ಮುಂಬೈ: ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಡ್ ದಲ್ಲಿನ ವಿಧಾನಸಭಾ ಫಲಿತಾಂಶ ಬದಲಾವಣೆಗೆ ಮುನ್ನುಡಿ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.ಇದು ಬಿಜೆಪಿ ನೇತೃತ್ವದ ಸರಕಾರದ ನೀತಿಗಳನ್ನು ಜನರು ನಿರಾಕರಿಸಿದ್ದಾರೆ ಎಂದು ಹೇಳಿದರು.


COMMERCIAL BREAK
SCROLL TO CONTINUE READING

ಬುಧುವಾರದಂದು 78 ವಯಸ್ಸಿಗೆ ಪದಾರ್ಪಣೆ ಮಾಡಿದ ಪವಾರ್ ತಮ್ಮ ಪಕ್ಷವು ಕಾಂಗ್ರೆಸ್ ನ್ನು ಬೆಂಬಲಿಸುತ್ತದೆ. ಅದೇ ರೀತಿಯಾಗಿ ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿ ರಾಹುಲ್ ಗಾಂಧಿಯವರಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು. ಈಗ ರಾಜಸ್ತಾನ್, ಮಧ್ಯಪ್ರದೇಶ, ಛತ್ತೀಸ್ ಗಡ್ ನಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವನ್ನು ಸಾಧಿಸಿದೆ ಈ ಹಿನ್ನಲೆಯಲ್ಲಿ ಹೇಳಿಕೆ ಅವರು ನೀಡಿದ್ದಾರೆ


ಜನರು ಮೋದಿ ಸರಕಾರದಿಂದ ನಿರಾಶೆ ಅನುಭವಿಸುತ್ತಿದ್ದಾರೆ.ವಿಧಾನಸಭಾ ಚುನಾವಣೆ ಫಲಿತಾಂಶಗಳು ಬದಲಾವಣೆಯ ಮುನ್ನುಡಿ ಬರೆದಿವೆ.ಮೋದಿಯ ರೈತರ ವಿರೋಧಿ ವ್ಯಾಪಾರಿ ವಿರೋಧಿ ನೀತಿಗಳನ್ನು ಜನರು ತಿರಸ್ಕರಿಸಿದ್ದಾರೆ ಎಂದು ಪವಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.ಇದೇ ವೇಳೆ ಶಿವಸೇನೆಯ ಪಕ್ಷವು ಪದೆ ಪದೆ ಬಿಜೆಪಿ ಪಕ್ಷವನ್ನು ಟಿಕಿಸಿದರೂ ಚುನಾವಣೆ ಸಮಯದಲ್ಲಿ ಅವರು ಒಟ್ಟಿಗೆ ಸೇರಬಹುದುದೆಂದು ಅಭಿಪ್ರಾಯಪಟ್ಟರು.