ಅಲಿಗಢ : ಮದುವೆಯನ್ನು ಏಳು ಜನುಮಗಳ ಸಂಬಂಧ  ಎಂದೆಲ್ಲಾ ಬಣ್ಣಿಸಲಾಗುತ್ತದೆ.  ಅನೇಕ ಕನಸುಗಳನ್ನು ಹೊತ್ತು ಹೆಣ್ಣು ಗಂಡು ತಮ್ಮ ಹೊಸ ಜೀವನಕ್ಕೆ (wedding news) ಕಾಲಿಡುತ್ತಾರೆ. ಮದುವೆ, ಮದುವೆ ನಂತರದ ಜೀವನ ಹಾಗಿರಬೇಕು, ಹೀಗಿರಬೇಕು ಎಂದು ಕಾಣುವ ಕನಸಿಗೆ ಲೆಕ್ಕವಿರುವುದಿಲ್ಲ. ಹಾಗಿರುವಾಗ ಮದುವೆಗೆ ಸಣ್ಣ ಅಡೆತಡೆಗಳು ಎದುರಾದರೂ ತಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಮನಸ್ಸಿಗೆ ಆಗುವ ನೋವು, ಕಸಿವಿಸಿ ಅಷ್ಟಿಷ್ಟಲ್ಲ. ಆದರೆ ಅಲಿಗಢದಲ್ಲಿ ಇದಕ್ಕೆ ವಿರುದ್ದವಾದ ಘಟನೆಯೊಂದು ನಡೆದಿದೆ. 


COMMERCIAL BREAK
SCROLL TO CONTINUE READING

ಇಲ್ಲಿ ವಧು-ವರರಿಬ್ಬರೂ, ಸಪ್ತಪದಿ ತುಳಿದಿದ್ದಾಗಿದೆ, ಮಾಂಗಲ್ಯ ಧಾರಣೆಯಾಗಿದೆ, ಇನ್ನೇನು ಮದುವೆ (wedding news) ಸಮಾರಂಭ ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ವಧು ತನಗೆ ಈ ಮದುವೆ ಬೇಡವೇ ಬೇಡ ಎಂದು ಹಠ ಮಾಡಲು ಶುರು ಮಾಡಿದ್ದಾಳೆ. ಯಾರು ಎಷ್ಟೇ ಹೇಳಿದರು ಸಮಾಧಾನವಾಗಲೇ ಇಲ್ಲ. ವಧುವಿನ (bride) ಈ ನಿರ್ಧಾರಕ್ಕೆ ಕಾರಣ ಇಲ್ಲ ಎಂದಲ್ಲ. ಕನ್ಯಾದಾನದ ವೇಳೆ ವಧು ವರನ ಕೈ ಬೆರಳುಗಳನ್ನು ಗಮನಿಸಿದ್ದಾಳೆ. ಈ ವೇಳೆ ವರನ (bridegroom) ಕೈಯಲ್ಲಿ ಮೂರು ಬೆರಳುಗಳಿಲ್ಲ ಎನ್ನುವ ವಿಚಾರ ಗೊತ್ತಾಗಿದೆ. 


ಇದನ್ನೂ ಓದಿ : ಅಬ್ಬಾ ..! 99,999 ರೂಪಾಯಿಗೆ ಮಾರಾಟವಾಯಿತು ಒಂದು ಕಿಲೋ ಚಹಾ ಪುಡಿ..!


ವರನ ಕೈಯಲ್ಲಿ ಎರಡೇ ಬೆರಳುಗಳಿರುವುದು ತಮಗೆ ಗೊತ್ತಾಗುತ್ತಿದ್ದಂತೆ, ವಧು ಕಿರುಚಾಟ ಆರಂಭಿಸಿದ್ದಾಳೆ.  ವಿಷಯ ಎಲ್ಲರಿಗೂ  ತಿಳಿದ ನಂತರ, ಎರಡೂ ಕಡೆಯವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದಾದ ನಂತರ ಪ್ರಕರಣ ಪೋಲಿಸ್ ಸ್ಟೇಷನ್ (police station) ಮೆಟ್ಟಿಲೇರಿದೆ. ಪೋಲಿಸ್ಸ್ರು ರಾಜಿ ಪಂಚಾತಿಕೆ ಮೂಲಕ ಪ್ರಕರಣ ಬಗೆ ಹರಿಸಲು ಪ್ರಯತ್ನಿಸಿದರೂ, ವಧು (bride)  ಮಾತ್ರ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.  ವಿಷಯವನ್ನು ಮುಚ್ಚಿತ್ತು ವರನ ಕಡೆಯವರು ಮೋಸ ಮಾಡಿದ್ದಾರೆ ಎನ್ನುವುದು ವಧುವಿನ ಆರೋಪ.  


ಇದನ್ನೂ ಓದಿ :  Bank union strike : ಬ್ಯಾಂಕ್ ಗ್ರಾಹಕರೆ ಗಮನಿಸಿ : ಎರಡು ದಿನ ಬ್ಯಾಂಕ್‌ ಬಂದ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.