ನವದೆಹಲಿ: ಮಂಗಳವಾರದದಂದು ಪಂಚರಾಜ್ಯಗಳ ಚುನಾವಣೆ ಫಲಿತಾಂಶ ನಾಳೆ ಹೊರಬಿಳಲಿದೆ.ಮುಂಬರುವ 2019 ರ ಲೋಕಸಭಾ ಚುನಾವಣೆ ಸೆಮಿಫೈನಲ್ ಎಂದೇ ಪರಿಗಣಿರುವ ಈ ಚುನಾವಣೆ ಫಲಿತಾಂಶ ಎಲ್ಲರಲ್ಲಿಯೂ ಭಾರಿ ಕೂತೂಹಲ ಕೆರಳಿಸಿದೆ.


COMMERCIAL BREAK
SCROLL TO CONTINUE READING

ಈಗಾಗಲೇ ನಾಳಿನ ಮತ ಎಣಿಕೆ ಪ್ರಕ್ರಿಯೆಗೆ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ನಾಳೆ ಹೊರಬಿಳಲಿರುವ ಛತ್ತೀಸ್ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕಾಗಿ ಈಗ ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳು ಎದುರು ನೋಡುತ್ತಿವೆ.


ಚತ್ತೀಸ್ ಘಡ್ ದಲ್ಲಿ ಆಡಳಿತ ಪಕ್ಷ ಬಿಜೆಪಿ 90 ಸದಸ್ಯರ ವಿಧಾನಸಭೆಯಲ್ಲಿ 49 ಸದಸ್ಯರನ್ನು ಒಳಗೊಂಡಿದೆ. ಕಾಂಗ್ರೆಸ್ 39 ಸದಸ್ಯರು ಹಾಗೂ ಇತರು 2 ಸದಸ್ಯರಿದ್ದಾರೆ. ನಾಳೆ ಒಟ್ಟು 1269 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇಲ್ಲಿ ಮಾಯಾವತಿಯ ಬಿಎಸ್ಪಿ ಪಕ್ಷವು ಅಜಿತ್ ಜೋಗಿಯವರ ಜನತಾ ಕಾಂಗ್ರೆಸ್ ಪಕ್ಷದ ಮೈತ್ರಿ ಮಾಡಿಕೊಳ್ಳುವುದರ ಮೂಲಕ ಈಗ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದೆ.


ಮಧ್ಯಪ್ರದೇಶದಲ್ಲಿ ಇಡಿ ಮತ ಎಣಿಕೆ ಪ್ರಕ್ರಿಯೆಯನ್ನು ಚಿತ್ರೀಕರಣಕ್ಕೆ ಒಳಪಡಿಸಲಾಗುವುದು ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ತಿಂಗಳು 28 ರಂದು ಶೇ 75 ರಷ್ಟು ಮತದಾನ ಇಲ್ಲಿ ನಡೆದಿದೆ.


ಕ್ಷಣ ಕ್ಷಣದ ಚುನಾವಣಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ.. 


ರಾಜಸ್ತಾನದಲ್ಲಿ ಒಟ್ಟು 200 ಕ್ಷೇತ್ರಗಳಲ್ಲಿ 199 ಕ್ಷೇತ್ರಗಳಿಗಾಗಿ ಮತ ಎಣಿಕೆ ನಡೆಯಲಿದೆ.ಮತ ಎಣಿಕೆ ಪ್ರಕ್ರಿಯೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮುಖ್ಯ ಚುನಾವಣಾ ಅಧಿಕಾರಿ ಆನಂದ್ ಕುಮಾರ್ ಮತ ಎಣಿಕೆ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.


ಇನ್ನು ತೆಲಂಗಾಣದಲ್ಲಿ ಒಟ್ಟು 43 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಅವುಗಳಲ್ಲಿ ಬಹುತೇಕ ಕೇಂದ್ರಗಳು ಜಿಲ್ಲಾ ಕೇಂದ್ರಗಳಲ್ಲಿವೆ ಇವಿಎಮ್ ಗಳನ್ನೂ ಮೂರು ವರ್ತುಲದ ಭದ್ರತೆಯಲ್ಲಿ ಇಡಲಾಗಿದೆ. ಶುಕ್ರವಾರದಂದು ನಡೆದ ಚುನಾವಣೆಯಲ್ಲಿ ಒಟ್ಟು 73.2 ರಷ್ಟು ಮತದಾನವಾಗಿತ್ತು. ಇಲ್ಲಿ ಮಹಾಕುಟುಮಿ ಮತ್ತು ಕೆಸಿಆರ್ ನೇತೃತ್ವದ ಟಿಆರ್ಎಸ್ ನಡುವೆ ಪೈಪೋಟಿ ನಡೆಯಲಿದೆ. 


ಮಿಜೋರಾಂನಲ್ಲಿ ಒಟ್ಟು 40 ಸ್ಥಾನಗಳಿಗಾಗಿ ನವಂಬರ್ 28 ರಂದು ಚುನಾವಣೆ ನಡೆದಿತ್ತು ಈಗ 13 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ.