಸ್ಲಿಂ ಬೋರ್ಡ್ ವಿರೋಧ : ಧಾರ್ಮಿಕ ಮೂಲಭೂತ ಹಕ್ಕು ಪ್ರಜಾಪ್ರಭುತ್ವದ ಭಾಗ - AIMPLB
ಹೆಚ್ಚುವರಿಯಾಗಿ ಸರ್ಕಾರಿ ಮತ್ತು ಪ್ರಾಂತೀಯ ಶಾಲೆಗಳಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ 3.78 ಲಕ್ಷ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆಗೆ 167 ಕೋಟಿ ರೂ. ನಿಗದಿಪಡಿಸಲಾಗಿದೆ. ಈ ಕ್ರಮವು ದೈಹಿಕ ಚಟುವಟಿಕೆಯನ್ನು ಉತ್ತೇಜಿಸಲು ಮತ್ತು ವಿದ್ಯಾರ್ಥಿಗಳಿಗೆ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವವರಿಗೆ ಸುಗಮ ಸಾರಿಗೆ ಒದಗಿಸುವ ಉದ್ದೇಶ ಹೊಂದಿದೆ. ಇದಲ್ಲದೇ ಸೆಪ್ಟೆಂಬರ್‌ನಿಂದ ತಿಂಗಳಿಗೆ 1250 ರೂ.ನಂತೆ 7 ಲಕ್ಷ ಜನರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ.
ಅಸ್ಸಾಂ ರಾಜ್ಯದಲ್ಲಿ ರಾಷ್ಟ್ರೀಯ ಕ್ರೀಡಾಕೂಟ ಆಯೋಜಿಸಲು ಕ್ರಮಕೈಗೊಳ್ಳುವಂತೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆಗೆ ಮನವಿ ಮಾಡಲಾಗಿದೆ. ಅಸ್ಸಾಂ ರಾಜ್ಯದ ಕೃಷಿ ವಿಶ್ವವಿದ್ಯಾಲಯದಲ್ಲಿ ಶೇ.27ರಷ್ಟು ಸೀಟುಗಳನ್ನು ಒಬಿಸಿಗೆ ಮೀಸಲಿಡಲು ನಿರ್ಧರಿಸಲಾಗಿದೆ. ಅಸ್ಸಾಂನಲ್ಲಿ ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಿಎಂ ಹಿಮಂತ ಬಿಸ್ವ ಶರ್ಮಾ ಇದೇ ವೇಳೆ ಹೇಳಿದ್ದಾರೆ.
ಇದನ್ನೂ ಓದಿ: ಎರಡು ತಿಂಗಳ ಹಿಂಸಾಚಾರದ ನಂತರ ಮಣಿಪುರದಲ್ಲಿ ಸರ್ಕಾರಿ ಶಾಲೆಗಳು ಪುನರಾರಂಭ
ವಿದ್ಯಾರ್ಥಿ ಕೇಂದ್ರಿತ ಉಪಕ್ರಮಗಳ ಜೊತೆಗೆ ಕ್ಯಾಬಿನೆಟ್ ಹಲವಾರು ಇತರ ಪ್ರಮುಖ ನಿರ್ಧಾರಗಳನ್ನು ಸಹ ಅನುಮೋದಿಸಿತು. ಅಸ್ಸಾಂ ಕೃಷಿ ವಿಶ್ವವಿದ್ಯಾಲಯದಡಿ ವೃತ್ತಿಪರ ಕೋರ್ಸ್‌ಗಳಲ್ಲಿ ಇತರ ಹಿಂದುಳಿದ ವರ್ಗಗಳು (OBCs) ಮತ್ತು ಹೆಚ್ಚಿನ ಇತರ ಹಿಂದುಳಿದ ವರ್ಗಗಳ (MOBCs) ಸೀಟುಗಳ ಮೀಸಲಾತಿಯನ್ನು ಶೇ.15 ರಿಂದ ಶೇ.27ರಷ್ಟು ಹೆಚ್ಚಿಸಲಾಗುವುದು. ಇದಲ್ಲದೆ ಶೇ.27ರಷ್ಟು OBC/MOBC ಮೀಸಲಾತಿಯೊಳಗಿನ ಸೀಟುಗಳನ್ನು ವಿವಿಧ ನರ್ಸಿಂಗ್ ತರಬೇತಿ ಕೋರ್ಸ್‌ಗಳಲ್ಲಿ ತೈ ಅಹೋಮ್, ಚುಟಿಯಾ, ಮೋರಾನ್, ಮಾಟಕ್, ಕೋಚ್ ರಾಜ್‌ಬೊಂಗ್‌ಶಿ ಮತ್ತು ಟೀ ಬುಡಕಟ್ಟು ಸೇರಿದಂತೆ 6 ಸಮುದಾಯಗಳಿಗೆ ಮೀಸಲಿಡಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.